ಡ್ರಗ್ಸ್ ಸೇವನೆ: ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾಗೆ ನಿಷೇಧ
ಮೆಲ್ಬೋರ್ನ್, ಮಾ. 08: ನಿಷೇಧಿತ ಔಷಧಿ ಸೇವಿಸಿ ಡ್ರಗ್ ಟೆಸ್ಟ್ ನಲ್ಲಿ ಫೇಲಾದ ಕಾರಣ ಜನಪ್ರಿಯ ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾ ಅವರಿಗೆ ತಾತ್ಕಾಲಿಕ ನಿಷೇಧ ಹೇರಲಾಗಿದೆ ಎಂದು ಅಂತಾರಾಷ್ಟ್ರೀಯ ಟೆನಿಸ್ ಫೆಡರೇಷನ್ (ಐಟಿಎಫ್) ಮಂಗಳವಾರ ಪ್ರಕಟಿಸಿದೆ.
28ವರ್ಷ ವಯಸ್ಸಿನ ಮರಿಯಾ ಶರಪೋವಾ ಅವರು ಆಸ್ಟ್ರೇಲಿಯನ್ ಓಪನ್ ವೇಳೆ ಡ್ರಗ್ ಟೆಸ್ಟ್ ನಲ್ಲಿ ಫೇಲ್ ಆಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶರಪೋವಾ ಈ ಔಷಧವನ್ನು ಐಟಿಎಫ್ ನಿಷೇಧಿತ ಪಟ್ಟಿಯಲ್ಲಿ ಯಾವಾಗಿನಿಂದ ಸೇರಿಸಿದರೋ ಗೊತ್ತಿಲ್ಲ. ನನ್ನ ನಿರ್ಲಕ್ಷ್ಯದಿಂದ ಈ ಪ್ರಮಾದವಾಗಿದೆ. [ಮರಿಯಾ ಶರಪೋವಾ ನಿದ್ದೆಗೆಡಿಸಿದ ಸಚಿನ್ 'ಫ್ಯಾನ್ಸ್']

ಜನವರಿ 01ರಿಂದ ಮೆಲ್ಡೋರ್ನೆಟ್ ಎಂಬ ಔಷಧಿಯಲ್ಲಿರುವ ಮೆಲ್ಡೋನಿಯಂ ಅಂಶಕ್ಕೆ ನಿಷೇಧಿಸಲಾಗಿದೆ. ಮಾದಕ ದ್ರವ್ಯ ನಿಯಂತ್ರಣ ಏಜನ್ಸಿ (ವಾಡಾ)ಯ ಹೊಸ ನಿಯಮದ ಈ ಬಗ್ಗೆ ನನಗೆ ತಿಳಿದಿಲ್ಲ ಎಂದು ಶರಪೋವಾ ಹೇಳಿದ್ದಾರೆ.
2004ರಲ್ಲಿ ವಿಂಬಲ್ಡನ್ ಗೆದ್ದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಸಾಧನೆ ಮಾಡಿದ ಶರಪೋವಾ ಅವರು ವಿಶ್ವದ ನಂ.1 ಆಟಗಾರ್ತಿಯಾಗಿ ಮೆರೆದರು. ಟೆನಿಸ್ ಕ್ರೀಡೆಗೆ ಗ್ಲಾಮರ್ ಟಚ್ ತಂದವರು. ಐಟಿಎಫ್ ನ ಮಾದಕ ದ್ರವ್ಯ ನಿಯಂತ್ರಣ ಯೋಜನೆಯಂತೆ ಈ ರೀತಿ ಉದ್ದೀಪನ ಪರೀಕ್ಷೆಯಲ್ಲಿ ಫೇಲ್ ಆದ ಕ್ರೀಡಾಪಟುಗಳಿಗೆ ನಾಲ್ಕು ವರ್ಷಗಳ ನಿಷೇಧ ಹೇರಲಾಗುತ್ತದೆ.
ಈ ಹಿಂದೆ ಕ್ರಿಕೆಟ್ ಜಗತ್ತು ಕಂಡ ಮಹಾನ್ ಆಟಗಾರ ಸಚಿನ್ ತೆಂಡೂಲ್ಕರ್ ಯಾರೆಂದು ನನಗೆ ಗೊತ್ತಿಲ್ಲ ಎಂದ ರಷ್ಯಾದ ಜನಪ್ರಿಯ ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾ ಹೇಳುವ ಮೂಲಕ ವಿವಾದಕ್ಕೆ ಕಾರಣರಾಗಿದ್ದರು. ಮರಿಯಾ ವಿರುದ್ಧ ಸಚಿನ್ ಅಭಿಮಾನಿಗಳು ಕಿಡಿಕಾರಿದ್ದರು. [ಇಷ್ಟಕ್ಕೂ ಸಚಿನ್ ಬಗ್ಗೆ ಮರಿಯಾ ಹೇಳಿದ್ದೇನು?]
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications