For Quick Alerts
ALLOW NOTIFICATIONS  
For Daily Alerts

ದೋಹಾ 800 ಮೀ. ರೇಸ್‌ನಲ್ಲಿ ಬಂಗಾರ ಗೆದ್ದ ಲಿಂಗ ವಿವಾದಿತ ಅಥ್ಲೀಟ್!

Caster Semenya wins Doha 800m in first race since gender ruling defeat

ದೋಹಾ, ಮೇ 4: ಕತಾರ್‌ನ ದೋಹಾದಲ್ಲಿ ನಡೆದ 800 ಮೀ. ಓಟದ ಸ್ಪರ್ಧೆಯಲ್ಲಿ ಲಿಂಗ ವಿವಾದಿತ ಅಥ್ಲೀಟ್ ಕ್ಯಾಸ್ಟರ್ ಸೆಮೆನ್ಯಾ ಬಂಗಾರ ಗೆದ್ದಿದ್ದಾರೆ. ಇಂಟರ್ ನ್ಯಾಷನಲ್ ಅಸೋಸಿಯೇಷನ್ ಆಫ್ ಅಥ್ಲೆಟಿಕ್ಸ್ ಫೆಡರೇಶನ್ (ಐಎಎಎಫ್) ಲಿಂಗ ನೀತಿಯ ವಿರುದ್ಧ ಹೋರಾಟ ಕೈಗೊಂಡ ಬಳಿಕ ಸೆಮೆನ್ಯಾಗೆ ಲಭಿಸಿದ ಮೊದಲ ಪದಕವಿದು.

ಶುಕ್ರವಾರ (ಮೇ 3) ನಡೆದ ಐಎಎಎಫ್ ಡೈಮಂಡ್ ಲೀಗ್ 10ನೇ ಆವೃತ್ತಿಯ ಕ್ರೀಡಾಕೂಟದ ಮಹಿಳಾ ವಿಭಾಗದ 800 ಮೀ. ಓಟದಲ್ಲಿ ಸ್ಪರ್ಧಿಸಿದ್ದ ಎರಡು ಬಾರಿಯ ಒಲಿಂಪಿಕ್ಸ್ ಚಾಂಪಿಯನ್, ದಕ್ಷಿಣ ಆಫ್ರಿಕಾ ಅಥ್ಲೀಟ್ ಕ್ಯಾಸ್ಟರ್ 1:54.99 ಸೆ. ಕಾಲಾವಧಿಯಲ್ಲಿ ಗುರಿ ತಲುಪುವ ಮೂಲಕ ಚಿನ್ನ ಬಾಚಿಕೊಂಡರು.

ಪುರಷರ ದೇಹದಲ್ಲಿರುವ ಟೆಸ್ಟೋಸ್ಟೆರಾನ್ ಹಾರ್ಮೋನ್ ಪ್ರಮಾಣ ಲೀಟರ್ ರಕ್ತಕ್ಕೆ 5 ನ್ಯಾನೋಮೋಲ್‌ಗಿಂತಲೂ ಕಡಿಮೆ ಇರುವ ಮಹಿಳೆಯರು ಮಾತ್ರ ಮಹಿಳಾ ವಿಭಾಗದಲ್ಲಿ ಸ್ಪರ್ಧಿಸಬಹುದು ಎಂಬ ಐಎಎಎಫ್ ನೀತಿಯ ವಿರುದ್ಧ ಸೆಮೆನ್ಯಾ ದಾವೆ ಹೂಡಿ ಸೋತಿದ್ದರು. ಕೇಸ್ ಸೋತ ಎರಡೇ ದಿನದಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಂಡು ಸೆಮೆನ್ಯಾ ಪದಕ ಗೆದ್ದಿದ್ದಾರೆ.

Story first published: Saturday, May 4, 2019, 0:35 [IST]
Other articles published on May 4, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+