For Quick Alerts
ALLOW NOTIFICATIONS  
For Daily Alerts

ಆಗಸ್ಟ್ 3: ನಿವೃತ್ತಿ ಘೋಷಿಸಿದ ಭಾರತದ ಕ್ರಿಕೆಟಿಗ; 200ನೇ ಟಿ20 ಪಂದ್ಯವಾಡುತ್ತಿದೆ ಭಾರತ: ಕ್ರೀಡಾ ಲೋಕದ ಇಂದಿನ ಸುದ್ದಿ

* ಭಾರತ ಹಾಗೂ ವೆಸ್ಟ್ ಇಂಡಿಸ್ ತಂಡಗಳ ನಡುವಿನ ಟಿ20 ಸರಣಿ ಇಂದಿನಿಂದ ಆರಂಭವಾಗುತ್ತಿದೆ. ಐದು ಪಂದ್ಯಗಳ ಟಿ20 ಸರಣೀ ಇದಾಗಿದ್ದು ಈ ಸರಣಿಯಲ್ಲಿ ರೋಹಿತ್ ಶರ್ಮಾ ವಿರಾಟ್ ಕೊಹ್ಲಿ ಇಬ್ಬರು ಕೂಡ ಆಡುತ್ತಿಲ್ಲ. ಹಾಗಾಗಿ ಯುವ ಆಟಗಾರರು ಈ ಸರಣಿಯಲ್ಲಿ ನಿರ್ಣಾಯಕ ಪಾತ್ರವಹಿಸುವ ಅಗತ್ಯವಿದೆ. ವೆಸ್ಟ್ ಇಂಡೀಸ್ ಕೂಡ ಬಲಿಷ್ಠ ಆಡುವ ಬಳಗವನ್ನು ಹೊಂದಿದ್ದು ಸರಣಿ ತೀವ್ರ ಕುತೂಹಲ ಮೂಡಿಸಿದೆ. ಇದು ಭಾರತದ 200ನೇ ಅಂತಾರಾಷ್ಟ್ರೀಯ ಟಿ20 ಪಂದ್ಯ ಎಂಬುದು ಮತ್ತೊಂದು ಮಹತ್ವದ ಅಂಶ.

* ಭಾರತದ ಪ್ರಖ್ಯಾತ ಫುಟ್ಬಾಲ್ ಲೀಗ್ ಟೂರ್ನಿಯಾದ ಇಂಡಿಯನ್ ಸೂಪರ್ ಲೀಗ್‌ ಈ ಬಾರಿ 12 ತಂಡಗಳ ಸ್ಪರ್ಧೆಯಾಗಿರಲಿದೆ. ಮುಂಬರುವ 2023-24ರ ಆವೃತ್ತಿಗೆ ಪಂಜಾಬ್ ಎಫ್‌ಸಿ ಕೂಡ ಅರ್ಹತೆಯನ್ನು ಪಡೆದುಕೊಂಡಿದ್ದು ತನ್ನ ಅದೃಷ್ಟವನ್ನು ಪರೀಕ್ಷಿಸಲಿದೆ. ಈ ಬಗ್ಗೆ ಬುಧವಾರ ಐಎಸ್‌ಎಲ್ ಖಚಿತಪಡಿಸಿದೆ. ಹಲವಾರು ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳನ್ನು ಹೊಂದಿರುವ ಅತ್ಯಂತ ಯಶಸ್ವಿ ಭಾರತೀಯ ಫುಟ್‌ಬಾಲ್ ಕ್ಲಬ್‌ಗಳಲ್ಲಿ ಪಂಜಾಬ್ ಎಫ್‌ಸಿ ಕೂಡ ಒಂದು. ಇದೀಗ ಈ ಫುಟ್ಬಾಲ್ ಕ್ಲಬ್ ಕೂಡ ಭಾರತದ ಪ್ರತಿಷ್ಠಿತ ಫುಟ್ಬಾಲ್ ಲೀಗ್‌ನಲ್ಲಿ ಆಡುವ ಅರ್ಹತೆ ಪಡೆದುಕೊಂಡಿದೆ.

August 3rd, what happened in sports World: Todays Top sports news and headlines

* ಇದೇ ತಿಂಗಳಾಂತ್ಯದಲ್ಲಿ ಆರಂಬವಾಗಲಿರುವ ಏಷ್ಯಾ ಕಪ್ ಟೂರ್ನಿಗೆ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಐಯ್ಯರ್ ಇಬ್ಬರು ಕೂಡ ಅಲಭ್ಯವಾಗುವುದು ಕಷ್ಟ ಎಂಬ ಸುದ್ದಿ ಹೊರಬಿದ್ದಿದೆ. ಹೀಗಾಗಿ ಟೀಮ್ ಇಂಡಿಯಾದ ವಿಶ್ವಕಪ್ ಸಿದ್ಧತೆಗೆ ಇದು ಹೊಡೆತ ನೀಡುವ ಸಾಧ್ಯತೆಯೂ ಇದೆ. ಅಲ್ಲದೆ ವಿಶ್ವಕಪ್‌ನಂಥಾ ಟೂರ್ನಿಗೂ ಮುನ್ನ ನಿರೀಕ್ಷಿತ ಮಟ್ಟದ ಮ್ಯಾಚ್ ಅವಧಿ ಕೂಡ ಈ ಆಟಗಾರರಿಗೆ ದೊರೆಯದಿರುವುದರಿಂದಾಗಿ ಈ ಆಟಗಾರರ ಫಾರ್ಮ್ ಹಾಗೂ ಆಟದ ಲಯದ ಬಗ್ಗೆಯೂ ಗೊಂದಲ ಉಳಿದುಕೊಳ್ಳಲಿದೆ.

* ಭಾರತೀಯ ಕ್ರಿಕೆಟ್ ತಂಡದ ಆಟಗಾರ ಹಾಗೂ ಪಶ್ಚಿಮ ಬಂಗಾಳ ಕ್ರೀಡಾ ಸಚಿವರೂ ಆಗಿರುವ ಮನೋಜ್ ತಿವಾರಿ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುರುವಾರ, ಆಗಸ್ಟ್ 3ರಂದು ನಿವೃತ್ತಿ ಘೋಷಿಸಿದರು.
ಮನೋಜ್ ತಿವಾರಿ ಅವರು ಜುಲೈ 14, 2015ರಂದು ಜಿಂಬಾಬ್ವೆ ವಿರುದ್ಧ ಭಾರತ ತಂಡದ ಪರ ತಮ್ಮ ಕೊನೆಯ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನು ಆಡಿದ್ದರು. ಬಿಸಿಸಿಐ ಆಯ್ಕೆ ಸಮಿತಿಯು ಅವರನ್ನು ಭಾರತೀಯ ತಂಡದಿಂದ ಕೈಬಿಟ್ಟ ನಂತರ, ಮನೋಜ್ ತಿವಾರಿ ಐಪಿಎಲ್ ಹಾಗೂ ದೇಶೀಯ ಪಂದ್ಯಾವಳಿಗಳಲ್ಲಿ ಆಡುವುದನ್ನು ಮುಂದುವರೆಸಿದರು.

* ಭಾರತೀಯ ಕ್ರಿಕೆಟ್‌ಗೆ ದುಃಖಕರ ಸುದ್ದಿಯೊಂದು ಅಪ್ಪಳಿಸಿದ್ದು, 2007ರ ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಮ್ಯಾನೇಜರ್ ಆಗಿದ್ದ ಸುನಿಲ್ ದೇವ್ ಅವರು ಗುರುವಾರ, ಆಗಸ್ಟ್ 3ರಂದು ನಿಧನರಾಗಿದ್ದಾರೆ. ಸುನಿಲ್ ದೇವ್ ಅವರು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ (ಡಿಡಿಸಿಎ) ಮಾಜಿ ಕಾರ್ಯದರ್ಶಿಯಾಗಿದ್ದರು ಮತ್ತು ದೀರ್ಘಕಾಲದ ಅನಾರೋಗ್ಯದ ನಂತರ, 75 ವರ್ಷ ವಯಸ್ಸಾಗಿದ್ದ ಅವರು ನಿಧನರಾದರು. ಸುನೀಲ್ ದೇವ್ ಅವರು ಮಕ್ಕಳು ಮತ್ತು ಹೆಂಡತಿಯನ್ನು ಅಗಲಿದ್ದಾರೆ. ಅವರು ಹಲವು ವರ್ಷಗಳ ಕಾಲ ಡಿಡಿಸಿಎನೊಂದಿಗೆ ಕೆಲಸ ಮಾಡಿದ್ದಾರೆ. ಸುನೀಲ್ ದೇವ್ ಆಡಳಿತ ಮಂಡಳಿಯೊಂದಿಗೆ ಕ್ರೀಡಾ ನಿರ್ವಾಹಕರಾಗಿದ್ದಾಗ ಮಂಡಳಿಯ ಉಪ ಸಮಿತಿಗಳ ಭಾಗವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗಾಗಿಯೂ ಸೇವೆ ಸಲ್ಲಿಸಿದರು.

* ಆಸ್ಟ್ರೇಲಿಯ ಓಪನ್ 2023ರಲ್ಲಿ ಎರಡನೇ ಸುತ್ತಿನಲ್ಲಿ ಭಾರತೀಯ ಆಟಗಾರರು ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧು, ಕಿಡಂಬಿ ಶ್ರೀಕಾಂತ್ ಮತ್ತು ಪ್ರಿಯಾಂಶು ರಾಜಾವತ್ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದರು. ಮತ್ತೊಂದೆಡೆ ಯುವ ಶಟ್ಲರ್ ಮಿಥುನ್ ಮಂಜುನಾಥ್ ಟೂರ್ನಿಯಿಂದ ಹೊರಬಿದ್ದರಾದರೂ ಅದಕ್ಕೂ ಮುನ್ನ ವೀರಾವೇಶದ ಪ್ರದರ್ಶನ ನೀಡಿ ಗಮನಸೆಳೆದಿದ್ದಾರೆ.

* ಗುರುವಾರ, ಆಗಸ್ಟ್ 3ರಂದು ರಾಯಲ್ಸ್ ಸ್ಪೋರ್ಟ್ಸ್ ಗ್ರೂಪ್ ಒಡೆತನದ ಫ್ರಾಂಚೈಸಿ ಪಾರ್ಲ್ ರಾಯಲ್ಸ್ ತಂಡವು ದಕ್ಷಿಣ ಆಫ್ರಿಕಾ ಟಿ20 ಲೀಗ್ ಆದ SA20 ಪಂದ್ಯಾವಳಿಯ 2024ರ ಆವೃತ್ತಿಗೆ ಉಳಿಸಿಕೊಂಡಿರುವ 15 ಆಟಗಾರರ ತಂಡವನ್ನು ಪ್ರಕಟಿಸಿದೆ. ಬೋಲ್ಯಾಂಡ್ ಪಾರ್ಕ್ ಮೂಲದ ಪಾರ್ಲ್ ರಾಯಲ್ಸ್ ತಂಡವು ತಮ್ಮ ಬಹುಪಾಲು ಆಟಗಾರರನ್ನು ಉಳಿಸಿಕೊಂಡಿದೆ. 12 ದಕ್ಷಿಣ ಆಫ್ರಿಕಾದ ಆಟಗಾರರು ಲೀಗ್‌ನ ಎರಡನೇ ಆವೃತ್ತಿಗೆ ಉಳಿದುಕೊಂಡಿದ್ದರೆ, ಮೂರು ವಿದೇಶಿ ಆಟಗಾರರನ್ನು ಉಳಿಸಿಕೊಂಡಿದೆ.

Story first published: Thursday, August 3, 2023, 19:28 [IST]
Other articles published on Aug 3, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+