Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asian Games 2023: ಅರ್ಹತೆ ಪಡೆದರೂ ಏಷ್ಯನ್ ಗೇಮ್ಸ್‌ನಿಂದ ಹೊರಗುಳಿದ ಭಾರತದ ಕ್ರೀಡಾಪಟುಗಳು

ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 2023ರ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಭಾರತದಿಂದ ಒಟ್ಟು 655 ಕ್ರೀಡಾಪಟುಗಳು ಅರ್ಹತೆ ಪಡೆದಿದ್ದಾರೆ. ಇದು ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ, ಭಾರತ ಎಂದಿಗಿಂತ ಅತಿ ದೊಡ್ಡ ತುಕಡಿಯನ್ನು ಕಳುಹಿಸಿದೆ.

ಏಷ್ಯನ್ ಗೇಮ್ಸ್‌ನ ಒಟ್ಟು 61 ಕ್ರೀಡಾ ವಿಭಾಗಗಳ 41 ವಿಭಾಗಗಳಲ್ಲಿ ಭಾರತೀಯ ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ ಮತ್ತು ಬಹುತೇಕ ಎಲ್ಲ ವಿಭಾಗಗಲ್ಲೂ ಪದಕದ ನಿರೀಕ್ಷೆ ಹೆಚ್ಚಿಸಿದ್ದಾರೆ.

ಹ್ಯಾಂಗ್‌ಝೌನ 56 ಸ್ಥಳಗಳಲ್ಲಿ ಕ್ರೀಡೆಗಳು ನಡೆಯಲಿದ್ದು, ಒಟ್ಟು 481 ಚಿನ್ನದ ಪದಕಗಳಿಗೆ ಸ್ಪರ್ಧೆ ನಡೆಯಲಿದೆ. ಸೆಪ್ಟೆಂಬರ್ 23ರಿಂದ ಏಷ್ಯನ್ ಗೇಮ್ಸ್‌ಗೆ ಅಧಿಕೃತವಾಗಿ ಚಾಲನೆ ನೀಡಲಾಗುತ್ತದೆಯಾದರೂ, ಕ್ರಿಕೆಟ್, ಫುಟ್‌ಬಾಲ್, ವಾಲಿಬಾಲ್ ಮತ್ತು ಬೀಚ್ ವಾಲಿಬಾಲ್‌ನಂತಹ ಕ್ರೀಡೆಗಳು ಸೆಪ್ಟೆಂಬರ್ 19ರಿಂದ ಆರಂಭವಾಗಿವೆ.

asian-games-2023

"ಈ ಬಾರಿ 100 ಪದಕಗಳು' ಎಂದು 2023ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ತಂಡಕ್ಕೆ ಟ್ಯಾಗ್‌ಲೈನ್ ಇದ್ದು, ಭಾರತೀಯ ಅಭಿಮಾನಿಗಳು ಮತ್ತು ಕ್ರೀಡಾ ಸಂಸ್ಥೆಗಳು ನಿರೀಕ್ಷೆಗಳನ್ನು ಹೆಚ್ಚಿಸಲು ಬಯಸುತ್ತಾರೆ. ಈ ಹಿಂದಿನ ಆವೃತ್ತಿ ಜಕಾರ್ತಾ ಮತ್ತು ಪಾಲೆಂಬಾಂಗ್‌ನಲ್ಲಿ ಗೆದ್ದಿದ್ದ 70 ಪದಕಗಳನ್ನು ಮೀರಿಸಲು ಪ್ರಯತ್ನಿಸಲಿದ್ದಾರೆ.

ಇನ್ನು ಶನಿವಾರ, ಸೆಪ್ಟೆಂಬರ್ 23ರಂದು ಹ್ಯಾಂಗ್‌ಝೌನಲ್ಲಿ ನಡೆಯುವ ಏಷ್ಯನ್ ಗೇಮ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಭಾರತ ಪುರುಷರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಒಲಿಂಪಿಕ್ ಪದಕ ವಿಜೇತ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಅವರು ಭಾರತ ನಿಯೋಗದ ಧ್ವಜಧಾರಿಗಳಾಗಲಿದ್ದಾರೆ.

2023ರ ಏಷ್ಯನ್ ಗೇಮ್ಸ್‌ನಲ್ಲಿ ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಶೂಟಿಂಗ್, ಕುಸ್ತಿ, ಕ್ರಿಕೆಟ್ ಮತ್ತು ವೇಟ್‌ಲಿಫ್ಟಿಂಗ್ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಭಾರತವು ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.

asian-games-2023

ಏಷ್ಯನ್ ಗೇಮ್ಸ್‌ನಿಂದ ಹೊರಗುಳಿದ ಭಾರತದ ಕ್ರೀಡಾಪಟುಗಳು

ಇದೇ ವೇಳೆ ನೂರಾರು ಭಾರತೀಯ ಕ್ರೀಡಾಪಟುಗಳು ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದು ದೇಶದ ಗೌರವ ಹೆಚ್ಚಿಸಲು ಎದುರು ನೋಡುತ್ತಿದ್ದಾರೆ. ಆದಾಗ್ಯೂ, ಗಾಯದ ಸಮಸ್ಯೆ, ಅನರ್ಹತೆ, ತಾಂತ್ರಿಕ ಕಾರಣ ಇತ್ಯಾದಿಗಳಿಂದ ಕೆಲವು ಅಥ್ಲೀಟ್‌ಗಳು ಕ್ರೀಡಾಕೂಟದಿಂದ ದೂರವುಳಿಯಲಿದ್ದಾರೆ.

ಹಿಂದಿನ ಏಷ್ಯನ್ ಗೇಮ್ಸ್ ಆವೃತ್ತಿಯಲ್ಲಿ ಚಿನ್ನ ಗೆದ್ದಿದ್ದ ಕುಸ್ತಿಪಟು ವಿನೇಶ್ ಪೋಗಟ್, ಒಲಿಂಪಿಕ್ ಬೆಳ್ಳಿ ಪದಕ ವಿಜೇತ ರವಿ ದಹಿಯಾ, ಹಾಕಿ ಆಟಗಾರ್ತಿ ರಾಣಿ ರಾಂಪಾಲ್, ಅಥ್ಲೀಟ್ ಹಿಮಾ ದಾಸ್, ಬಾಕ್ಸರ್ ಅಮಿತ್ ಪಂಘಾಲ್, ಶೂಟರ್ ಸೌರಭ್ ಚೌಧರಿ, ಇಕ್ವೇಸ್ಟ್ರಿಯನ್ ಫೌವಾದ್ ಮಿರ್ಜಾ, ಜಿಮ್ನಾಸ್ಟ್ ದೀಪಾ ಕರ್ಮಾಕರ್ ಸೇರಿದಂತೆ ಹಲವು ಸ್ಟಾರ್ ಕ್ರೀಡಾಪಟುಗಳು 19ನೇ ಏಷ್ಯನ್ ಕ್ರೀಡಾಕೂಟದಿಂದ ಹೊರಗುಳಿದಿದ್ದಾರೆ.

Story first published: Friday, September 22, 2023, 16:39 [IST]
Other articles published on Sep 22, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+