ಆಗಸ್ಟ್ 29: ಮೊದಲ ಎರಡು ಪಂದ್ಯಗಳಿಗೆ ರಾಹುಲ್ ಅಲಭ್ಯ: ಕ್ರೀಡಾ ಲೋಕದ ಇಂದಿನ ಸುದ್ದಿ
* ಯುಎಸ್ ಓಪನ್ 2023ರ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ 4ನೇ ಶ್ರೇಯಾಂಕದ ಹೋಲ್ಗರ್ ರೂನ್ ಆಘಾತಕಾರಿಯಾಗಿ ಸೋತು ನಿರ್ಗಮಿಸಿದ್ದಾರೆ. ಸ್ಪೇನ್‌ನ ರಾಬರ್ಟೊ ಕಾರ್ಬಲ್ಸ್ ಬೇನಾ ವಿರುದ್ಧ ರೂನ್ ಸೋಲು ಕಂಡಿದ್ದು ಅಚ್ಚರಿಯ ಫಲಿತಾಂಶಕ್ಕೆ ಕಾರಣವಾಗಿದ್ದಾರೆ. ಎರಡು ಗಂಟೆ 42 ನಿಮಿಷಗಳಲ್ಲಿ ನಡೆದ ಈ ಸೆಣೆಸಾಟದಲ್ಲಿ ಸ್ಪೇನ್ ಆಟಗಾರ 6-3, 4-6, 6-3, 6-2 ಸೆಟ್‌ಗಳ ಅಂತರದಿಂದ ಗೆದ್ದಿದ್ದಾರೆ. ಎಟಿಪಿ ಸರ್ಕ್ಯೂಟ್‌ನಲ್ಲಿ ಬೇನಾ ಅಗ್ರ 10 ಶ್ರೇಯಾಂಕಿತರ ವಿರುದ್ಧ ಗೆಲುವು ಸಾಧಿಸಿರುವುದು ಇದೇ ಮೊದಲು.
* 2023ನೇ ಆವೃತ್ತಿಯ ಮಹಾರಾಜ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯ ಮಾತ್ರವೇ ಬಾಕಿಯಿದ್ದು ಇಂದು ಆಗಸ್ಟ್ 29ರಂದು ಫೈನಲ್ ಸೆಣೆಸಾಟ ನಡೆಯಲಿದೆ. ಸೆಮೀಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಗೆಲುವು ಸಾಧಿಸಿದ ಹುಬ್ಬಳ್ಳಿ ಟೈಗರ್ಸ್ ಹಾಗೂ ಮೈಸೂರ್ ವಾರಿಯರ್ಸ್ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಿದೆ.

* ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಆಗಸ್ಟ್ 30 ರಿಂದ ಆರಂಭವಾಗಲಿದೆ. 7 ಬಾರಿಯ ಚಾಂಪಿಯನ್ ಭಾರತ ಮತ್ತು 2 ಬಾರಿ ವಿಜೇತ ಪಾಕಿಸ್ತಾನ ತಂಡಗಳು ಪ್ರಶಸ್ತಿ ಮೇಲೆ ಕಣ್ಣು ನೆಟ್ಟಿವೆ. 2019ರ ವಿಶ್ವಕಪ್ ನಿಂದ ಏಕದಿನ ಪಂದ್ಯಗಳನ್ನು ಗೆಲ್ಲುವಲ್ಲಿ ಭಾರತ ಅತ್ಯಂತ ಯಶಸ್ವಿ ತಂಡ. ಪಾಕಿಸ್ತಾನವು ತನ್ನ ಮಾರಕ ವೇಗದ ಬೌಲರ್ ಗಳೊಂದಿಗೆ ಪ್ರಬಲ ಅಗ್ರ ಕ್ರಮಾಂಕ ಹೊಂದಿದೆ.
* ಇಂದು ಆಗಸ್ಟ್ 29, ದೇಶಾದ್ಯಂತ ರಾಷ್ಟ್ರೀಯ ಕ್ರೀಡಾದಿನವನ್ನು ಸಂಭ್ರಮ ಮನೆಮಾಡಿದೆ. ರಾಷ್ಟ್ರ ಕಂಡ ಸರ್ವಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬರಾಗಿರುವ ಹಾಕಿ ದಿಗ್ಗಜ ಮೇಜರ್ ಧ್ಯಾನ್‌ಚಂದ್ ಅವರ ಹುಟ್ಟಿದ ದಿನವನ್ನು ರಾಷ್ಟ್ರೀಯ ಕ್ರೀಡಾದಿನವನ್ನಾಗಿ ಆಚರಿಸಲಾಗುತ್ತಿದ್ದು ಈ ಮೂಲಕ ದಿಗ್ಗಜ ಕ್ರೀಡಾಪಟುವಿನ ನೆನಪಿನಲ್ಲಿ ಕ್ರೀಡಾ ಕ್ಷೇತ್ರಕ್ಕೆ ಮತ್ತಷ್ಟು ಉತ್ತೇಜನ ನೀಡಲಾಗುತ್ತಿದೆ.
* ಟೆನಿಸ್ ದಿಗ್ಗಜ ನೊವಾಕ್ ಜೊಕೊವಿಕ್ ಯುಎಸ್ ಓಪನ್‌ಗೆ ತಮ್ಮ ಆಗಮನವನ್ನು ಭರ್ಜರಿಯಾಗಿ ಸಾರಿದ್ದಾರೆ. ಆರ್ಥರ್ ಆಶ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಫ್ರಾನ್ಸ್‌ನ ಅಲೆಗ್ಸಾಂಡರ್ ಮುಲ್ಲರ್ ಅವರನ್ನು ಎದುರಿಸಿದ್ದು ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಗೆಲುವಿನಿಂದಿಗೆ ಎಟಿಪಿ ಶ್ರೇಯಾಂಕಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರ ಸ್ಥಾನವನ್ನು ಗಳಿಸಿದ್ದಾರೆ ಸರ್ಬಿಯಾದ ದಿಗ್ಗಜ ಟೆನಿಸಿಗ.
* ಏಷ್ಯಾಕಪ್, ಏಕದಿನ ವಿಶ್ವಕಪ್‌ಗಾಗಿ ಭಾರತ ತಂಡ ಭರ್ಜರಿಯಾಗಿ ತಯಾರಿ ಮಾಡಿಕೊಳ್ಳುತ್ತಿದೆ. ಬೆಂಗಳೂರಿನಲ್ಲಿ ಕಠಿಣ ತರಬೇತಿ ಶಿಬಿರದಲ್ಲಿ ಭಾಗವಹಿಸಿರುವ ಭಾರತ ತಂಡ ಶ್ರೀಲಂಕಾಗೆ ತೆರಳಲಿದ್ದು, ಸೆಪ್ಟೆಂಬರ್ 2ರಂದು ಏಷ್ಯಾಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ವಿರುದ್ಧ ಆಡಲಿದೆ. ಏಷ್ಯಾಕಪ್ ಆರಂಭದ ಬೆನ್ನಲ್ಲೇ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿರುವ ದಕ್ಷಿಣ ಆಫ್ರಿಕಾ ಮಾಜಿ ವೇಗಿ ಮಖಯಾ ಎನ್ಟಿನಿ ಬೌಲರ್ ಗಳಿಗೆ ಎಚ್ಚರಿಕೆ ನೀಡಿದ್ದಾರೆ. ಕೊಹ್ಲಿಯನ್ನು ಎದುರಿಸುವ ಬಗ್ಗೆ ಮಾತನಾಡಿರುವ ಮಖಯಾ ಎನ್ಟಿನಿ, ಮೈದಾನದಲ್ಲಿ ಕೊಹ್ಲಿಯನ್ನು ಎದುರಿಸಲು ವಿಶಿಷ್ಟವಾದ ಮಾರ್ಗವನ್ನು ಹಂಚಿಕೊಂಡಿದ್ದಾರೆ. "ವಿರಾಟ್ ಕೊಹ್ಲಿಯನ್ನು ಸ್ಲೆಡ್ಜ್ ಮಾಡಬೇಡಿ. ಅವರನ್ನು ಸ್ಲೆಡ್ಜ್ ಮಾಡುವ ಯಾವುದೇ ಬೌಲರ್ ಬೆಲೆ ತೆರಬೇಕಾಗುತ್ತದೆ. ನೀವು ಸ್ಲೆಡ್ಜ್ ಮಾಡದಿದ್ದರೆ ಮತ್ತು ಅವನನ್ನು ಸುಮ್ಮನೆ ಬಿಡದಿದ್ದರೆ, ಅವನು ಬೇಸರಗೊಳ್ಳಬಹುದು ಮತ್ತು ತಪ್ಪು ಮಾಡಬಹುದು" ಎಂದು ವಿರಾಟ್ ಕೊಹ್ಲಿ ಬ್ಯಾಕ್‌ಸ್ಟೇಜ್ ವಿತ್ ಬೋರಿಯಾ ಶೋನಲ್ಲಿ ರೆವ್‌ಸ್ಪೋರ್ಟ್ಜ್‌ನೊಂದಿಗೆ ಮಾತನಾಡುವಾಗ ಹೇಳಿದರು.
* ಏಷ್ಯಾ ಕಪ್ ಟೂರ್ನಿ ಬುಧವಾರದಿಂದಲೇ ಆರಂಭವಾಗಲಿದ್ದು ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನೇಪಾಳ ತಂಡಗಳು ಮುಖಾಮುಖಿಯಾಗಲಿದೆ. ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಮುಂದಿನ ಶನಿವಾರ ಆಡಲಿದ್ದು ಪಾಕಿಸ್ತಾನದ ವಿರುದ್ಧದ ಪಂದ್ಯದ ಮೂಲಕ ಈ ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿದೆ. ಆದರೆ ಟೂರ್ನಿಯ ಮೊದಲ ಎರಡು ಪಂದ್ಯಗಳಿಗೆ ತಂಡದ ಅನುಭವಿ ಆಟಗಾರ ಕೆಎಲ್ ರಾಹುಲ್ ಅಲಭ್ಯವಾಗಲಿದ್ದು ಸ್ವತಃ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಖಚಿತಪಡಿಸಿದ್ದಾರೆ. ಕೆಎಲ್ ರಾಹುಲ್ ತೊಡೆ ನೋವಿನ ಕಾರಣದಿಂದಾಗಿ ಐಪಿಎಲ್ ಕೊನೆಯ ಹಂತದ ಬಳಿಕ ಹೊರಗುಳಿದಿದ್ದರು. ಬಳಿಕ ಶಸ್ಸತ್ರಚಿಕಿತ್ಸೆಗೆ ಕೂಡ ಒಳಗಾಗಿದ್ದ ರಾಹುಲ್ ಏಷ್ಯಾಕಪ್ ಟೂರ್ನಿಗೂ ಮುನ್ನ ಫಿಟ್‌ನೆಸ್ ಕಂಡುಕೊಂಡಿದ್ದರು. ಆದರೆ ಏಷ್ಯಾ ಕಪ್‌ಗೆ ಸಿದ್ಧತೆ ನಡೆಸುತ್ತಿರುವಾಗಲೇ ಕೆಎಲ್ ರಾಹುಲ್ ಮತ್ತೆ ಗಾಯಕ್ಕೆ ತುತ್ತಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications