For Quick Alerts
ALLOW NOTIFICATIONS  
For Daily Alerts

ಆಗಸ್ಟ್ 24: ಚೆಸ್ ವಿಶ್ವಕಪ್‌ ಫೈನಲ್‌ನಲ್ಲಿ ಪ್ರಜ್ಞಾನಂದಾಗೆ ಸೋಲು; ಇನ್ಫೋಸಿಸ್‌ಗೆ ನಡಾಲ್ ರಾಯಭಾರಿ: ಕ್ರೀಡಾ ಲೋಕದ ಇಂದಿನ ಸುದ್ದಿ

* FIDE ವಿಶ್ವಕಪ್ ಫೈನಲ್ ಟೈಬ್ರೇಕರ್‌ನಲ್ಲಿ ಭಾರತದ ಪ್ರಜ್ಞಾನಂದ ವಿಶ್ವದ ನಂಬರ್ 1 ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಸೋಲು ಕಂಡಿದ್ದಾರೆ. ಈ ಮೂಲಕ ನಾರ್ವೆಯ ದಿಗ್ಗಜ ಆಟಗಾರ ಮತ್ತೊಮ್ಮೆ ಚಾಂಪಿಯನ್ ಎನಿಸಿಕೊಂಡಿದ್ದಾರೆ. ಚಾಂಪಿಯನ್ ಪಟ್ಟವನ್ನು ಅಲಂಕರಿಸುವವರು ಯಾರು ಎಂದು ನಿರ್ಧರಿಸುವ ಈ ಟೈಬ್ರೇಕರ್ ತೀವ್ರ ಪೈಪೊಟಿಯಿಂದ ಕೂಡಿತ್ತು. ಈ ನಿರ್ಣಾಯಕ ಸೆಣೆಸಾಟದಲ್ಲಿ ಚೆಸ್‌ನ ಸಾರ್ವಕಾಲಿಕ ಶ್ರೇಷ್ಠ ಎನಿಸಿಕೊಳ್ಳುವ ಕಾರ್ಲ್ಸನ್ ತನ್ನ ಅನುಭವದ ಆಟವನ್ನು ಆಡುವ ಮೂಲಕ ಭಾರತದ 18ರ ಹರೆಯದ ಯುವ ಆಟಗಾರನಿಗೆ ಸೋಲುಣಿಸುವಲ್ಲಿ ಯಶಸ್ವಿಯಾಗಿದ್ದಾರೆ.

* ಐರ್ಲಂಡ್ ವಿರುದ್ಧದ ಟಿ20 ಸರಣಿಯ ಕೊನೆಯ ಪಂದ್ಯ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದಾಯಿತು. ಹೀಗಾಗಿ ಟೀಮ್ ಇಂಡಿಯಾ ಈ ಸರಣಿಯನ್ನು 2-0 ಅಂತರದಿಂದ ತನ್ನ ವಶಕ್ಕೆ ಪಡೆದುಕೊಂಡಿದೆ. ಕೊನೆಯ ಪಂದ್ಯ ಮಳೆಗೆ ಆಹುತಿಯಾದರೂ ಕಮ್‌ಬ್ಯಾಕ್ ಮಾಡಿದ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಲ್ಲದೆ ನಾಯಕನಾಗಿಯೂ ಮಿಂಚಿದ ಜಸ್ಪ್ರೀತ್ ಬೂಮ್ರಾ ಹರ್ಷ ವ್ಯಕ್ತಪಡಿಸಿದ್ದಾರೆ. "ಯುವ ಆಟಗಾರರ ಪಡೆಯನ್ನು ಮುನ್ನಡೆಸುವುದು ನಿಜಕ್ಕೂ ಸಾಕಷ್ಟು ಆನಂದ ನೀಡುತ್ತದೆ. ಎಲ್ಲರೂ ಕೂಡ ಸಾಕಷ್ಟು ಹಸಿವಿನಿಂದ ಕೂಡಿದ್ದಾರೆ. ಆಟ ಇನ್ನು ಆರಂಭವಾಬೇಕಿದ್ದರೂ, ಹವಾಮಾನ ಪೂರಕವಾಗಿಲ್ಲದಿದ್ದರೂ ಎಲ್ಲರಿಗೂ ಆಡುವ ಕಾತುರವಿತ್ತು. ಅದು ಬಹಳ ಸಕಾರಾತ್ಕವಾದ ಅಂಶ" ಎಂದಿದ್ದಾರೆ ಜಸ್ಪ್ರೀತ್ ಬೂಮ್ರಾ.

August 24, what happened in sports World: Todays Top sports news and headlines

* ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯ ಮಳೆಯಿಂದ ರದ್ದಾಗುವ ಮೂಲಕ ಟೀಮ್ ಇಂಡಿಯಾ ಈ ಸರಣಿಯನ್ನು 2-0 ಅಂತರದಿಂದ ತನ್ನ ವಶಕ್ಕೆ ಪಡೆದುಕೊಂಡಿದೆ. ಇನ್ನು ಈ ಸರಣಿಯಲ್ಲಿ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡು ಗಮನಸೆಳೆದ ಆಟಗಾರ ಎಂದರೆ ಅದು ರಿಂಕು ಸಿಂಗ್. ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಮಿಂಚಿದ್ದ ರಿಂಕು ಭಾರತದ ಪರವಾಗಿ ಕಣಕ್ಕಿಳದ ಚೊಚ್ಚಲ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದರು. ಹೀಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ತಮ್ಮದಾಗಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮಾಜಿ ಕ್ರಿಕಟಿಗ ಸಬಾ ಕರೀಮ್ ರಿಂಕು ಪ್ರದರ್ಶನದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

* ಡೆನ್ಮಾರ್ಕ್‌ನಲ್ಲಿ ನಡೆಯುತ್ತಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‌ ನಲ್ಲಿ ಭಾರತದ ಪುರುಷರ ಜೋಡಿ ಪ್ರೀ ಕ್ವಾರ್ಟರ್ ಫೈನಲ್ ಹಂತವನ್ನು ತಲುಪಿದೆ. ಬುಧವಾರ ನಡೆದ ಪುರುಷರ ಡಬಲ್ಸ್‌ ನಲ್ಲಿ ಸಾತ್ವಿಕ್ ಸಾಯಿರಾಜ್ ರಣಕಿ ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಸೊಗಸಾದ ಪ್ರದರ್ಶನ ನೀಡಿ ಜಯ ಸಾಧಿಸಿದರು. ರಾಯಲ್ ಅರೇನಾದಲ್ಲಿ ನಡೆದ ಪಂದ್ಯದಲ್ಲಿ ಭಾರತದ ಜೋಡಿ 21-16, 21-9 ರಿಂದ ಆಸ್ಟ್ರೇಲಿಯಾದ ಜೋಡಿ ಜೆ ಹೋಯ್ ಚೂ ಹಾಗೂ ಮಿನ್ ಚುಯಿನ್ ಲಿನ್‌ ವಿರುದ್ಧ ಜಯ ಸಾಧಿಸಿತು. ಎರಡು ನೇರ ಗೇಮ್‌ಗಳಲ್ಲಿ ಜಯ ಸಾಧಿಸಿದ ಭಾರತದ ಜೋಡಿ ಅಬ್ಬರಿಸಿತು.

* ಭಾರತ ಕ್ರಿಕೆಟ್ ತಂಡದ 2023ರ ಏಷ್ಯಾ ಕಪ್ ಮತ್ತು ಏಕದಿನ ವಿಶ್ವಕಪ್ ಪಂದ್ಯಾವಳಿಗಳಲ್ಲಿ ತೊಡಗಿಸಿಕೊಳ್ಳಲು ಬಿಡುವಿಲ್ಲದ ವೇಳಾಪಟ್ಟಿಗೆ ಸಜ್ಜಾಗುತ್ತಿರುವ ವಿರಾಟ್ ಕೊಹ್ಲಿ ಯೋ-ಯೋ ಟೆಸ್ಟ್ ಪಾಸ್ ಮಾಡಿದ್ದಾರೆ. ಇದನ್ನು ಸ್ವತಃ ವಿರಾಟ್ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದು, ಸ್ಟಾರ್ ಬ್ಯಾಟರ್ ತಮ್ಮ ಫಿಟ್‌ನೆಸ್ ಪರೀಕ್ಷೆಯ ನಂತರ ಮೈದಾನದಲ್ಲಿ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ ವಿರಾಟ್ ಕೊಹ್ಲಿ ತಮ್ಮ ಯೋ-ಯೋ ಟೆಸ್ಟ್ ಸ್ಕೋರ್ 17.2 ಎಂದು ಬಹಿರಂಗಪಡಿಸಿದ್ದಾರೆ.

* ನಾಯಕನಾಗಿ ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ದುಕೊಟ್ಟ ಭಾರತದ ಮಾಜಿ ನಾಯಕ ಕಪಿಲ್ ದೇವ್ ಅವರು ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಫಿಟ್ನೆಸ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಕಪಿಲ್ ದೇವ್ ಪ್ರಕಾರ, 2023ರ ಐಸಿಸಿ ಏಕದಿನ ವಿಶ್ವಕಪ್ ಮುಂದಿರುವಾಗ ಈ ಇಬ್ಬರು ಕ್ರಿಕೆಟಿಗರು ಗಾಯಗೊಂಡರೆ, ನಂತರ ಭಾರತ ತಂಡದ ಯೋಜನೆಗಳು ಅಪಾಯಕ್ಕೆ ಸಿಲುಕುತ್ತವೆ. ಇವರಿಬ್ಬರು ವಿಶ್ವಕಪ್‌ನ ಎಲ್ಲಾ ಪಂದ್ಯಗಳನ್ನು ಆಡಲು ಸಾಧ್ಯವಾಗದಿದ್ದರೆ, ಅದು ಇತರರಿಗೆ ಅನ್ಯಾಯವಾಗುತ್ತದೆ ಎಂದು ಹೇಳಿದರು.

* ಭಾರತದ ಐಟಿ ದಿಗ್ಗಜ ಇನ್ಫೋಸಿಸ್ ಸಂಸ್ಥೆಯು ಗುರುವಾರ, ಆಗಸ್ಟ್ 24ರಂದು ಖ್ಯಾತ ಟೆನ್ನಿಸ್ ತಾರೆ ರಾಫೆಲ್ ನಡಾಲ್ ಅವರನ್ನು ತನ್ನ ಜಾಗತಿಕ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿದೆ. ಸಂಸ್ಥೆಯು ಚಾಂಪಿಯನ್ ಟೆನ್ನಿಸ್ ಆಟಗಾರನೊಂದಿಗೆ ಮೂರು ವರ್ಷಗಳ ಪಾಲುದಾರಿಕೆಗೆ ಒಪ್ಪಂದ ಮಾಡಿಕೊಂಡಿದೆ. ಇನ್ಫೋಸಿಸ್ ಸಂಸ್ಥೆಯ ಹೇಳಿಕೆಯಲ್ಲಿ, ಇನ್ಫೋಸಿಸ್ ಸಿಇಒ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಸಲೀಲ್ ಪರೇಖ್, "ವಿಶ್ವದ ಅತ್ಯಂತ ಗೌರವಾನ್ವಿತ ಚಾಂಪಿಯನ್ ಅಥ್ಲೀಟ್‌ಗಳಲ್ಲಿ ಒಬ್ಬರಾದ ರಾಫೆಲ್ ನಡಾಲ್ ಅವರನ್ನು ಇನ್ಫೋಸಿಸ್‌ನ ರಾಯಭಾರಿಯಾಗಿ ಸ್ವಾಗತಿಸಲು ಗೌರವವೆನಿಸುತ್ತದೆ," ಎಂದು ಹೇಳಿದರು.

Story first published: Thursday, August 24, 2023, 19:59 [IST]
Other articles published on Aug 24, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+