ಚೆಸ್ ಒಲಿಂಪಿಯಾಡ್: 2ನೇ ದಿನದ ಹೈಲೈಟ್ಸ್: ಎಲ್ಲರ ಗಮನ ಸೆಳೆದ ಕಾರ್ಲ್ಸನ್

ಚೆನ್ನೈನಲ್ಲಿ ಚೆಸ್ ಒಲಿಂಪಿಯಾಡ್ ನಡೆಯುತ್ತಿದ್ದು ವಿಶ್ವದ ನಾನಾ ಭಾಗಗಳ ಚೆಸ್ ಪಟುಗಳು ಭಾಗವಹಿಸಿ ಚಾಂಪಿಯನ್ ಪಟ್ಟಕ್ಕೇರಲು ಪೈಪೋಟಿ ನಡೆಸುತ್ತಿದ್ದಾರೆ. ಶನಿವಾರ ಈ ಪ್ರತಿಷ್ಠಿತ ಚೆಸ್ ಟೂರ್ನಿಯ ಎರಡನೇ ದಿನದ ಸ್ಪರ್ಧೆಗಳು ನಡೆದಿದೆ. ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸನ್ ಶನಿವಾರದ ಪ್ರಮುಖ ಹೈಲೈಟ್ ಆಗಿದ್ದು ಎಲ್ಲರ ಗಮನ ಸೆಳೆದಿದ್ದಾರೆ. 2013ರಲ್ಲಿ ಚೆನ್ನೈನಲ್ಲಿಯೇ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಗೆದ್ದ ಬಳಿಕ ಮೊದಲ ಬಾರಿಗೆ ಮ್ಯಾಗ್ನಸ್ ಕಾರ್ಲ್ಸನ್ ಚೆನ್ನೈಗೆ ಆಗಮಿಸಿದ್ದರು.
ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸನ್ ಆಟವನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಭಾರೀ ಪ್ರಮಾಣದಲ್ಲಿ ಪ್ರೇಕ್ಷಕರು ಸೇರಿದ್ದರು. ಉರುಗ್ವೆಯ ಜಾರ್ಜ್ ಮೀಯರ್ ವಿರುದ್ಧ ನಾರ್ವೆಯ ಚಾಂಪಿಯನ್ ಸೆಣೆಸಾಟ ನಡೆಸಿದ್ದಾರೆ. 80 ನಡೆಗಳಲ್ಲಿ ಈ ಪಂದ್ಯವನ್ನು ಕಾರ್ಸನ್ ಗೆದ್ದುಕೊಂಡಿದ್ದಾರೆ. ಸಾಕಷ್ಟು ಪ್ರಮಾಣದಲ್ಲಿ ಮಕ್ಕಳು ನಂಬರ್ ಒನ್ ಶ್ರೇಯಾಂಕದ ಗ್ರ್ಯಾಂಡ್ ಮಾಸ್ಟರ್ಸ್ ಆಟವನ್ನು ವೀಕ್ಷಿಸಲು ಆಗಮಿಸಿದ್ದರು.
ಈಶಾ ಕರವಾಡೆ: ಭಾರತ ಈಶಾ ಕರವಾಡೆ ಏಂಜೆಲಾ ಖೇಗೆ ವಿರುದ್ಧ 34 ನಡೆಗಳಲ್ಲಿ ಜಯಗಳಿಸಿದ್ದಾರೆ. ಏಂಜಲಾ ಖೇ ಪಾನ್ 12 ಮೂವ್‌ಗಳನ್ನು ಪುಶ್ ಮಾಡಿದ ಕಾರಣ ಈಶಾಗೆ ಅನುಕೂಲವಾಯಿತು. ಸಿಂಗಾಪುರದ ಆಟಗಾರ್ತಿ ಈಶಾ ಅವರಿಗೆ ಸುಲಭವಾಗಿ ಶರಣಾದರು. ಈ ಮೂಲಕ ಭಾರತ 3 ಟಾಪ್ ಬೋರ್ಡ್‌ನಿಂದ ಪೂರ್ಣ ಅಂಕ ಪಡೆದುಕೊಂಡಿದೆ.
ಎರಡನೇ ಬೋರ್ಡ್‌ನಲ್ಲಿ ಕೂಡ ಭಾರತ 3(ಮಹಿಳೆಯರು) ಪೂರ್ಣ ಪಾಯಿಂಟ್‌ಗಾಗಿ ಹೆಚ್ಚು ಕಷ್ಟಪಡಲಿಲ್ಲ. ಪಿ.ವಿ. ನಂದಿಧಾ ಕೇವಲ 34 ನಡೆಗಳಲ್ಲಿ ಇಮ್ಯಾನ್ಯುಯೆಲ್ ಅವರನ್ನು ಸೋಲಿಸಿದ್ದಾರೆ.
ಕೊನೆರು ಹಂಫಿ: ಅಗ್ರ ಶ್ರೇಯಾಂಕದ ಆಟಗಾರ್ತಿ ಕೊನೆರು ಹಂಪಿ ಹಾಗೂ ಅರ್ಜೆಂಟೀನಾದ ಮಾರಿಸ್ ಜುರಿಯಲ್ ನಡುವಿನ ಹಣಾಹಣಿ 44 ಮೂವ್‌ಗಳ ಬಳಿಕ ಡ್ರಾ ಫಲಿತಾಂಶ ಕಂಡಿತು. ಆ ಆಟದಿಂದ ಆತಿಥೇಯರು ಅರ್ಧ-ಅಂಕಕ್ಕೆ ತೃಪ್ತಿಪಡಬೇಕಾಯಿಯು. ಆದರೆ ತಾನಿಯಾ ಸಚ್‌ದೇವ್ ಮತ್ತು ಭಕ್ತಿ ಕುಲಕರ್ಣಿ ಅವರು ಕ್ರಮವಾಗಿ ಅನಪೋಲಾ ಬೋರ್ಡಾ ರೋಡಾಸ್ ಮತ್ತು ಮರಿಯಾ ಬೆಲೆನ್ ಸರ್ಕಿಸ್ ವಿರುದ್ಧ ಜಯಗಳಿಸಿದ್ದಾರೆ.
ಭಾರತದ ಪುರುಷರ ಪ್ರಮುಖ ತಂಡ ಮೊಲ್ಡೊವಾ ವಿರುದ್ಧ ಉತ್ತಮ ಸ್ಥಾನದಲ್ಲಿದೆ. ಪೆಂಡ್ಯಾಲ ಹರಿಕೃಷ್ಣ ಅಗ್ರಸ್ಥಾನದಲ್ಲಿ ಹಾಗೂ ಎಸ್.ಎಲ್. ನಾರಾಯಣನ್ ಮೂರನೇ ಸ್ಥಾನದಲ್ಲಿ ಇವಾನ್ ಶಿಟ್ಕೊ ಮತ್ತು ವ್ಲಾಡಿಮಿರ್ ಹ್ಯಾಮಿಟೆವಿಸಿ ವಿರುದ್ಧ ಕ್ರಮವಾಗಿ ಗೆಲವುಉ ಸಾಧಿಸಿದ್ದಾರೆ. ಇನ್ನು ಅರ್ಜುನ್ ಎರಿಗೈಸಿ ಎರಡನೇ ಬೋರ್ಡ್‌ನಲ್ಲಿ ಡ್ರಾಗೆ ತೃಪ್ತಿಪಡಬೇಕಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications