ತಂದೆಯ ಹಾದಿಯಲ್ಲೇ ನಡೆದ ಸ್ಕೀಯಿಂಗ್ ಪಟು: ಆಸ್ಟ್ರೀಯಾದ ಸ್ಟ್ರಾಲ್ಜ್‌ಗೆ ಚಿನ್ನದ ಪದಕ

ಆಸ್ಟ್ರೀಯಾದ ಮೂಲದ ಸ್ಕೀಯಿಂಗ್ ಪಟು ಜೋಹಾನ್ನಸ್ ಸ್ಟ್ರಾಲ್ಜ್ ತಂದೆಯ ಕನಸನ್ನ ನನಸು ಮಾಡಿದ್ದಾರೆ. ಚೀನಾದ ಬೀಜಿಂಗ್‌ನಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಆಸ್ಟ್ರೀಯಾಗೆ ಎರಡು ಚಿನ್ನದ ಪದಕ ಗೆದ್ದುಕೊಟ್ಟಿರುವ ಸ್ಟ್ರಾಲ್ಜ್ 34 ವರ್ಷಗಳ ಹಿಂದಿನ ತನ್ನ ತಂದೆಯ ಸಾಧನೆಯ ಪುನರಾವರ್ತಿಸಿದ್ದಾರೆ.
ಕಂಬೈನ್ಡ್ ಸ್ಕೀಯಿಂಗ್ ಸ್ಪರ್ಧೆಯ ಆರಂಭದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಸ್ಟ್ರಾಲ್ಜ್ 2 ನಿಮಿಷ 31.43 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟುವ ಮೂಲಕ ಸ್ಲಾಲೋಮ್ ವಿಭಾಗದಲ್ಲಿ ಮೊದಲ ಸ್ಥಾನಗಳಿಸಿದ್ರು. ಈ ಮೂಲಕ 1988ರ ಕ್ಯಾಲ್ಗರಿ ಒಲಿಂಪಿಕ್ ಕ್ರೀಡಾ ಕೂಟದಲ್ಲಿ ಸ್ಟ್ರಾಲ್ಜ್ ಅವರ ತಂದೆ ಹುಬರ್ಟ್ ಕೂಡ ಚಿನ್ನದ ಪದಕವನ್ನ ಗೆದ್ದು ಬೀಗಿದ್ದರು.
ಸ್ಟ್ರೋಲ್ಜ್ ತನ್ನ ಮೊದಲ ಒಲಿಂಪಿಕ್ಸ್ ಪ್ರದರ್ಶನದಲ್ಲೇ ಮಿಂಚಿನ ಆಟವಾಡುವ ಮೂಲಕ ಸ್ಲಾಲೋಮ್‌ನ ವಿಭಾಗದಲ್ಲಿ ಚಿನ್ನವನ್ನು ಗೆದ್ದನು, ಅದು ಅವನು 47.56 ಸೆಕೆಂಡ್‌ಗಳಲ್ಲಿ ಮುಗಿಸಿದನು. ಈತನ ನಂತರದಲ್ಲಿ ಇಸ್ರೇಲ್‌ನ ಬರ್ನಾಬಾಸ್ ಸ್ಜೋಲೋಸ್‌ಗಿಂತ ಅರ್ಧ ಸೆಕೆಂಡ್ ವೇಗವಾಗಿ ಸ್ಪರ್ಧೆ ಮುಗಿಸಿದನು.
'' ನನ್ನ ತಂದೆಯ ಇತಿಹಾಸದ ಬಗ್ಗೆ ನನಗೆ ತುಂಬಾ ಅರ್ಥವಾಗಿದೆ. ಅಪ್ಪನ ಎಲ್ಲಾ ಚಿತ್ರಗಳು ಮತ್ತು ಚಿನ್ನದ ಪದಕದ ಬಗ್ಗೆ ಯೋಚಿಸಿದಾಗ ನನಗೆ ಅಳುವುದನ್ನ ತಡೆಯಲು ಸಾಧ್ಯವಾಗುವುದಿಲ್ಲ" ಎಂದು ಹೇಳಿದರು.
ಸ್ಪರ್ಧೆಯ ನಂತರ, ಯುಎಸ್ ಆಲ್ಪೈನ್ ಸ್ಕೀಯರ್ ಮೈಕೆಲಾ ಶಿಫ್ರಿನ್ ತನ್ನ ಗೆಳೆಯ ಕಿಲ್ಡ್ ಗೆ ಗೆಲುವಿನ ಬಗ್ಗೆ ಅಭಿನಂದಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications