ಅರ್ಜೆಂಟೀನಾ ಮಣಿಸಿ ಕೋಪಾ ಅಮೆರಿಕಾಕ್ಕೆ ಮುತ್ತಿಟ್ಟ ಚಿಲಿ
ನ್ಯೂಜೆರ್ಸಿ, ಜೂನ್ 27: 'ಆತನ ಕಣ್ಣೀರು ಎಲ್ಲವನ್ನು ಹೇಳುತ್ತಿತ್ತು. ಮೂರು ವರ್ಷಗಳಲ್ಲಿ ಮೂರು ಬಾರಿ ಕಪ್ ಕಳೆದುಕೊಂಡು ಕಣ್ಣೀರಿಟ್ಟ. ಜಗದೇಕ ವೀರ ಲಿಯೊನೆಲ್ ಮೆಸ್ಸಿ ಮತ್ತೊಮ್ಮೆ ತಮ್ಮ ದೇಶಕ್ಕೆ ಕೋಪಾ ಅಮೆರಿಕಾ ಗೆಲ್ಲಿಸಿಕೊಡುವಲ್ಲಿ ವಿಫಲರಾಗಿದ್ದಾರೆ. ಭಾನುವಾರ ನಡೆದ ಫೈನಲ್ ನಲ್ಲಿ ಚಿಲಿ ತಂಡ ಮತ್ತೊಮ್ಮೆ ಕಪ್ ಎತ್ತಿ ಮುತ್ತಿಟ್ಟಿದೆ.
ಪೆನಾಲ್ಟಿ ಶೂಟೌಟ್ ನಲ್ಲಿ ಚಿಲಿ 4-2 ಅರ್ಜೆಂಟೀನಾವನ್ನು ಮಣಿಸಿದೆ. ವಿಶ್ವಕಪ್ ನಲ್ಲಿ ಜರ್ಮನಿ ವಿರುದ್ಧ, ಕೋಪಾ ಅಮೆರಿಕಾದಲ್ಲಿ ಸತತ ಎರಡು ಬಾರಿ ಚಿಲಿ ವಿರುದ್ಧ ಸೋಲು ಕಂಡ ಅರ್ಜೆಂಟೀನಾಗೆ ಅಕ್ಷರಶಃ ಶೋಕ ದಿನಾಚರಣೆ ಶುರುವಾಗಿದೆ.

ಶತಕದ ಸಂಭ್ರಮದಲ್ಲಿರುವ ಕೋಪಾ ಅಮೆರಿಕಾ ಕಪ್ ಫೈನಲ್ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ಗೋಲು ಗಳಿಸಲು ಎರಡು ತಂಡಗಳಿಗೆ ಆಗಲಿಲ್ಲ. ರೆಡ್ ಕಾರ್ಡ್ ಗಳಿಂದ ಅಧಿಕ ಅವಧಿ, ಪೆನಾಲ್ಟಿ ಶೂಟೌಟ್ ವೇಳೆ ಎರಡು ತಂಡಗಳಲ್ಲಿ ತಲಾ 10 ಆಟಗಾರರು ಮಾತ್ರ ಇದ್ದರು. 2014ರ ಫೈನಲ್ ಪಂದ್ಯದ ಕಾರ್ಬನ್ ಕಾಪಿಯಂತೆ ಕಂಡ ಈ ಪಂದ್ಯದಲ್ಲಿ ಮತ್ತೊಮ್ಮೆ ಚಿಲಿ ವಿಜಯಶಾಲಿಯಾಗಿ ಹೊರಹೊಮ್ಮಿದೆ.
ಪೆನಾಲ್ಟಿ ಶೂಟೌಟ್ ನಲ್ಲಿ ಚಿಲಿ ಪರ ಕ್ಯಾಸ್ಟಿಲೊ, ಚಾರ್ಲ್ಸ್ ಅರಂಗ್ವೇಜ್, ಜೀನ್ ಬಿಯುಸೆಯೊರ್, ಫ್ರಾನ್ಸಿಸ್ಕೋ ಸಿಲ್ವಾ ಗೋಲು ಹೊಡೆದರೆ, ಅರ್ಜೆಂಟೀನಾ ಪರ ಸೆರ್ಗಿಯೋ ಅಗ್ವೆರೋ, ಮ್ಯಾಸ್ಕರೇನಸ್ ಮಾತ್ರ ಗೋಲು ಗಳಿಸಿದರು, ಮೆಸ್ಸಿ ಹೊಡೆದ ಕಿಕ್ ಮಿಸ್ ಆಗಿದ್ದು, ಮೆಟ್ ಲೈಫ್ ಸ್ಟೇಡಿಯಂನಲ್ಲಿ ಅಭಿಮಾನಿಗಳ ಉಸಿರು ಒಂದು ಕ್ಷಣ ನಿಲ್ಲಿಸಿಬಿಟ್ಟಿತು.

ಮುಂದೆ ನಡೆದಿದ್ದು ಚಿಲಿ ತಂಡದ ಪ್ರಾಬಲ್ಯ ಹಾಗೂ ವಿಜಯೋತ್ಸವ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications