Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎತ್ತರದಲ್ಲಿ ಅಭ್ಯಾಸ: ದಿಗ್ಗಜರ ಸಾಲಿನಲ್ಲಿ ನಿಂತ ಬ್ರಿಟಿಷ್ ಬಾಕ್ಸರ್

ದುಬೈ, ನವೆಂಬರ್ 24 : ಅಂಥೋಣಿ ಜೋಶುವಾ ಎಂಬ ಬ್ರಿಟಿಷ್ ಬಾಕ್ಸರ್ ಈಗ ಕ್ರೀಡಾ ದಿಗ್ಗಜರ ಸಾಲಿಗೆ ಹೊಸ ಸೇರ್ಪಡೆಯಾಗಿದ್ದಾರೆ. ವಿಶ್ವದ ಅತಿ ಎತ್ತರದ ಹಾಗೂ ಐಷಾರಾಮಿ ಹೋಟೆಲಿನ ಹೆಲಿಪ್ಯಾಡ್ ಮೇಲೆ ಬಾಕ್ಸಿಂಗ್ ತರಬೇತಿ ಪಡೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಭೂಮಿಯಿಂದ 210 ಮೀಟರ್ ಎತ್ತರದ ಪ್ರದೇಶದಲ್ಲಿ ಹೆಲಿಪ್ಯಾಡ್ ಮೇಲೆ ಬಾಕ್ಸರ್ ವರ್ಕೌಟ್ ಮಾಡುವ ವಿಡಿಯೋ ಹಾಗೂ ಚಿತ್ರಗಳು ಕ್ರೀಡಾಪ್ರೇಮಿಗಳ ಕಣ್ಸೆಳೆದಿದೆ.

British Boxer Anthony Joshua trains on the Burj Al Arab Helipad in Dubai

ಐಬಿಎಫ್ ಹಾಗೂ ಡಬ್ಲ್ಯೂ ಬಿಎ ಸೂಪರ್ ಚಾಂಪಿಯನ್ ಆಗಿರುವ ಜೋಶುವಾ ಅವರು ತಮ್ಮ ತರಬೇತಿಯ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಬುರ್ಜ್ ಅಲ್ ಅರಬ್ ಹಲವಾರು ಕ್ರೀಡಾ ದಿಗ್ಗಜರಿಗೆ ತರಬೇತಿಯ ತಾಣವಾಗಿ ಹೆಸರುವಾಸಿಯಾಗಿದೆ. 2004ರಲ್ಲಿ ಟೈಗರ್ ವುಡ್ಸ್ ಗಾಲ್ಫ್ ಆಡಿದ್ದರು. 2005ರಲ್ಲಿ ರೋಜರ್ ಫೆಡರರ್ ಹಾಗೂ ಆಂಡ್ರೆ ಅಗಾಸ್ಸಿ ಅವರು ಟೆನಿಸ್ ಆಡಿ ರಂಜಿಸಿದ್ದರು. 2011ರಲ್ಲಿ ರೊರಿ ಮೆಕ್ ಲ್ರಾಯ್ ಅವರು ಗಾಲ್ಫ್ ಆಡಿದ್ದರು.


ಈಗ ಕ್ರಿಸ್ ಯುಬ್ಯಾಂಕ್ ಅವರ ಪುತ್ರ ಸೆಬಾಸ್ಟಿಯನ್ ಯೂಬ್ಯಾಂಕ್ ಜತೆ ಜೋಶುವಾ ಅವರು ಬಾಕ್ಸಿಂಗ್ ತರಬೇತಿ ಪಡೆಯುವ ವಿಡಿಯೋ ನೋಡಿ ಆನಂದಿಸಿ..

Story first published: Wednesday, January 3, 2018, 10:16 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+