ಅಮೆರಿಕದಲ್ಲಿ ಚಿನ್ನದ ಬೇಟೆಯಾಡಿದ ಬಿಎನ್ಎಸ್.ರೆಡ್ಡಿ
ಬೆಂಗಳೂರು, ಜುಲೈ 07 : ಅಮೆರಿಕದಲ್ಲಿ ನಡೆದ ವರ್ಲ್ಡ್ ಪೊಲೀಸ್ ಅಂಡ್ ಫೈರ್ ಗೇಮ್ಸ್-2015ರಲ್ಲಿ ಪಾಲ್ಗೊಂಡಿದ್ದ ಬೆಂಗಳೂರು ನಗರ ಜಂಟಿ ಪೊಲೀಸ್ ಆಯುಕ್ತ ಬಿ.ಎಸ್.ಎಸ್.ರೆಡ್ಡಿ ಅವರು ಚಿನ್ನದ ಪದಕಗಳಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಚಿನ್ನದ ಪದಕ ಗೆದ್ದ ಮೊದಲಿಗರು ಎಂಬ ಕೀರ್ತಿಗೆ ರೆಡ್ಡಿ ಅವರು ಪಾತ್ರರಾಗಿದ್ದಾರೆ.
ಲಾನ್ ಟೆನಿಸ್ ಆಟಗಾರರಾಗಿರುವ ಬಿ.ಎನ್.ಎಸ್.ರೆಡ್ಡಿ ಅವರು ವಾಷಿಂಗ್ಟನ್‌ನಲ್ಲಿ ನಡೆದ ವರ್ಲ್ಡ್ ಪೊಲೀಸ್ ಅಂಡ್ ಫೈರ್ ಗೇಮ್ಸ್ -2015ರಲ್ಲಿ ಪಾಲ್ಗೊಂಡಿದ್ದರು. ಅಮೆರಿಕದ ಬ್ರೂಸ್ ಬ್ಯಾರಿಹೋಸ್ ಅವರನ್ನು 7-5, 7-6 ಸೆಟ್‌ಗಳಿಂದ ಸೋಲಿಸಿದ ಅವರು ಚಿನ್ನದ ಪದಕ ಪಡೆದಿದ್ದಾರೆ.

ವರ್ಲ್ಡ್ ಪೊಲೀಸ್ ಅಂಡ್ ಫೈರ್ ಗೇಮ್ಸ್‌ನಲ್ಲಿ ಪಾಲ್ಗೊಂಡು ಚಿನ್ನದ ಪದಕಗಳಿಸಿದ ಕರ್ನಾಟಕದ ಮತ್ತು ದಕ್ಷಿಣ ಭಾರತದ ಮೊದಲಿಗರು ಎಂಬ ಕೀರ್ತಿಗೆ ಬಿ.ಎಸ್.ಎಸ್.ರೆಡ್ಡಿ ಅವರು ಪಾತ್ರರಾಗಿದ್ದಾರೆ. ಇದುವರೆಗೆ ಭಾರತದ ಇಬ್ಬರು ಮಾತ್ರ ಚಿನ್ನದ ಪದಕಗಳಿಸಿದ್ದಾರೆ.
ಪ್ರಸ್ತುತ ಬಿ.ಎನ್.ಎಸ್.ರೆಡ್ಡಿ ಅವರು ಬೆಂಗಳೂರು ನಗರದ ಜಂಟಿ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವರ್ಲ್ಡ್ ಪೊಲೀಸ್ ಅಂಡ್ ಫೈರ್ ಗೇಮ್ಸ್-2015ರಲ್ಲಿ ಅವರು ಭಾರತವನ್ನು ಪ್ರತಿನಿಧಿಸಿದ್ದರು.
5 ಚಿನ್ನದ ಪದಕಗಳನ್ನು ಗೆದ್ದಿದ್ದರು : 2013ರಲ್ಲಿ ಬಿ.ಎನ್.ಎಸ್.ರೆಡ್ಡಿ ಅವರು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವಾರ್ಷಿಕ ಕ್ರೀಡಾ ಕೂಟದಲ್ಲಿ ಐದು ಚಿನ್ನದ ಪದಕಗಳನ್ನು ಗೆದ್ದಿದ್ದರು. ರೆಡ್ಡಿ ಅವರು ಟೆನಿಸ್, ಬಿಲಿಯರ್ಡ್ಸ್, ಸ್ನೂಕರ್‌ಗಳಲ್ಲಿ ಪದಕ ಬೇಟೆಯಾಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications