For Quick Alerts
ALLOW NOTIFICATIONS  
For Daily Alerts

ಫ್ರೆಂಟ್‌ರೋಲ್‌, ಕಿಪ್‌ಅಪ್ಸ್‌, ಫ್ರೆಂಟ್ ಹ್ಯಾಂಡ್‌ ಸ್ಪ್ರಿಂಗ್ಸ್‌ನಲ್ಲಿ ಬಾಲಚಂದ್ರ ದಾಖಲೆ

Balachandra registered in India Book Of Records fof Most front rolls

ಬೆಂಗಳೂರು, ಮೇ 29: ಕತ್ತರಿಸಿದಷ್ಟೂ ಬೆಳೆಯೋ ಕೂದಲನ್ನು, ಉಗುರನ್ನು ಕತ್ತರಿಸದೆ ವರ್ಷಾನುಗಟ್ಟಲೆ ಬಿಟ್ಟರೆ ನಾವು ಇನ್ನೊಬ್ಬರಲ್ಲಿ ಅಚ್ಚರಿ ಹುಟ್ಟಿಸೋದಷ್ಟೇ ಅಲ್ಲ, ದಾಖಲೆ ಪುಸ್ತಕದಲ್ಲಿ ಹೆಸರೂ ಗಿಟ್ಟಿಸಿಕೊಳ್ಳುತ್ತೇವೆ. ಮೇಲ್ನೋಟಕ್ಕೆ ಇಂಥ ಕೆಲ ದಾಖಲೆಗಳು ಸುಲಭದಂತೆ ಕಂಡರೂ ಅವು ನಿಜವಾಗಿಯೂ ಸುಲಭವಲ್ಲ. ಇಂಥದ್ದೇ ದಾಖಲೆ ಗೀಳಿಗೆ ಬಿದ್ದು ದಾಖಲೆ ಬರೆದವರ ಇಲ್ಲೊಂದು ಕತೆಯಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಸುಬ್ಬರಾಜ್ ಲೇಔಟ್‌ನ ಲಕ್ಕಸಂದ್ರದ ಗಣೇಶ ದೇವಸ್ಥಾನದ ಸಮೀಪ ವಾಸವಿರುವ ಬಾಲಚಂದ್ರ ಅವರಿಗೆ ತಾನು ಹೊಸದೇನನ್ನೋ ಸಾಧಿಸುವಾಸೆ. ಇದೇ ಹುಮ್ಮಸ್ಸಿನಲ್ಲಿ ಬಾಲಚಂದ್ರ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಕಲಾಂ ಬುಕ್ಸ್ ಆಫ್ ರೆಕಾರ್ಡ್ಸ್ ಎರಡರಲ್ಲೂ ಹೆಸರು ಗಿಟ್ಟಿಸಿಕೊಂಡಿದ್ದಾರೆ.

Balachandra registered in India Book Of Records fof Most front rolls

ಫ್ರೆಂಟ್‌ರೋಲ್ಸ್, ಕಿಪ್‌ಅಪ್ಸ್‌, ಫ್ರೆಂಟ್ ಹ್ಯಾಂಡ್‌ ಸ್ಪ್ರಿಂಗ್ಸ್‌, ಕಾರ್ಟ್ ವೀಲ್ಸ್ ನಲ್ಲಿನ ಕಸರತ್ತಿಗಾಗಿ ಬಾಲಚಂದ್ರ ಅವರು ಕಲಾಂ ಬುಕ್ಸ್ ಆಫ್‌ ರೆಕಾರ್ಡ್ಸ್‌ನಲ್ಲಿ ಹೆಸರು ಬರೆಯಿಸಿಕೊಂಡಿದ್ದಾರೆ. ಕಾರ್ಟ್ ವೀಲ್ಸ್ ಒಂದನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ಸೇರಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲೂ ಗುರುತಿಸಿಕೊಂಡಿದ್ದಾರೆ. ಫ್ರೆಂಟ್ ಹ್ಯಾಂಡ್‌ ಸ್ಪ್ರಿಂಗ್ಸ್‌ ವೇಳೆ ಬಾಲಚಂದ್ರ 105 ಮೀ. ದೂರ ಕ್ರಮಿಸಿದ್ದರು.

ಒಂದು ನಿಮಿಷದಲ್ಲಿ 62 ಫ್ರೆಂಟ್ ರೋಲ್ಸ್, ಒಂದು ನಿಮಿಷದಲ್ಲಿ 30 ಕಿಪ್‌ಅಪ್ಸ್, ಒಂದು ನಿಮಿಷದಲ್ಲಿ 43 ಕಾರ್ಟ್ ವೀಲ್ಸ್, ಒಂದು ನಿಮಿಷದಲ್ಲಿ 35 ಫ್ರೆಂಟ್ ಹ್ಯಾಂಡ್ ಸ್ಪ್ರಿಂಗ್ಸ್ ಸಾಧನೆಗಾಗಿ ಬಾಲಚಂದ್ರ ದಾಖಲೆ ನಿರ್ಮಿಸಿದ್ದಾರೆ. ನಿಮಿಷದಲ್ಲಿ ಅತೀ ಹೆಚ್ಚು ಫ್ರೆಂಟ್ ರೋಲ್ ಗಿನ್ನಿಸ್ ದಾಖಲೆ ಇಂಗ್ಲೆಂಡ್‌ನ ಆ್ಯಶ್ಲಿ ವ್ಯಾಲ್ಲಿಸ್ (75 ಫ್ರೆಂಟ್ ರೋಲ್ಸ್) ಹೆಸರಿನಲ್ಲಿದೆ.

Story first published: Thursday, May 30, 2019, 13:28 [IST]
Other articles published on May 30, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+