Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌: ಚಿನ್ನ ಗೆದ್ದ ಬಜರಂಗ್‌

Bajrang reclaims gold at Asian Wrestling Cship

ಕ್ಸಿಯಾನ್‌ (ಚೀನಾ), ಏಪ್ರಿಲ್‌ 24: ಪ್ರಬಲ ಪೈಪೋಟಿಯ ನಡುವೆ ಸತತ 10 ಅಂಕಗಳನ್ನು ಪಡೆದು ಮೇಲುಗೈ ಸಾಧಿಸಿದ ವಿಶ್ವದ ನಂ.1 ಕುಸ್ತಿಪಟು ಬಜರಂಗ್‌ ಪೂನಿಯಾ, ಇಲ್ಲಿ ನಡೆಯುತ್ತಿರುವ ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌ನ ಪುರುಷರ 65 ಕೆಜಿ ಫ್ರೀ ಸ್ಟೈಲ್‌ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ.

ತೀವ್ರ ಕುತೂಹಲ ಹಿಡಿದಿಟ್ಟಿದ್ದ ಫೈನಲ್‌ ಪಂದ್ಯದಲ್ಲಿ ಮಿಂಚಿದ ಭಾರತೀಯ ಕುಸ್ತಿಪಟು, ಕಜಕಸ್ತಾನದ ಸಯಾತ್ಬೇಕ್‌ ಒಕಾಸ್ಸೋವ್‌ ವಿರುದ್ಧ 12-7 ಅಂಕಗಳ ಅಂತರದ ಜಯ ದಾಖಲಿಸಿ ಚಿನ್ನಕ್ಕೆ ಕೊರಳೊಡ್ಡಿದರು.

ಕಾಮ್‌ವೆಲ್ತ್‌ ಮತ್ತು ಏಷ್ಯನ್‌ ಗೇಮ್ಸ್‌ ಚಾಂಪಿಯನ್‌ ಬಜರಂಗ್‌, ಪಂದ್ಯದಲ್ಲಿ 2-7 ಅಂತರದಲ್ಲಿ ಹಿನ್ನಡೆಯಲ್ಲಿದ್ದರು. ಪಂದ್ಯ ಮುಕ್ತಾಯಕ್ಕೆ ಇನ್ನು 60 ಸೆಕೆಂಡ್‌ಗಳು ಬಾಕಿ ಇರುವಾಗ ಎದುರಾಳಿಯನ್ನು ಬೆಚ್ಚಿ ಬೀಳಿಸಿದ ಬಜರಂಗ್‌ ಸತತ 10 ಅಂಕಗಳನ್ನು ಗಳಿಸಿ ಜಯ ದಕ್ಕಿಸಿಕೊಂಡರು.

ಕಜಕಸ್ತಾನದ ಕುಸ್ತಿಪಟು ದಣಿದಿರುವುದನ್ನು ಗಮನಿಸಿ ಅದರ ಪೂರ್ಣ ಲಾಭ ಪಡೆದ ಬಜರಂಗ್‌ ತಮ್ಮ ಅನುಭವ ಪ್ರದರ್ಶಿಸಿ ಆಕ್ರಮಣಕಾರಿ ಆಟದೊಂದಿಗೆ ಗೆಲುವಿನ ಸಿಹಿಯುಂಡರು. ಈ ಮೂಲಕ ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಸ್ವರ್ಣ ತಮ್ಮದಾಗಿಸಿಕೊಂಡರು. ಈ ಮೊದಲು 2017ರಲ್ಲಿ ಚಿನ್ನ ಗೆದ್ದಿದ್ದರು. ಇದು ಭಾರತಕ್ಕೆ ಕೂಟದಲ್ಲಿ ಲಭ್ಯವಾದ ಐದನೇ ಪದಕವಾಗಿದೆ.

ಈ ಗೆಲುವಿನೊಂದಿಗೆ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಗುರಿ ಹೊಂದಿರುವುದಾಗಿ ತಮ್ಮ ಎದುರಾಳಿಗಳಿಗೆ ಬಜರಂಗ್‌ ದಿಟ್ಟ ಸಂದೇಶ ಸಾರಿದ್ದಾರೆ. ಇನ್ನು ಫೈನಲ್‌ ಪ್ರವೇಶಿಸುವ ಹಾದಿಯಲ್ಲಿ ಬಜರಂಗ್‌ ಕೇವಲ 2 ಅಂಕಗಳನ್ನಷ್ಟೇ ಬಿಟ್ಟುಕೊಟ್ಟದ್ದು ಗಮನಾರ್ಹ.

ಕೂಟದಲ್ಲಿ ಭಾರತಕ್ಕೆ ಮತ್ತೊಂದು ಸ್ವರ್ಣ ಲಭ್ಯವಾಗುವಂತಿದ್ದು 79 ಕೆಜಿ ವಿಭಾಗದಲ್ಲಿ ಪ್ರವೀಣ್‌ ರಾಣಾ ಫೈನಲ್‌ ತಲುಪಿದ್ದಾರೆ. ಪ್ರವೀಣ್‌, ಸೆಮಿಫೈನಲ್‌ನಲ್ಲಿ 3-2ರಲ್ಲಿ ಕಜಕಸ್ತಾನದ ಗ್ಲೈಮ್ಜಾನ್‌ ಉಸ್ಸೆರಬಾಯೆವ್‌ ವಿರುದ್ಧ ಜಯ ದಾಖಲಿಸಿದರು. ಇದೀಗ ಫೈನಲ್‌ನಲ್ಲಿ ಇರಾನ್‌ನ ಮೊಹಮ್ಮದ್‌ ತೈಮೊರಿ ವಿರುದ್ಧ ಸೆಣಸಲಿದ್ದಾರೆ. ಇದೇ ವೇಳೆ 70 ಕೆಜಿ ವಿಭಾಗದಲ್ಲಿ ರಜನೀಶ್‌ ಸ್ಪರ್ಧೆಯಿಂದ ನಿರ್ಗಮಿಸಿದ್ದಾರೆ.

Story first published: Tuesday, April 23, 2019, 20:36 [IST]
Other articles published on Apr 23, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+