* ಅಜರ್ಬೈಜಾನ್‌ನಲ್ಲಿ ನಡೆಯುತ್ತಿರುವ ಚೆಸ್ ವಿಶ್ವಕಪ್‌ನಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಜ್ಞಾನಂದ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಸೆಮಿಫೈನಲ್‌ನಲ್ಲಿ ಪ್ರಜ್ಞಾನಂದ ಗೆಲುವು ಸಾಧಿಸಿರುವ ಪ್ರಜ್ಞಾನಂದ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಕೇವಲ ಎರಡನೇ ಭಾರತೀಯ ಚೆಸ್ ಪಟು ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ವಿಶ್ವನಾಥನ್ ಆನಂದ್ 2000 ಮತ್ತು 2002ನೇ ಇಸವಿಯಲ್ಲಿ ಎರಡು ಬಾರಿ ಈ ಸಾಧನೆ ಮಾಡಿದ್ದರು. ಸುದೀರ್ಘ ಎರಡು ದಶಕಗಳ ಬಳಿಕ ಈ ಸಾಧನೆ ಈಗ ಮತ್ತೋರ್ವ ಭಾರತೀಯನಿಂದ ಆಗಿದೆ.
* 18ರ ಹರೆಯದ ಪ್ರಜ್ಞಾನಂದ ಅವರ ಈ ಸಾಧನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಐತಿಹಾಸಿಕ ಫೈನಲ್ ಪಂದ್ಯಕ್ಕೆ ಶುಭಹಾರೈಸಲಾಗುತ್ತಿದೆ. ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಕೂಡ ಭಾರತದ ಯುವ ಚೆಸ್ ಆಟಗಾರನ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದು ಫೈನಲ್ ಪಂದ್ಯಕ್ಕಾಗಿ ಶುಭಹಾರೈಸಿದ್ದಾರೆ. ಅಲ್ಲದೆ ಫೈನಲ್ ಪಂದ್ಯದಲ್ಲಿ ಇಡೀ ದೇಶದ ಜನ ತಮ್ಮೊಂದಿಗೆ ಬೆಂಬಲವಾಗಿ ನಿಲ್ಲಲಿದ್ದಾರೆ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

* ಏಷ್ಯಾಕಪ್‌ಗೆ ಟೀಮ್ ಇಂಡಿಯಾ ಆಯ್ಕೆಯ ಬಳಿಕ ಮಾತನಾಡಿರುವ ಸೌರವ್ ಗಂಗೂಲಿ ಪ್ರಸ್ತುತ ಭಾರತ ತಂಡ ವಿಶ್ವಕ್ರಿಕೆಟ್‌ನ ಬಲಿಷ್ಠ ತಂಡಗಳಲ್ಲಿ ಒಂದಾಗಿದೆ ಎಂದಿದ್ದಾರೆ. ಅಲ್ಲದೆ ಭಾರತದ ಬೌಲಿಂಗ್ ವಿಭಾಗದ ಬಗ್ಗೆ ವಿಶೇಷ ಭರವಸೆ ವ್ಯಕ್ತಪಡಿಸಿದ ಅವರು ಇದು ಬಲಿಷ್ಠವಾದ ಬೌಲಿಂಗ್ ಪಡೆ ಎಂದಿದ್ದಾರೆ. ಸ್ಟಾರ್ ಸ್ಪೋರ್ಟ್ಸ್‌ನ ಪ್ರೋಮೋದಲ್ಲಿ ಮಾತನಾಡಿ ಗಂಗೂಲಿ "ಬೌಲಿಂಗ್ ವಿಭಾಗದಲ್ಲಿ ಶಮಿ, ಬೂಮ್ರಾ, ಸಿರಾಜ್ ಮತ್ತು ಪ್ರಸಿದ್ಧ್ ಇದ್ದಾರೆ. ಇದಕ್ಕಿಂತ ಉತ್ತಮವಾದ ಬೌಲಿಂಗ್ ಪಡೆಯನ್ನು ಹೊಂದಲು ಸಾಧ್ಯವಿಲ್ಲ" ಎಂದಿದ್ದಾರೆ.
* ಕನ್ನಡಿಗ ವೇಗಿ ಪ್ರಸಿದ್ಧ್ ಅವರನ್ನು ಮೊದಲ ಬಾರಿಗೆ ನೋಡಿದಾಗಲೇ ಈತ ಖಂಡಿತಾ ಪ್ರಸಿದ್ಧ ಆಟಗಾರನಾಗುತ್ತಾನೆ ಎನ್ನುವ ಬರವಸೆ ತನ್ನಲ್ಲಿ ಮೂಡಿತ್ತು ಎಂದು ಆಕಾಶ್ ಚೋಪ್ರ ಹೇಳಿದ್ದು ಆತ ತನ್ನ ನೆಚ್ಚಿನ ವೇಗದ ಬೌಲರ್ ಎಂದು ಕೊಂಡಾಡಿದ್ದಾರೆ. ಅಲ್ಲದೆ ಬ್ಯಾಟರ್‌ಗಳಿಗೆ ಪ್ರಸಿದ್ಧ್ ಕೃಷ್ಣ ಅವರನ್ನು ಎದುರಿಸಲು ಕಠಿಣವೆನಿಸುವ ಸಂಗತಿ ಯಾವುದು ಎನ್ನುವುದನ್ನು ಕೂಡ ಆಕಾಶ್ ಚೋಪ್ರ ಹೇಳಿದ್ದಾರೆ. "ನನಗೆ ಈ ಕೃಷ್ಣ ಪ್ರಸಿದ್ಧನಾಗುತ್ತಾನೆ ಎನ್ನುವದರಲ್ಲಿ ಅನುಮಾನವೇ ಇಲ್ಲ. ಈತ ನನ್ನ ನೆಚ್ಚಿನ ಬೌಲರ್‌ಗಳಲ್ಲಿ ಒರ್ವ. ಆತನನ್ನು ಮೊದಲ ಬಾರಿಗೆ ನೋಡಿದಾಗಲೇ ಈತನಲ್ಲಿ ವೇಗದ ಬೌಲರ್‌ಗಳಿಗೆ ಬೇಕಿರುವ ಎಲ್ಲಾ ಅಂಶಗಳು ಕೂಡ ಇದೆ ಎಂದು ಹೇಳಿದ್ದೆ" ಎಂದಿದ್ದಾರೆ ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರ.
* ಭಾರತೀಯ ಕ್ರಿಕೆಟ್‌ನ ದಂತಕಥೆ ಸಚಿನ್ ತೆಂಡೂಲ್ಕರ್ ಅವರನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ)ದಿಂದ 'ರಾಷ್ಟ್ರೀಯ ಐಕಾನ್' ಎಂದು ಗುರುತಿಸಲು ನಿರ್ಧರಿಸಲಾಗಿದೆ. ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಸಚಿನ್ ತೆಂಡೂಲ್ಕರ್ ಅವರನ್ನು ಭಾರತೀಯ ಚುನಾವಣಾ ಆಯೋಗದ ರಾಷ್ಟ್ರೀಯ ಐಕಾನ್ ಎಂದು ಗುರುತಿಸಲು ಬುಧವಾರ, ಆಗಸ್ಟ್ 23ರಂದು ನವದೆಹಲಿಯ ರಂಗಭವನ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ.
* ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಅವರು 2023ರ ಏಷ್ಯಾ ಕಪ್ ಮತ್ತು ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡಕ್ಕಾಗಿ ಗರಿಷ್ಠ ಫಾರ್ಮ್‌ಗೆ ಮರಳಲಿ ಎಂದು ಭಾರತದ ಕ್ರಿಕೆಟ್ ಅಭಿಮಾನಿಗಳಂತೆ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಆಶಿಸಿದರು. ಶ್ರೇಯಸ್ ಅಯ್ಯರ್, ಜಸ್ಪ್ರೀತ್ ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ ಅವರೊಂದಿಗೆ ಸುದೀರ್ಘ ಗಾಯದ ಚೇತರಿಸಿಕೊಂಡು ಭಾರತ ತಂಡಕ್ಕೆ ಹಿಂದಿರುಗಿದ ನಂತರ, ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ರಾಹುಲ್ ಸೋಮವಾರ, ಆಗಸ್ಟ್ 21ರಂದು ಏಷ್ಯಾ ಕಪ್ ಭಾರತ ತಂಡದಲ್ಲಿ ಸ್ಥಾನ ಪಡೆದರು.