X (ಟ್ವಿಟ್ಟರ್) ನಿಂದ ಬ್ಲೂ ಟಿಕ್ ಕಳೆದುಕೊಂಡ ಬಿಸಿಸಿಐ; ಕಾರಣವೇನು?
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್ X (ಟ್ವಿಟ್ಟರ್) ನಿಂದ ತಮ್ಮ ಬ್ಲೂ ಟಿಕ್ ಅನ್ನು ಕಳೆದುಕೊಂಡಿದೆ.
'ಹರ್ ಘರ್ ತಿರಂಗಾ ಅಭಿಯಾನ'ಕ್ಕೆ ಬೆಂಬಲವಾಗಿ ಸಾಮಾಜಿಕ ಜಾಲತಾಣದಲ್ಲಿನ ಪ್ರೊಫೈಲ್ ಚಿತ್ರವನ್ನು ಬದಲಾಯಿಸಲು ಪ್ರಧಾನಿ ನರೇಂದ್ರ ಮೋದಿಯವರ ಮನವಿಯ ನಂತರ, ಬಿಸಿಸಿಐ ಟ್ವಿಟ್ಟರ್‌ನಿಂದ ಬ್ಲೂ ಟಿಕ್ ಕಳೆದುಕೊಳ್ಳಬೇಕಾಯಿತು.

ಇದೇ ಆಗಸ್ಟ್ 15ರಂದು ದೇಶಾದಾದ್ಯಂತ ಆಚರಿಸಲಾಗುತ್ತಿರುವ 76ನೇ ಸ್ವಾತಂತ್ರ್ಯ ದಿನಾಚರಣೆಯ ಮೊದಲು, ಪ್ರಧಾನಿ ನರೇಂದ್ರ ಮೋದಿ ಅವರು ನಾಗರಿಕರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಪ್ರೊಫೈಲ್ ಚಿತ್ರಗಳನ್ನು ಭಾರತೀಯ ಧ್ವಜಕ್ಕೆ ಬದಲಾಯಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಹೀಗಾಗಿ, ಬಿಸಿಸಿಐನ ಅಪೆಕ್ಸ್ ಕ್ರಿಕೆಟ್ ಮಂಡಳಿಯು ಪ್ರಧಾನಮಂತ್ರಿಯ ಮನವಿಗೆ ಬದ್ಧವಾಗಿದೆ ಮತ್ತು ಅಭಿಯಾನದ ಭಾಗವಾಗಿ ತಮ್ಮ ಪ್ರೊಫೈಲ್ ಚಿತ್ರವನ್ನು ಬದಲಾಯಿಸಿತು.
ಆದರೆ, ಇದೇ ವೇಳೆ ಬಿಸಿಸಿಐ ತಮ್ಮ 'ಎಕ್ಸ್' (ಟ್ವಿಟ್ಟರ್) ಖಾತೆಯ ತನ್ನ ಬ್ಲೂ ಟಿಕ್ ಅನ್ನು ಕಳೆದುಕೊಂಡಿತು. ಇದರಿಂದ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಯಿತು.
ಟ್ವಿಟ್ಟರ್ ಪ್ಲಾಟ್‌ಫಾರ್ಮ್‌ನ ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ, "ಎಕ್ಸ್' ಮ್ಯಾನೇಜ್‌ಮೆಂಟ್ ಈಗ ಬಿಸಿಸಿಐನ ಪ್ರೊಫೈಲ್ ಅನ್ನು ಪರಿಶೀಲಿಸುತ್ತಿದೆ. ಅದು ಎಲ್ಲಾ ಮಾರ್ಗಸೂಚಿಗಳನ್ನು ಪೂರೈಸುತ್ತದೆ ಎಂದು ಭಾವಿಸಿದರೆ, ಬ್ಲೂ ಟಿಕ್ ಅನ್ನು ಮರಳಿ ಪಡೆಯುತ್ತದೆ.
ಇನ್ನು ಸ್ವಾತಂತ್ರ್ಯ ದಿನದ ನಂತರ, ಬಿಸಿಸಿಐ ತಮ್ಮ ಮೂಲ ಲೋಗೋಗೆ ಬದಲಾಯಿಸಿದರೆ, ಅದೇ ಪ್ರಕ್ರಿಯೆಯು ಅನುಸರಿಸಬಹುದು. ಆಗ ಮತ್ತೆ ಬಿಸಿಸಿಐ ತನ್ನ ನೀಲಿ ಟಿಕ್ ಅನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
ಭಾರತ ತಂಡದ ಕುರಿತು ಹೇಳುವುದಾದರೆ, ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಶನಿವಾರ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿ, ಒಂಬತ್ತು ವಿಕೆಟ್‌ಗಳಿಂದ ಗೆಲುವು ಸಾಧಿಸಿತು. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 2-2 ಅಂತರದಲ್ಲಿ ಸಮಬಲ ಸಾಧಿಸಿವೆ.
ಭಾನುವಾರ, ಆಗಸ್ಟ್ 13ರಂದು ಫ್ಲೋರಿಡಾದ ಲಾಡರ್‌ಹಿಲ್‌ನಲ್ಲಿ ನಡೆಯಲಿರುವ ಐದನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಎರಡೂ ತಂಡಗಳು ಸರಣಿ ವಶಪಡಿಸಿಕೊಳ್ಳಲು ಗೆಲುವನ್ನು ಎದುರು ನೋಡುತ್ತಿವೆ.
ವೆಸ್ಟ್ ಇಂಡೀಸ್ ವಿರುದ್ಧದ ಒಂದು ತಿಂಗಳ ಬಹು-ಮಾದರಿಯ ಸರಣಿಯ ಮುಕ್ತಾಯದ ನಂತರ, ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಬಹುನಿರೀಕ್ಷಿತ 2023ರ ಏಷ್ಯಾ ಕಪ್ ಪಂದ್ಯಾವಳಿ ಕಡೆಗೆ ಗಮನ ಹರಿಸಲಿದೆ.
ಶ್ರೀಲಂಕಾದ ಕ್ಯಾಂಡಿಯ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ, ಸೆಪ್ಟೆಂಬರ್ 2ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ತಂಡ ತಮ್ಮ ಅಭಿಯಾನವನ್ನು ಆರಂಭಿಸುತ್ತದೆ.
ಇನ್ನು ಅಕ್ಟೋಬರ್ 5ರಿಂದ ಭಾರತದಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ಗೆ ಸಂಯೋಜನೆ ಮಾಡುವ ಹಿನ್ನೆಲೆಯಲ್ಲಿ, ಶೀಘ್ರದಲ್ಲೇ ಬಿಸಿಸಿಐ ಏಷ್ಯಾ ಕಪ್ ಪಂದ್ಯಾವಳಿಗೆ ತಂಡವನ್ನು ಪ್ರಕಟಿಸುವ ಸಾಧ್ಯತೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications