For Quick Alerts
ALLOW NOTIFICATIONS  
For Daily Alerts

ಆಗಸ್ಟ್ 30: ಏಷ್ಯಾಕಪ್ ಉದ್ಭಾಟನಾ ಪಂದ್ಯದಲ್ಲಿ ಪಾಕ್ ಅಬ್ಬರ; ಕೊಲಂಬೋದಲ್ಲಿ ಟೀಮ್ ಇಂಡಿಯಾ: ಕ್ರೀಡಾ ಲೋಕದ ಇಂದಿನ ಸುದ್ದಿ

*ಆಗಸ್ಟ್ 29ರಂದು ನಡೆದ 2023ರ ಯುಎಸ್ ಓಪನ್‌ ಗ್ರ್ಯಾಂಡ್‌ಸ್ಲಾಮ್‌ ಪಂದ್ಯಾವಳಿಯಲ್ಲಿ ವಿಶ್ವದ ಮೂರನೇ ಶ್ರೇಯಾಂಕದ ಡೇನಿಯಲ್ ಮೆಡ್ವೆಡೆವ್ ಮತ್ತು ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಅವರು 2ನೇ ಸುತ್ತು ಪ್ರವೇಶಿಸಿದರು. ಇದೇ ವೇಳೆ ಯುಎಸ್ ಓಪನ್‌ ಗ್ರ್ಯಾಂಡ್‌ಸ್ಲಾಮ್‌ ಮಹಿಳಾ ಪಂದ್ಯಾವಳಿಯಲ್ಲಿ 5ನೇ ಶ್ರೇಯಾಂಕದ ಓನ್ಸ್ ಜಬೇರ್ ಅವರು ಮೊದಲ ಸುತ್ತಿನಲ್ಲಿ ಕೊಲಂಬಿಯಾದ ಕ್ಯಾಮಿಲಾ ಒಸೊರಿಯೊ ವಿರುದ್ಧ ಜಯಗಳಿಸಿದರು.

* ಪಾಕಿಸ್ತಾನದ ಮುಲ್ತಾನ್‌ನಲ್ಲಿ ಆರಂಭಗೊಂಡಿರುವ 2023ರ ಏಷ್ಯಾ ಕಪ್‌ ಪಂದ್ಯಾವಳಿಗಾಗಿ ಹಾಲಿ ಚಾಂಪಿಯನ್ ಶ್ರೀಲಂಕಾ ಕೊನೆಗೂ ತನ್ನ ತಂಡವನ್ನು ಪ್ರಕಟಿಸಿದೆ. ಲಂಕಾ ಪ್ರೀಮಿಯರ್ ಲೀಗ್‌ (ಎಲ್‌ಪಿಎಲ್)ನಲ್ಲಿ ಅಗ್ರ ರನ್ ಸ್ಕೋರರ್ ಮತ್ತು ಅಗ್ರ ವಿಕೆಟ್ ಟೇಕರ್ ಆಗಿರುವ ಲೆಗ್ ಸ್ಪಿನ್ನರ್ ವನಿಂದು ಹಸರಂಗ ಅವರು ದುಷ್ಮಂತ ಚಮೀರ, ಲಹಿರು ಮಧುಶಂಕ ಮತ್ತು ಲಹಿರು ಕುಮಾರ ಅವರಂತಹ ಆಟಗಾರರ ಜೊತೆಗೆ ಪ್ರಮುಖ ಪಂದ್ಯಾವಳಿಯಿಂದ ಹೊರಗುಳಿಯಲಿದ್ದಾರೆ.

August 30, what happened in sports World: Todays Top sports news and headlines

* 2023ರ ಏಷ್ಯಾ ಕಪ್ ಪಂದ್ಯಾವಳಿ ಆರಂಭಕ್ಕೂ ಒಂದು ದಿನದ ಮುನ್ನ ಬಾಂಗ್ಲಾದೇಶ ತಂಡ ದೊಡ್ಡ ಹಿನ್ನಡೆ ಅನುಭವಿಸಿದೆ. ವೈರಲ್ ಜ್ವರದಿಂದ ಚೇತರಿಸಿಕೊಳ್ಳಲು ವಿಫಲವಾದ ನಂತರ ಸ್ಟಾರ್ ಬ್ಯಾಟರ್ ಲಿಟ್ಟನ್ ದಾಸ್ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ.

* ತೆಲುಗು ಚಲನಚಿತ್ರ ಸ್ಟಾರ್ ನಟ ವಿಜಯ್ ದೇವರಕೊಂಡ ಅವರು ಕ್ರಿಕೆಟ್‌ ಬಗ್ಗೆ ತಮ್ಮ ಆಳವಾದ ಪ್ರೀತಿಯನ್ನು ವ್ಯಕ್ತಪಡಿಸಿದರು. ಅಳಿಸಲಾಗದ ಬಾಲ್ಯದ ನೆನಪುಗಳು ಮತ್ತು ಅನುಭವಗಳನ್ನು ವಿವರಿಸಿದರು. "ಇತ್ತೀಚಿನ ದಿನಗಳಲ್ಲಿ ವಿರಾಟ್ ಕೊಹ್ಲಿ ಆಟವನ್ನು ನೋಡುವುದೇ ಶುದ್ಧ ಮೋಜಿನಿಂದ ಕೂಡಿರುತ್ತದೆ. ನಂತರ ರೋಹಿತ್ ಶರ್ಮಾ ಅವರು ಪ್ರಯಾಸವಿಲ್ಲದ ಕ್ರಿಕೆಟ್ ಆಡುತ್ತಾರೆ. ಸೂರ್ಯ ಕುಮಾರ್ ಯಾದವ್ ತಮ್ಮ ದಿನದಂದು ಅವರನ್ನು ನಿಯಂತ್ರಿಸುವುದು ಕಷ್ಟ ಮತ್ತು ಹಾರ್ದಿಕ್ ಪಾಂಡ್ಯ ಅವರು ಶಾಟ್ ಆಡುವಾಗ ಧ್ವನಿ ಅದ್ಭುತವಾಗಿರುತ್ತದೆ," ಎಂದು ವಿಜಯ್ ದೇವರಕೊಂಡ ಹೇಳಿದರು.

* ಏಷ್ಯಾಕಪ್ ಟೂರ್ನಿ ಆರಂಭವಾಗಿದ್ದು ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನೇಪಾಳ ತಂಡಗಳು ಮುಖಾಮುಖಿಯಾಗುವ ಟೂರ್ನಿಗೆ ಚಾಲನೆ ದೊರೆತಿದೆ. ಆದರೆ ಈ ಟೂರ್ನಿಯ ಆರಂಭಿಕ ಪಂದ್ಯದಲ್ಲಿಯೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಭಾರೀ ಮುಖಭಂಗವೊಂದು ಉಂಟಾಗಿದೆ. ತನ್ನದೇ ನೆಲದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಸ್ವತಃ ಆತಿಥೇಯ ಪಾಕಿಸ್ತಾನ ಭಾಗವಹಿಸಿದ್ದರೂ ಕೂಡ ಮೊದಲ ಪಂದ್ಯದಲ್ಲಿ ಖಾಲಿ ಕುರ್ಚಿಗಳೇ ಕಾಣಿಸಿಕೊಂಡಿದೆ. ಪಂದ್ಯಕ್ಕೂ ಮುನ್ನ ಮನರಂಜನಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಕಾರ್ಯಕ್ರಮ ಖಾಲಿ ಸ್ಟೇಡಿಯಂನಲ್ಲಿ ಆಯೋಜನೆಯಾಗಿದೆ.

* ಏಷ್ಯಾಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ನೇಪಾಳ ವಿರುದ್ಧ ಅಮೋಘ ಗೆಲುವು ಸಾಧಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಅಬ್ಬರಿಸಿರುವ ಪಾಕಿಸ್ತಾನ ತಂಡ ಬರೊಬ್ಬರಿ 238 ರನ್‌ಗಳ ಅಂತರದ ಗೆಲುವು ಸಾಧಿಸಿದೆ. ಈ ಮೂಲಕ ಏಷ್ಯಾಕಪ್ ಇತಿಹಾಸದಲ್ಲಿ ರನ್‌ಗಳ ಆಧಾರದಲ್ಲಿ ಎರಡನೇ ಅತಿ ದೊಡ್ಡ ಗೆಲುವು ಸಾಧಿಸಿದೆ.

* ಪಾಕಿಸ್ತಾನ ನೀಡಿದ 343 ರನ್‌ಗಳ ಗುರಿ ಬೆನ್ನಟ್ಟಿದ ನೇಪಾಳ ತಂಡ ಯಾವ ಹಂತದಲ್ಲಿಯೂ ಪಾಕಿಸ್ತಾನ ತಂಡಕ್ಕೆ ಸವಾಲಾಗಲೇ ಇಲ್ಲ. ಮಧ್ಯಮ ಕ್ರಮಾಂಕದಲ್ಲಿ ಮೂವರು ಆಟಗಾರರು ಮಾತ್ರವೇ ಎರಡಂಕಿ ತಲುಪುವಲ್ಲಿ ಯಶಸ್ವಿಯಾಗಿದ್ದರು. ಉಳಿದಂತೆ ಎಲ್ಲಾ ಆಟಗಾರರು ಕೂಡ ಒಂದಂಕಿಗೆ ವಿಕೆಟ್ ಕಳೆದುಕೊಂಡಿದ್ದಾರೆ.

* ಈ ಪಂದ್ಯದ ಬಳಿಕ ಮಾತನಾಡಿದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಸಂತಸ ವ್ಯಕ್ತಪಡಿಸಿದ್ದಾರೆ. "ಕೆಲ ಓವರ್‌ಗಳಲ್ಲಿ ನಾವು ಉತ್ತಮವಾಗಿರಲಿಲ್ಲ. ವೇಗಿಗಳು ಉತ್ತಮವಾದ ಆರಂಭವನ್ನು ನೀಡಿದರು. ಸ್ಪಿನ್ನರ್‌ಗಳಿಂದಲೂ ಅದ್ಭುತ ಹೋರಾಟ ಬಂದಿದೆ. ಇದು ಭಾರತದ ವಿರುದ್ಧದ ಪಂದ್ಯಕ್ಕೆ ನಮಗೆ ಅದ್ಭುತವಾದ ಸಿದ್ಧತೆಯಾಗಿದೆ. ಯಾಕೆಂದರೆ ಈ ಪಂದ್ಯದಲ್ಲಿ ನಮಗೆ ಸಾಖಷ್ಟು ಆತ್ಮವಿಶ್ವಾಸ ದೊರೆತಿದೆ" ಎಂದಿದ್ದಾರೆ ಬಾಬರ್ ಅಜಂ.

Story first published: Wednesday, August 30, 2023, 23:47 [IST]
Other articles published on Aug 30, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+