* ಹಂಗೇರಿಯ ಬುಡಪೆಸ್ಟ್‌ನಲ್ಲಿ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಕ್ರೀಡಾಕೂಟ ನಡೆಯುತ್ತಿದೆ. ಈ ಕ್ರೀಡಾಕೂಟದಲ್ಲಿ ಭಾರತದ 4*400 ರಿಲೇ ತಂಡ ನೂತನ ಏಷ್ಯನ್ ದಾಖಲೆ ಬರೆದಿದೆ. ತಮ್ಮ ಹೀಟ್ ವಿಭಾಗದಲ್ಲಿ ಭಾರತ ಎರಡನೇ ಸ್ಥಾನಿಯಾಗಿ ಫೈನಲ್‌ಗೆ ಪ್ರವೇಶಿಸುವ ಮೂಲಕ ಈ ಸಾಧನೆಗೈದಿದೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಭಾರತದ ಪುರುಷರ 4x400 ಮೀಟರ್ ರಿಲೇ ತಂಡದ ರೋಚಕ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಬಲಿಷ್ಠ ಯುಎಸ್‌ಎ ಜೊತೆಗೆ ಭಾರತ ಹೀಟ್ 1ರಲ್ಲಿ ಸ್ಪರ್ಧಿಸಿತ್ತು.
ಈ ಸ್ಪರ್ಧೆಯಲ್ಲಿ ಭಾರತ ತಂಡದ ಪರವಾಗಿ ಮುಹಮ್ಮದ್ ಅನಾಸ್ ಯಾಹಿಯಾ ಅವರು ಓಟ ಆರಂಭಿಸಿದರು ಮೊದಲ ರನ್‌ನಲ್ಲಿ ಆರನೇ ಸ್ಥಾನದಲ್ಲಿತ್ತು ಭಾರತ. ಆದರೆ ನಂತರ ಅಮೋಜ್ ಜೇಕಬ್ ಅಮೋಘ ಓಟದೊಂದಿಗೆ ಭಾರತ ಎರಡನೇ ಸ್ಥಾನವನ್ನು ಪಡೆದುಕೊಂಡಿತು. ನಂತರ ಮುಹಮ್ಮದ್ ಅಜ್ಮಲ್ ವರಿಯತ್ತೋಡಿ ಮತ್ತು ರಾಜೇಶ್ ರಮೇಶ್ ಈ ಅದ್ಭುತ ಮುನ್ನಡೆಯನ್ನು ಉಳಿಸಿಕೊಂಡಿದ್ದಲ್ಲದೆ 2:59.05 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಏಷ್ಯನ್ ದಾಖಲೆಯನ್ನು ಧ್ವಂಸಗೊಳಿಸಿದರು. ಇದಕ್ಕೂ ಮುನ್ನ ಈ ವಿಭಾಗದಲ್ಲಿ ಏಷ್ಯಾದ ದಾಖಲೆ ಜಪಾನ್ ಹೆಸರಿನಲ್ಲಿದ್ದು 2:59.51 ಸೆಕೆಂಡ್‌ನಲ್ಲಿ ದಾಖಲೆ ಬರೆದಿತ್ತು.

* ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಶಟ್ಲರ್ ಎಚ್ಎಸ್ ಪ್ರಣಯ್ ಸೆಮಿಫೈನಲ್ ನಲ್ಲಿ ಸೋಲು ಕಂಡಿದ್ದಾರೆ, ಆ ಮೂಲಕ ಕಂಚಿನ ಪದಕ ಗೆದ್ದಿದ್ದಾರೆ. ವಿಶ್ವ ಚಾಂಪಿಯನ್ ಶಿಪ್ ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ಪದಕ ಗೆದ್ದ ಭಾರತದ 5ನೇ ಷಟ್ಲರ್ ಎಂಬ ಹೆಗ್ಗಳಿಕಗೆ ಇವರು ಪಾತ್ರರಾಗಿದ್ದಾರೆ. ಶನಿವಾರ (ಆ 26) ನಡೆದ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಪ್ರಣಯ್ 21-18, 13-21, 14-21 ರಿಂದ ಥಾಯ್ಲೆಂಡ್ ದೇಶದ ಕುನ್ಲವುಟ್ ವಿತಿಸರನ್ ಅವರ ವಿರುದ್ಧ ಸೋಲು ಕಂಡರು. ಪ್ರಣಯ್ ಮೊದಲ ಗೇಮ್ ಅನ್ನು 21-18 ಅಂತರದಿಂದ ಗೆದ್ದರು, ಆದರೆ ವಿತಿಸರನ್ ಕೊನೆಯ ಎರಡು ಗೇಂಗಳನ್ನು 13-21, 14-21 ರಿಂದ ಗೆದ್ದು ಫೈನಲ್ ಪ್ರವೇಶಿಸಿದರು.
* ಏಷ್ಯಾ ಕಪ್ ಹಾಗೂ ವಿಶ್ವಕಪ್ ಟೂರ್ನಿ ಸನಿಹದಲ್ಲಿರುವಾಗ ಪಾಕಿಸ್ತಾನ ಕ್ರಿಕೆಟ್ ತಂಡ ದೊಡ್ಡ ಸಾಧನೆಯೊಂದು ಮಾಡಿದೆ. ಏಕದಿನ ಮಾದರಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಈಗ ವಿಶ್ವದ ನಂಬರ್ 1 ತಂಡ ಎನಿಸಿಕೊಂಡಿದೆ. ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಕಿಸ್ತಾನ 3-0 ಅಂತರದಿಂದ ಗೆಲುವು ಸಾಧಿಸಿದ್ದು ಈ ವೈಟ್‌ವಾಶ್ ಗೆಲುವಿನೊಂದಿಗೆ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಹೊರಹೊಮ್ಮಿದೆ.
* ಏಷ್ಯಾಕಪ್ ಟೂರ್ನಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು ಬುಧವಾರ ಆಗಸ್ಟ್ 30ರಂದು ಪಾಕಿಸ್ತಾನ ಹಾಗೂ ನೇಪಾಳ ತಂಡಗಳು ಮುಖಾಮುಖಿಯಾಗುವ ಮೂಲಕ ಈ ಟೂರ್ನಿಗೆ ಚಾಲನೆ ದೊರೆಯಲಿದೆ. ಪಾಕಿಸ್ತಾನ ಹಾಗೂ ಶ್ರೀಲಂಕಾದ ಜಂಟಿ ಆಯೋಜನೆಯಲ್ಲಿ ಈ ಟೂರ್ನಿ ನಡೆಯಲಿದೆ. ಪಾಕಿಸ್ತಾನ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದ ಹಿನ್ನೆಲೆಯಲ್ಲಿ ಟೂರ್ನಿಯಲ್ಲಿ ಭಾಗವಹಿಸುವ ಎಲ್ಲಾ ಮಂಡಳಿಗಳ ಪ್ರತಿನಿಧಿಗಳಿಗೆ ಔತಣಕೂಟವನ್ನು ಆಯೋಜನೆ ಮಾಡಲಾಗಿದ್ದು ಬಿಸಿಸಿಐ ಅಧ್ಯಕ್ಷ ಅಧ್ಯಕ್ಷ ರೋಜರ್ ಬಿನ್ನಿ ಹಾಗೂ ಉಪಾಧ್ಯಕ್ಷ ರಾಜೀವ್ ಶುಕ್ಲ ಈ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ತೆರಳಲಿದ್ದಾರೆ.
* ಏಷ್ಯಾಕಪ್ ಟೂರ್ನಿಯ ಆರಂಭಕ್ಕೆ ಇದೀಗ ಕ್ಷಣಗಣನೆ ಆರಂಭವಾಗಿದೆ. ಮುಂದಿನ ಬುಧವಾರ ಪಾಕಿಸ್ತಾನ ಹಾಗೂ ನೇಪಾಳ ತಂಡಗಳು ಸೆಣಸಾಡುವ ಮೂಲಕ ಈ ಟೂರ್ನಿಗೆ ಚಾಲನೆ ದೊರೆಯಲಿದೆ. ಆದರೆ ಟೂರ್ನಿಯ ಆರಂಭಕ್ಕೆ ಕೇವಲ ಮೂರು ದಿನಗಳಿರುವಾಗ ಪಾಕಿಸ್ತಾನ ತನ್ನ ತಂಡದಲ್ಲಿ ಪ್ರಮುಖ ಬದಲಾವಣೆಯೊಂದನ್ನು ಮಾಡಿದೆ. ಮಧ್ಯಮ ಕ್ರಮಾಂಕದ ಆಟಗಾರ ಸೌದ್ ಶಕೀಲ್ ಅವರನ್ನು ಪಾಕಿಸ್ತಾನ ತಂಡ 17 ಸದಸ್ಯರ ಬಳಗಕ್ಕೆ ಸೇರ್ಪಡೆಗೊಳಿಸಿದೆ. ಇದಕ್ಕೂ ಹಿಂದೆ ಪ್ರಕಟಿಸಿದ್ದ ತಂಡದಲ್ಲಿ ಸೌದ್ ಶಕೀಲ್ ಸ್ಥಾನವನ್ನು ಪಡೆದುಕೊಂಡಿರಲಿಲ್ಲ. ಇದು ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು. ಆದರೆ ಇದೀಗ ಅವರಿಗೆ ತಂಡದಲ್ಲಿ ಅವಕಾಶ ದೊರೆತಿದೆ.
* ಏಷ್ಯಾಕಪ್ ಟೂರ್ನಿಯ ಆರಂಭಕ್ಕೆ ಎರಡು ದಿನಗಳು ಮಾತ್ರವೇ ಬಾಕಿಯಿರುವಾಗ ಅಫ್ಘಾನಿಸ್ತಾನ 17 ಆಟಗಾರರ ಬಲಿಷ್ಠ ಸ್ಕ್ವಾಡ್ ಪ್ರಕಟಿಸಿದೆ. ಈ ತಂಡಕ್ಕೆ ರಾಷ್ಟ್ರೀಯ ಟಿ20 ತಂಡದ ಪ್ರಮುಖ ಸದಸ್ಯ ಕರೀಮ್ ಜನತ್ ಏಕದಿನ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. 2017ರಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಕರೀಮ್ ಅದಾದ ಬಳಿಕ ಏಕದಿನ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿರಲಿಲ್ಲ. ಅಫ್ಘಾನಿಸ್ತಾನ ತಂಡ ಹೀಗಿದೆ: ಹಶ್ಮತುಲ್ಲಾ ಶಾಹಿದಿ (ನಾಯಕ), ಇಬ್ರಾಹಿಂ ಝದ್ರಾನ್, ರಿಯಾಜ್ ಹಸನ್, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ನಜೀಬುಲ್ಲಾ ಝದ್ರಾನ್, ರಶೀದ್ ಖಾನ್, ಇಕ್ರಮ್ ಅಲಿ ಖಿಲ್, ಕರೀಂ ಜನತ್, ಗುಲ್ಬದಿನ್ ನೈಬ್, ಮೊಹಮ್ಮದ್ ನಬಿ, ಮುಜೀಬ್ ಉರ್ ರಹಮಾನ್, ಫಜಲ್ಹಾಕ್ ಶರಫ್, ನೂರಫ್, ನೂಕಿ, ಅಬ್ದುಲ್ ರೆಹಮಾನ್, ಮೊಹಮ್ಮದ್ ಸಲೀಂ