Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Chess: ಶ್ರೇಯಾಂಕ ಪಟ್ಟಿಯಲ್ಲಿ ವಿಶ್ವನಾಥನ್ ಆನಂದ್ ಹಿಂದಿಕ್ಕಿದ 17ರ ಹರೆಯದ ಡಿ ಗುಕೇಶ್

17 ವರ್ಷದ ಭಾರತದ ಗ್ರ್ಯಾಂಡ್‌ಮಾಸ್ಟರ್ ಡಿ ಗುಕೇಶ್ ವಿಶೇಷ ಸಾಧನೆಯೊಂದು ಮಾಡಿದ್ದಾರೆ. ಕಳೆದ ಮಂಗಳವಾರ (ಆಗಸ್ಟ್ 1) ನಡೆದ ಫಿಡೆ ವಿಶ್ವಕಪ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಅಜರ್‌ಬೈಜಾನ್‌ನ ಮಿಸ್ರದ್ದೀನ್ ಇಸ್ಕಂದರೋವ್ ವಿರುದ್ಧ ಜಯಗಳಿಸಿದ್ದಾರೆ. ಈ ಮೂಲಕ ಲೈವ್ ವರ್ಲ್ಡ್ (FIDE) ಶ್ರೇಯಾಂಕದಲ್ಲಿ ಭಾರತದ ದಿಗ್ಗಜ ವಿಶ್ವನಾಥನ್ ಆನಂದ್ ಅವರನ್ನು ಹಿಂದಿಕ್ಕಿದ್ದಾರೆ.

ಗುಕೇಶ್ ಅವರು ತಮ್ಮ ಎರಡನೇ ಸುತ್ತಿನ ಪಂದ್ಯದ ಎರಡನೇ ಗೇಮ್‌ನಲ್ಲಿ ಅಜರ್‌ಬೈಜಾನ್‌ನ ಇಸ್ಕಂದರೋವ್ ಅವರನ್ನು ಎದುರಿಸಿದ್ದರು. ಈ ಪಂದ್ಯದಲ್ಲಿ 44 ಮೂವ್‌ಗಳಲ್ಲಿ ಎದುರಾಳಿಯನ್ನು ಮಣಿಸಿ ಈ ಸಾಧನ ಮಾಡಿದ್ದಾರೆ. ಅಂತರಾಷ್ಟ್ರೀಯ ಚೆಸ್ ಫೆಡರೇಶನ್ FIDE ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.

Chess: 17-year-old Gukesh replaces Viswanathan Anand to become highest Indian in FIDE Rankings

"ಗುಕೇಶ್ ಡಿ ಇಂದು ಮತ್ತೊಮ್ಮೆ ಗೆಲುವು ಸಾಧಿಸಿದ್ದಾರೆ ಜೊತೆಗೆ ಲೈವ್ ರೇಟಿಂಗ್‌ನಲ್ಲಿ ವಿಶ್ವನಾಥನ್ ಆನಂದ್ ಅವರನ್ನು ಹಿಂದಿಕ್ಕಿದ್ದಾರೆ! ಮುಂದಿನ ಅಧಿಕೃತ FIDE ರೇಟಿಂಗ್ ಪಟ್ಟಿ ಅಧಿಕೃತವಾಗಿ ಸಪ್ಟೆಂಬರ್ 1ರಂದು ಬಿಡುಗಡೆಯಾಗಲಿದ್ದು ಅದಕ್ಕೆ ಇನ್ನೂ ಸುಮಾರು ಒಂದು ತಿಂಗಳು ಇದೆ. ಆ ಪಟ್ಟಿಯಲ್ಲಿ ಭಾರತದ 17ರ ಹರೆಯದ ಆಟಗಾರ ಟಾಪ್ 10ರಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಾಗಿದೆ" ಎಂದು ಎಫ್‌ಐಡಿಇ ಟ್ವೀಟ್ ಮಾಡಿದೆ.

ಮಿಸ್ರದ್ದೀನ್ ಇಸ್ಕಂದರೋವ್ ವಿರುದ್ಧದ ಪಂದ್ಯದಲ್ಲಿ ಗೆಲುವಿನೊಂದಿಗೆ 2.5 ರೇಟಿಂಗ್ ಪಾಯಿಂಟ್‌ಗಳ ಏರಿಕೆ ಕಂಡಿರುವ ಗುಕೇಶ್ ಅವರ ಲೈವ್ ರೇಟಿಂಗ್ ಈಗ 2755.9ಕ್ಕೆ ತಲುಪಿದೆ. ಇನ್ನು ವಿಶ್ವನಾಥನ್ ಆನಂದ್ ಅವರು 2754.0 ರೇಟಿಂಗ್ ಹೊಂದಿದ್ದಾರೆ. ಇದರ ಪರಿಣಾಮವಾಗಿ ಲೈವ್ ಶ್ರೇಯಾಂಕದಲ್ಲಿ ಗುಕೇಶ್ ಆನಂದ್ ವಿಶ್ವದ 9ನೇ ಶ್ರೇಯಾಂಕವನ್ನು ಪಡೆದುಕೊಂಡಿದ್ದಾರೆ ಐದು ಬಾರಿ ವಿಶ್ವ ಚಾಂಪಿಯನ್ 10 ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಜುಲೈ 1991ರಲ್ಲಿ ಮೊದಲ ಬಾರಿಗೆ ವಿಶ್ವದ ಟಾಪ್ 10ರಲ್ಲಿ ಸ್ಥಾನ ಪಡೆದ ವಿಶ್ವನಾಥನ್ ಆನಂದ್ ಜನವರಿ 1987 ರಿಂದ ಎಲ್ಲಾ ಪ್ರಕಟಿತ ಪಟ್ಟಿಗಳಲ್ಲಿ ಭಾರತದ ಅಗ್ರ ಶ್ರೇಯಾಂಕದ ಆಟಗಾರನಾಗಿ ಉಳಿದಿದ್ದರು. ಇದೀಗ ಗುಕೇಶ್ ದಿಗ್ಗಜ ಚೆಸ್ ಆಟಗಾರನನ್ನು ಹಿಂದಿಕ್ಕಿದ್ದಾರೆ. ಗುಕೇಶ್ ಮೂರನೇ ಸುತ್ತಿನಲ್ಲಿ ಭಾರತದವರೇ ಆದ ಎಸ್‌ಎಲ್ ನಾರಾಯಣನ್ ಅವರನ್ನು ಎದುರಿಸಲಿದ್ದಾರೆ.

Story first published: Friday, August 4, 2023, 11:18 [IST]
Other articles published on Aug 4, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+