ಒಲಿಂಪಿಕ್ ಈಜು ಚಾಂಪಿಯನ್, ಚೀನಾದ ಸನ್ ಯಾಂಗ್‌ಗೆ 8 ವರ್ಷಗಳ ನಿಷೇಧ

ಬೀಜಿಂಗ್, ಫೆಬ್ರವರಿ 28: ಒಲಿಂಪಿಕ್ ಈಜು ಸ್ಪರ್ಧೆಯಲ್ಲಿ ಮೂರು ಬಾರಿ ಬಂಗಾರ ಗೆದ್ದಿದ್ದ ಚಾಂಪಿಯನ್, ಸನ್ ಯಾಂಗ್ ಅವರನ್ನು 8 ವರ್ಷಗಳ ಕಾಲ ನಿಷೇಧಿಸಲಾಗಿದೆ. ಡೋಪಿಂಗ್ ತಪ್ಪಿಗಾಗಿ ಸ್ಮಿಮ್ಮಿಂಗ್ ಚಾಂಪಿಯನ್ ದೀರ್ಘ ಕಾಲದ ನಿಷೇಧ ಶಿಕ್ಷೆ ಅನುಭವಿಸಬೇಕಾಗಿ ಬಂದಿದೆ.
ಡೋಪಿಂಗ್ ಸ್ಯಾಂಪಲ್ ನೀಡುವಂತೆ ಸನ್ ಯಾಂಗ್‌ಗೆ ಸೂಚಿಸಲಾಗಿತ್ತು. ಆದರೆ ಯಾಂಗ್ ಸ್ಯಾಂಪಲ್ ನೀಡಲು ನಿರಾಕರಿಸಿದ್ದರು. ಹೀಗಾಗಿ ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ಸ್ (ಸಿಎಎಸ್) ಶುಕ್ರವಾರ (ಫೆಬ್ರವರಿ 28) ಯಾಂಗ್‌ಗೆ ನಿಷೇಧ ಶಿಕ್ಷೆ ನೀಡಿ ತೀರ್ಪಿತ್ತಿದೆ.
ಡೋಪಿಂಗ್ ಟೆಸ್ಟ್ ಒಂದನ್ನು ಸನ್ ಯಾಂಗ್ ತಪ್ಪಿಸಿಕೊಂಡಿದ್ದರು. ಹೀಗಾಗಿ ವರ್ಲ್ಡ್ ಆ್ಯಂಟಿ ಡೋಪಿಂಗ್ ಏಜೆನ್ಸಿ (ವಾಡಾ) ಸನ್‌ಗೆ ನಿಷೇಧ ಹೇರುವಂತೆ ಸಿಎಎಸ್ ಅನ್ನು ಕೋರಿಕೊಂಡಿತ್ತು. ಅದರಂತೆ ಸಿಎಎಸ್ ವಾಡಾ ಕೋರಿಕೆಯನ್ನು ಪರಿಗಣಿಸಿದೆ.
ಚೀನಾದ ಅಗ್ರಸ್ಥಾನಿ ಈಜುಪಟು, 28ರ ಹರೆಯದ ಯಾಂಗ್ 2012ರ ಲಂಡನ್ ಒಲಂಪಿಕ್ಸ್‌ನಲ್ಲಿ ಎರಡು ಚಿನ್ನದ ಪದಕ ಜಯಿಸಿದ್ದರು, ಅಲ್ಲದೆ 2016ರ ಒಲಿಂಪಿಕ್ಸ್‌ನಲ್ಲೂ ಒಂದು ಬಂಗಾರದ ಪದಕ ಗೆದ್ದಿದ್ದರು. ಈಗ ನಿಷೇಧಕ್ಕೀಡಾಗಿರುವುದರಿಂದ ಸನ್ ಯಾಂಗ್ ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವಂತಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications