FIDE Chess World Cup Final: ಮೊದಲ ಪಂದ್ಯದಲ್ಲಿ ಕಾರ್ಲ್‌ಸನ್ ವಿರುದ್ಧ ಡ್ರಾ ಸಾಧಿಸಿದ ಭಾರತದ ಪ್ರಗ್ನಾನಂದ
ಮಂಗಳವಾರ, ಆಗಸ್ಟ್ 22ರಂದು ಅಜರ್‌ಬೈಜಾನ್‌ನ ಬಾಕುದಲ್ಲಿ ನಡೆದ ಫೆಡರೇಶನ್ ಇಂಟರ್‌ನ್ಯಾಷನಲ್ ಡೆಸ್ ಎಚೆಕ್ಸ್ (FIDE) ಚೆಸ್ ವಿಶ್ವಕಪ್ ಪಂದ್ಯಾವಳಿಯ ಫೈನಲ್‌ನ ಮೊದಲ ಕ್ಲಾಸಿಕಲ್ ಗೇಮ್‌ನಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಗ್ನಾನಂದ ಅವರು ವಿಶ್ವದ ನಂ.1 ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಡ್ರಾ ಸಾಧಿಸಿದರು.
18 ವರ್ಷದ ಭಾರತೀಯ ಗ್ರ್ಯಾಂಡ್‌ಮಾಸ್ಟರ್ ತನಗಿಂತ ಹೆಚ್ಚಿನ ಶ್ರೇಯಾಂಕಿತ ಎದುರಾಳಿಯ ವಿರುದ್ಧ ಪ್ರಭಾವಶಾಲಿಯಾಗಿ ಆಡಿದರು ಮತ್ತು ಬಿಳಿ ಕಾಯಿಗಳನ್ನು ಆಡುವಾಗ 35 ಚಲನೆಗಳಲ್ಲಿ ಮುನ್ನಡೆ ಪಡೆದುಕೊಂಡರು.

ನಾಳೆ (ಬುಧವಾರ, ಆಗಸ್ಟ್ 23) ನಡೆಯುವ ಎರಡನೇ ಕ್ಲಾಸಿಕಲ್ ಪಂದ್ಯದಲ್ಲಿ ಮ್ಯಾಗ್ನಸ್ ಕಾರ್ಲ್‌ಸನ್ ಮತ್ತು ಆರ್ ಪ್ರಗ್ನಾನಂದ ಮುಖಾಮುಖಿಯಾಗಲಿದ್ದಾರೆ.
ಪ್ರತಿಯೊಂದು ಪಂದ್ಯವು ಆರಂಭಿಕ 40 ಚಲನೆಗಳಿಗೆ 90 ನಿಮಿಷಗಳ ಸಮಯದ ನಿಯಂತ್ರಣವನ್ನು ಬಳಸಿಕೊಳ್ಳುವ ಎರಡು ಸಾಂಪ್ರದಾಯಿಕ ಆಟಗಳನ್ನು ಒಳಗೊಂಡಿರುತ್ತದೆ. ಬಳಿಕ 40 ಚಲನೆಗಳ ನಂತರ 30 ನಿಮಿಷಗಳನ್ನು ಸೇರಿಸಲಾಗುತ್ತದೆ.
ಡ್ರಾಗೊಂಡರೆ ಸಂಭವಿಸಿದರೆ, ಸುತ್ತಿನ ಮೂರನೇ ದಿನದಂದು ಪ್ಲೇಆಫ್ ನಡೆಯುತ್ತದೆ. ಟೈ ಬ್ರೇಕ್ ಪ್ರಕ್ರಿಯೆಯು ಎರಡು ಕ್ಷಿಪ್ರ ಆಟಗಳನ್ನು ಒಳಗೊಂಡಿರುತ್ತದೆ. ಜೊತೆಗೆ 25 ನಿಮಿಷಗಳ ಸಮಯದ ನಿಯಂತ್ರಣ ಇರಲಿದ್ದು, ಪ್ರತಿ ಚಲನೆಗೆ 10 ಸೆಕೆಂಡ್ ಹೆಚ್ಚಳ ಇರಲಿದೆ.

ಬುಧವಾರದ ನಡೆಯುವ ಕ್ಲಾಸಿಕಲ್ ಸರಣಿಯ ಎರಡನೇ ಪಂದ್ಯದಲ್ಲಿ ಮ್ಯಾಗ್ನಸ್ ಕಾರ್ಲ್‌ಸನ್ ಅವರು ಬಿಳಿಕಾಯಿಗಳನ್ನು ಮುನ್ನಡೆಸಲಿದ್ದರೆ, ಆರ್ ಪ್ರಗ್ನಾನಂದ ಕಪ್ಪುಕಾಯಿಗಳೊಂದಿಗೆ ಆಡಲಿದ್ದಾರೆ.
ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಗ್ನಾನಂದ ಅವರು ವಿಶ್ವದ ನಂ.3 ಶ್ರೇಯಾಂಕಿತ ಫ್ಯಾಬಿಯಾನೊ ಕರುವಾನಾ ಅವರನ್ನು 3.5-2.5 ಅಂತರದ ಆಘಾತಕಾರಿಯಾಗಿ ಸೋಲಿಸುವ ಮೂಲಕ ಫೈನಲ್‌ಗೆ ಪ್ರವೇಶಿಸಿದ್ದಾರೆ.
ಭಾರತೀಯ ಯುವ ಚೆಸ್ ಆಟಗಾರನು ದಂತಕಥೆ ವಿಶ್ವನಾಥನ್ ಆನಂದ್ ನಂತರ ವಿಶ್ವಕಪ್‌ನಲ್ಲಿ ಫೈನಲ್ ತಲುಪಿದ ಭಾರತದ ಎರಡನೇ ಆಟಗಾರ ಎನಿಸಿದರು ಮತ್ತು ಈಗಾಗಲೇ 2024ರಲ್ಲಿ ನಡೆಯುವ ಕ್ಯಾಂಡಿಡೇಟ್ಸ್ ಪಂದ್ಯಾವಳಿಗೆ ಅರ್ಹತೆ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications