Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Chess: ಗ್ರ್ಯಾಂಡ್‌ ಮಾಸ್ಟರ್‌ಗೆ ಸೋಲಿನ ರುಚಿ ತೊರಿಸಿದ ಭಾರತ 9 ವರ್ಷ ಪೋರ

ದೆಹಲಿಯ 9 ವರ್ಷದ ಯುವ ಚೆಸ್‌ ಆಟಗಾರ ಇತಿಹಾಸ ನಿರ್ಮಿಸಿದ್ದಾರೆ. ಕೆಐಐಟಿ ಇಂಟರ್ನ್ಯಾಷನಲ್ ಓಪನ್ ಪಂದ್ಯಾವಳಿಯ ಒಂಬತ್ತನೇ ಮತ್ತು ಅಂತಿಮ ಸುತ್ತಿನಲ್ಲಿ ಯುನೈಟೆಡ್ ಸ್ಟೇಟ್ಸ್‌ನ ರಸ್ಸೆಟ್ ಜಿಯಾಟ್ಡಿನೋವ್ ಅವರನ್ನು ಮಣಿಸಿ ದಾಖಲೆ ಬರೆದಿದ್ದಾರೆ. ನಿಗದಿತ ಸಮಯದಲ್ಲಿ ಗ್ರ್ಯಾಂಡ್‌ ಮಾಸ್ಟರ್‌ನ್ನು ಸೋಲಿಸಿದ ಅತಿ ಕಿರಿಯ ಭಾರತೀಯ ಹಾಗೂ ವಿಶ್ವದ ಮೂರನೇ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ.

ಯುನೈಟೆಡ್‌ ಸ್ಟೇಟ್ಸ್‌ನ ಆಟಗಾರನಿಗೆ ಸೋಲಿನ ರುಚಿ ತೋರಿಸಿದ ಆಟಗಾರ ದೆಹಲಿಯ ಅರಿತ್ ಕಪಿಲ್. ಈ ಸಾಧನೆ ಮೂಲಕ ಇವರು ವಿಶ್ವ ಮಟ್ಟದಲ್ಲಿ ಸದ್ದು ಮಾಡಿದ್ದಾರೆ. ಇವರು ಚಿಕ್ಕ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೂರನೇ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಇದೇ ವರ್ಷದ ಆರಂಭದಲ್ಲಿ 8 ವರ್ಷದ ಭಾರತೀಯ ಮೂಲದ ಸಿಂಗಾಪುರದ ಅಶ್ವಥ್ ಕೌಶಿಕ್ ಅವರು ಪೋಲೆಂಡ್‌ನ ಜಾಸೆಕ್ ಸ್ತೂಪ ಅವರನ್ನು ಮಣಿಸಿ ದಾಖಲೆ ನಿರ್ಮಿಸಿದ್ದರು. ಗ್ರ್ಯಾಂಡ್‌ ಮಾಸ್ಟರ್‌ನನ್ನು ಸೋಲಿಸಿದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ಅಶ್ವಥ್ ಕೌಶಿಕ್ ಪಾಲಾಗಿದೆ.

Chess Aarit Kapil Sets Record as Youngest Indian to Defeat a Grandmaster

ಮುಂದಿದೆ ಕಠಿಣ ಸವಾಲು

ಈ ಗೆಲುವಿನ ಬಳಿಕ ಅರಿತ್ ಕಪಿಲ್‌ ಅವರನ್ನು ಅಗ್ರ ಯುವ ಚೆಸ್ ಆಟಗಾರರ ಪಟ್ಟಿಗೆ ಸೇರಿಸಲಾಗಿದೆ. ಅವರು ಮುಂದಿನ ಪಂದ್ಯಗಳಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ತಿಂಗಳ ಕೊನೆಯದಲ್ಲಿ ಭಾರತದಲ್ಲಿ ನಡೆಯಲಿರುವ ಅಂಡರ್‌ 13 ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಿಂದ ಕಠಿಣ ಸವಾಲುಗಳು ಆರಂಭವಾಗುತ್ತವೆ. ನಂತರ ಅವರದ್ದೇ 9 ವರ್ಷ ವಯೋಮಿತಿ ಚಾಂಪಿಯನ್‌ ಶಿಪ್‌ನಲ್ಲಿ ಅವರು ಪುಣೇಯಲ್ಲಿ ಅಖಾಡ ಪ್ರವೇಶಿಸಲಿದ್ದಾರೆ.

ಹೇಗಿತ್ತು ಅರಿತ್ ಆಟ?

ಅರಿತ್ ಕಪಿಲ್‌ ತಮ್ಮ ಒಂಬತ್ತು ವರ್ಷ, ಎರಡು ತಿಂಗಳು ಮತ್ತು 18 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದಾರೆ. ಇವರು ಟೂರ್ನಿಯಲ್ಲಿ ಬಿಳಿ ಕಾಯಿಗಳಿಂದ ಆಟವನ್ನು ಆರಂಭಿಸಿದರು. ಆರಂಭದಲ್ಲಿ ಕೊಂಚ ಎಡವಿದರೂ, ಕೊನೆಯಲ್ಲಿ ಸ್ಥಿರ ಚಾಣಕ್ಯತನ ಪ್ರದರ್ಶಿಸಿದರು. ಜಿಯಾಟ್ಡಿನೋವ್ ಕೊನೆಯ ಕ್ಷಣದಲ್ಲಿ ಮಾಡಿದ ಒಂದು ತಪ್ಪಿನ ಸಂಪೂರ್ಣ ಲಾಭವನ್ನು ಅರಿತ ಕಪಿಲ್‌ ಪಡೆದರು. ಅರಿತ್ ಕೇವಲ 63 ನಡೆಗಳಲ್ಲಿ ಪಂದ್ಯವನ್ನು ತಮ್ಮ ಹೆಸರಿಗೆ ಮಾಡಿಕೊಂಡರು.

Story first published: Monday, December 9, 2024, 17:00 [IST]
Other articles published on Dec 9, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+