* ಬುಧವಾರ, ಆಗಸ್ಟ್ 23ರಂದು ಅಜರ್‌ಬೈಜಾನ್‌ನ ಬಾಕುದಲ್ಲಿ ನಡೆದ ಫೆಡರೇಶನ್ ಇಂಟರ್‌ನ್ಯಾಷನಲ್ ಡೆಸ್ ಎಚೆಕ್ಸ್ (FIDE) ಚೆಸ್ ವಿಶ್ವಕಪ್ ಪಂದ್ಯಾವಳಿಯ ಫೈನಲ್‌ನ ಎರಡನೇ ಕ್ಲಾಸಿಕಲ್ ಗೇಮ್‌ನಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಗ್ನಾನಂದ ಅವರು ವಿಶ್ವದ ನಂ.1 ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಮತ್ತೊಮ್ಮೆ ಡ್ರಾ ಸಾಧಿಸಿದರು. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ತೀವ್ರ ಪೈಪೋಟಿಯ 30 ಚಲನೆಗಳ ನಂತರ, ಆರ್ ಪ್ರಗ್ನಾನಂದ ಮತ್ತು ವಿಶ್ವದ ನಂ. 1 ಮ್ಯಾಗ್ನಸ್ ಕಾರ್ಲ್ಸನ್ ಫೈನಲ್‌ನ ಎರಡನೇ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ನಿರ್ಧರಿಸಿದರು.
* ಜಿಂಬಾಬ್ವೆ ಕ್ರಿಕೆಟ್‌ನ ದಿಗ್ಗಜ ಆಟಗಾರ ಹೀತ್ ಸ್ಟ್ರೀಕ್ ತಮ್ಮ 49ರ ಹರೆಯದಲ್ಲಿ ನಿಧನರಾಗಿದ್ದಾರೆ ಎಂದು ಸುದ್ದಿ ಹರಡಿತ್ತು. ಆದರೆ ಸ್ವತಃ ಹೀತ್ ಸ್ಟ್ರೀಕ್ ಅವರು ತಮ್ಮ ಸಹ ಆಟಗಾರನಿಗೆ ಸಂದೇಶ ಕಳುಹಿಸಿ ಈ ಸುದ್ದು ನಿಜವಲ್ಲ ಎಂದುದ್ದಾರೆ ಎಂದು ವರದಿಯಾಗಿದೆ. ಇದಕ್ಕೂ ಮುನ್ನ ಹೀತ್ ಸ್ಟ್ರೀಕ್ ಅವರ ಸಹ ಆಟಗಾರನಾಗಿದ್ದ ಹೆನ್ರಿ ಒಲೊಂಗಾ ಅವರು ಹೀತ್ ಸ್ಟ್ರೀಕ್ ಸಾವಿನ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದರು. ಆದರೆ ಇದೀಗ ಟ್ವೀಟ್ ಡಿಲೀಟ್ ಮಾಡಿದ್ದು ಹೀತ್ ಸ್ಟ್ರೀಕ್ ಅವರಿಂದ ಬಂದಿರುವ ಸಂದೇಶವನ್ನು ಹಂಚಿಕೊಂಡಿದ್ದಾರೆ.

* 49ರ ಹರೆಯದ ಹೀತ್ ಸ್ಟ್ರೀಕ್ ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಈ ಬಗ್ಗೆ ಹೀತ್ ಸ್ಟ್ರೀಕ್ "ಈ ಸುದ್ದು ಕೇವಲ ಗಾಳಿ ಸುದ್ದು ಮಾತ್ರವಲ್ಲ ಸುಳ್ಳು ಸುದ್ದಿ. ನಾನು ಆರೋಗ್ಯವಾಗಿ ಜೀವಂತವಾಗಿದ್ದೇನೆ. ನಮ್ಮ ಸಾಮಾಜಿಕ ಮಾಧ್ಯಮದ ಈ ಯುಗದಲ್ಲಿ ಯಾರೋ ಒಬ್ಬರು ಹೇಳಿದ ಮಾತನ್ನು ಪರಿಶೀಲಿಸದೆ ಹರಡಬಹುದು ಎಂದು ತಿಳಿದು ನಾನು ತುಂಬಾ ಬೇಸರಗೊಂಡಿದ್ದೇನೆ" ಎಂದು ಹೀತ್ ಸ್ಟ್ರೀಕ್ ಹೇಳಿರುವುದಾಗಿ ಮಿಡ್‌ಡೇ ವರದಿ ಮಾಡಿದೆ.
* ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆನಿ(ಎನ್‌ಸಿಎ)ಯಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ರಾಹುಲ್ ದ್ರಾವಿಡ್ ನೇತೃತ್ವದ ಕೋಚಿಂಗ್ ತಂಡದ ಮಾರ್ಗದರ್ಶನದಲ್ಲಿ ಭಾರತ ತಂಡದ ಆಟಗಾರರು ಗುರುವಾರದಿಂದ ಅಭ್ಯಾಸವನ್ನು ಆರಂಭಿಸಲಿದ್ದಾರೆ. ಐರ್ಲೆಂಡ್ ಪ್ರವಾಸದಲ್ಲಿರುವ ಏಷ್ಯಾ ಕಪ್ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಆಟಗಾರರಾದ ಪ್ರಸಿದ್ಧ್ ಕೃಷ್ಣ, ಜಸ್ಸಪ್ರೀತ್ ಬೂಮ್ರಾ ಹಾಗೂ ಸಂಜು ಸ್ಯಾಮ್ಸನ್ ಮುಂದಿನ ಮೂರು ದಿನಗಳಲ್ಲಿ ಈ ಶಿಬಿರವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ.
* ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರ ಶೋಚನೀಯ ಆಟ 2023ರಲ್ಲಿ ಮುಂದುವರಿದಿದೆ. ಈ ವರ್ಷ ಬಹುತೇಕ ಸೋಲಿನ ಮೇಲೆ ಸೋಲು ಕಾಣುತ್ತಿರುವ ಸಿಂಧು ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್‌ನ ಎರಡನೇ ಸುತ್ತಿನಲ್ಲಿ ತನ್ನ ಹಳೆಯ ಎದುರಾಳಿ ನೊಜೊಮಿ ಒಕುಹರಾ ವಿರುದ್ಧ ಸೋಲು ಅನುಭವಿಸಿದ್ದಾರೆ. ಮೊದಲ ಸುತ್ತಿನಲ್ಲಿ ಬೈ ಪಡೆದು ಎರಡನೇ ಸುತ್ತಿಗೆ ಪ್ರವೇಶಿಸಿದ್ದ ಸಿಂಧು ಈ ಹಂತದಲ್ಲಿ 14-21 14-21 ಅಂತರದಿಂದ ಸೋಲು ಕಂಡಿದ್ದಾರೆ.
* 2023ರ ಏಕದಿನ ವಿಶ್ವಕಪ್ ಪಂದ್ಯಾವಳಿಯು ಭಾರತದಲ್ಲಿ ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆಯಲಿದ್ದು, ಇದಕ್ಕಾಗಿ ಎಲ್ಲಾ ಹತ್ತು ತಂಡಗಳು ಭರ್ಜರಿ ತಯಾರಿ ಆರಂಭಿಸಿವೆ. ಅದರಲ್ಲೂ ನ್ಯೂಜಿಲೆಂಡ್ ತಂಡವು ತನ್ನ ಕೋಚಿಂಗ್ ಸಿಬ್ಬಂದಿಯನ್ನು ಬಲಗೊಳಿಸುತ್ತಿದೆ. ಇಂಗ್ಲೆಂಡ್‌ನ ಮಾಜಿ ವಿಕೆಟ್‌ಕೀಪರ್ ಜೇಮ್ಸ್ ಫೋಸ್ಟರ್ ಅವರು ನ್ಯೂಜಿಲೆಂಡ್ ತಂಡದ ವಿಶ್ವಕಪ್ ಸಿಬ್ಬಂದಿಗೆ ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದಾರೆ.
* ಬುಧವಾರ, ಆಗಸ್ಟ್ 23ರಂದು ಚಂದ್ರನ ಮೇಲೆ ಭಾರತದ ಐತಿಹಾಸಿಕ ಚಂದ್ರಯಾನ 3ರ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಅನ್ನು ವೀಕ್ಷಿಸಲು ಭಾರತ ಕ್ರಿಕೆಟ್ ತಂಡವು ಐರ್ಲೆಂಡ್‌ನ ಡಬ್ಲಿನ್‌ನ ಕ್ರಿಕೆಟ್ ಮೈದಾನದಲ್ಲಿ ಟಿವಿಗೆ ಅಂಟಿಕೊಂಡಿತ್ತು. ಭಾರತ ತಂಡದ ನಾಯಕ ಜಸ್ಪ್ರೀತ್ ಬುಮ್ರಾ, ಸಹ ಆಟಗಾರರು ಮತ್ತು ಭಾರತೀಯ ಕ್ರಿಕೆಟ್ ತಂಡದ ಸಹಾಯಕ ಸಿಬ್ಬಂದಿಗಳು ಐರ್ಲೆಂಡ್ ವಿರುದ್ಧದ 3ನೇ ಮತ್ತು ಅಂತಿಮ ಟಿ20 ಪಂದ್ಯಕ್ಕೂ ಮುನ್ನ ಯಶಸ್ವಿ ಚಂದ್ರಯಾನ 3 ಲ್ಯಾಂಡಿಂಗ್ ವೀಕ್ಷಿಸಿ ಸಂಭ್ರಮಿಸಿದರು.