Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಲ್ಲೇಶ್ವರಂನಲ್ಲೊಂದು ಸುಂದರ ವಾಲಿಬಾಲ್ ಒಳಾಂಗಣ ಕ್ರೀಡಾಂಗಣ

Bengaluru Malleshwaram : Volleyball indoor stadium inauguration on March 19

ಬೆಂಗಳೂರು, ಮಾರ್ಚ್ 18: ಕ್ರೀಡೆಗೆ ಹೆಚ್ಚಿನ ಪ್ರೋತ್ಸಹ ನೀಡುವ ನಿಟ್ಟಿನಲ್ಲಿ, ಕರ್ನಾಟಕದ ವಾಲಿಬಾಲ್ ಪ್ರೇಮಿಗಳಿಗೆ, ಪ್ರೋತ್ಸಾಹಕರಿಗೆ ಹಾಗೂ ಮುಂಬರುವ ವಾಲಿಬಾಲ್ ಆಟಗಾರರಿಗೆ ಒಂದು ಸಂತೋಷದ ಸುದ್ದಿ ಇಲ್ಲಿದೆ. ವಾಲಿಬಾಲ್‍ಗಾಗಿ ಒಂದು ಒಳಾಂಗಣ ಕ್ರೀಡಾಂಗಣ ಸೌಲಭ್ಯ ಕಲ್ಪಿಸಲಾಗುತ್ತಿದೆ.

ದಿನಾಂಕ 19ನೇ ಮಾರ್ಚ್ 2018 ರಂದು ಸಂಜೆ 6.00 ಘಂಟೆಗೆ ಈ ವಾಲಿಬಾಲ್ ಕ್ರೀಡಾಂಗಣ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು. ಮಾನ್ಯ ಕೇಂದ್ರ ಮಂತ್ರಿಗಳಾದ ಡಿ.ವಿ.ಸದಾನಂದಗೌಡರು, ಅಂಕಿ ಅಂಶ ಮತ್ತು ಕಾರ್ಯಕ್ರಮದ ಅನುಷ್ಠಾನ ಸಚಿವರು ಈ ಕ್ರೀಡಾಂಗಣವನ್ನು ಉದ್ಘಾಟಿಸಲಿದ್ದಾರೆ.

ಸದರಿ ಸ್ಥಳದಲ್ಲಿ ಬಿ.ಬಿ.ಎಂ.ಪಿ ಕಛೇರಿ ಹಾಗೂ ವಸತಿ ಗೃಹದ ಕಟ್ಟಡವಿತ್ತು. ಬಿ.ಬಿ.ಎಂ.ಪಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಅವರ ಮನ ಓಲೈಸಿ, ಬಿ.ಬಿ.ಎಂ.ಪಿ ಕಛೇರಿಯನ್ನು ಸೇವಾ ಕೇಂದ್ರ ಕಟ್ಟಡಕ್ಕೆ ಸ್ಥಳಾಂತರಿಸಿ. ಹಳೆಯ ಕಟ್ಟಡ ತೆರವುಗೊಳಿಸಿ ಅದೇ ಸ್ಥಳದಲ್ಲಿ ಇಂದು ಬೃಹತ್ ಅಂತರಾಷ್ಟ್ರೀಯ ಗುಣಮಟ್ಟದ ವಾಲಿಬಾಲ್ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಿಲಾಗಿದೆ.

ಅಂಕಿ ಅಂಶ ಮತ್ತು ಕಾರ್ಯಕ್ರಮದ ಅನುಷ್ಠಾನ

ಅಂಕಿ ಅಂಶ ಮತ್ತು ಕಾರ್ಯಕ್ರಮದ ಅನುಷ್ಠಾನ

ಈ ಕ್ರೀಡಾಂಗಣವನ್ನು ಮಾನ್ಯ ಡಿ.ವಿ.ಸದಾನಂದಗೌಡರು, ಅಂಕಿ ಅಂಶ ಮತ್ತು ಕಾರ್ಯಕ್ರಮದ ಅನುಷ್ಠಾನ ಸಚಿವರು ಹಾಗೂ ರಾಜೀವ್ ಚಂದ್ರಶೇಖರ್ ರವರು, ರಾಜ್ಯ ಸಭಾ ಸದಸ್ಯರು ಹಾಗೂ ಶಾಸಕರಾದ ಡಾ||. ಸಿ.ಎನ್.ಅಶ್ವಥ್‍ನಾರಾಯಣ್ ರವರ ಅನುದಾನದಲ್ಲಿ ನಿರ್ಮಿಸಲಾಗಿದೆ. ಸದಾನಂದ ಗೌಡ (1.90 ಕೋಟಿ ರು), ರಾಜೀವ್ ಚಂದ್ರಶೇಖರ್(0.50), ಸಿ.ಎಸ್ ಅಶ್ವಥನಾರಾಯಣ (3.21 ಕೋಟಿ ರು), ಒಟ್ಟು 5.61 ಕೋಟಿ ರು ಖರ್ಚಾಗಿದೆ.

ಅಂತಾರಾಷ್ಟ್ರೀಯ ಗುಣಮಟ್ಟ ವಿನ್ಯಾಸ

ಅಂತಾರಾಷ್ಟ್ರೀಯ ಗುಣಮಟ್ಟ ವಿನ್ಯಾಸ

ಈ ಕ್ರೀಡಾಂಗಣವು 48*23 ಮೀಟರ್ ಜಾಗದಲ್ಲಿ ನಿರ್ಮಿಸಲಾಗಿದ್ದು. ಅಂತಾರಾಷ್ಟ್ರಿಯ ಗುಣ ಮಟ್ಟದ ಒಂದು ವಾಲಿಬಾಲ್ ಕೋರ್ಟ್, 2 ಟೀಮ್ ರೂಂಮ್‍ಗಳು. 2 ವಾರ್ಡ್(ಸ್ಟೋರ್) ರೂಂಮ್, 500 ಜನರು ಕೂರುವ ಸಾಮರ್ಥ್ಯದ ಸಾರ್ವಜನಿಕ ಗ್ಯಾಲರಿ ಹಾಗೂ ವಿ.ಐ.ಪಿ ಗ್ಯಾಲರಿ. ಆಂಟಿ ಸ್ಕಿಡ್ ವಿನಾಯಿಲ್ (6 ಎಮ್.ಎಮ್) ನೆಲಹಾಸು. ಕ್ರೀಡಾಗಣದ ಉದ್ದ-ಅಗಲ ಹಾಗೂ 12.5 ಮೀಟರ್ ಎತ್ತರದ ಕಟ್ಟಡವನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ವಿನ್ಯಾಸಗೋಳಿಸಿ ನಿರ್ಮಿಸಲಾಗಿದೆ.

ಇಲ್ಲಿ ನುರಿತ ತರಬೇತುದಾರರಿಂದ ತರಬೇತಿ

ಇಲ್ಲಿ ನುರಿತ ತರಬೇತುದಾರರಿಂದ ತರಬೇತಿ

ಇಲ್ಲಿ ನುರಿತ ತರಬೇತುದಾರರಿಂದ ತರಬೇತಿ ನೀಡಲಾಗುವುದು. ಕ್ರೀಡಾಂಗಣದ ಮುಂಭಾಗದಲ್ಲಿ 3 ಅಂತಸ್ಥಿನ ಕಟ್ಟಡ ನಿರ್ಮಿಲಾಗಿದ್ದು. ಇದರಲ್ಲಿ ಶಾಸಕರ ಕಾರ್ಯಾಲಯ ಕೂಡ ಈ ಕಟ್ಟಡದಲ್ಲಿ ಬರಲಿದೆ. ಡಿಜಿಟಲ್ / ಸಿಮ್ಯುಲೇಷನ್ ಕಲಿಕಾ ಕೇಂದ್ರ ಅಭಿವೃದ್ದಿ ಪಡಿಸಲಾಗುವುದು. ಡ್ರೆಸ್ ಚೇಂಜಿಗ್ ರೂಂಮ್ ಹಾಗೂ ಶೌಚಾಲಯ ವ್ಯವಸ್ಥೆಗಳನ್ನೊಳಗೊಂಡಿರುತ್ತದೆ.

ಏಕೈಕ ಒಳಾಂಗಣ ಕ್ರೀಡಾಂಗಣ

ಏಕೈಕ ಒಳಾಂಗಣ ಕ್ರೀಡಾಂಗಣ

ರಾಜ್ಯದಲ್ಲಿ ಕೇವಲ ವಾಲಿಬಾಲ್ ಆಟಕ್ಕಾಗಿ ಮೀಸಲಾಗಿರುವ ಏಕೈಕ ಒಳಾಂಗಣ ಕ್ರೀಡಾಂಗಣ ಇದಾಗಿದೆ. ಇದರೊಂದಿಗೆ ವಾಲಿಬಾಲ್ ಅಕಾಡೆಮಿ ಮಾಡುವ ಯೊಜನೆಯೂ ಇದೆ.

ಇದರ ಜೊತೆಗೆ ಇದೆ ಚಂದ್ರಶೇಖರ್ ಆಜಾದ್ ಆಟದ ಮೈದಾನದಲ್ಲಿ ಸಿಂಥಟಿಕ್ ರನ್ನಿಂಗ್ ಟ್ರಾಕ್, ಎರಡು ಕಬಡ್ಡಿ ಮೈದಾನ, ಒಂದು ಬಾಲ್ ಬ್ಯಾಟ್ಮಿಟನ್ ಹಾಗೂ ಒಂದು ಶಟಲ್ ಕಾಕ್ / ಹೊರಾಂಗಣ ವಾಲಿಬಾಲ್ ಆಟದ ಮೈದಾನ ಅಭಿವೃದ್ದಿ ಕಾಮಗಾರಿ ನಡೆಯುತ್ತಿದೆ. 2019 ರೊಳಗೆ ಇಡೀ ಆಟದ ಮೈದಾನದ ಚಿತ್ರಣ ಸಂಪೂರ್ಣ ಬದಲಾಗಲಿದೆ.

Story first published: Sunday, March 18, 2018, 12:55 [IST]
Other articles published on Mar 18, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+