ಚೀನಾದ 14ರ ಹರೆಯದ ಬಾಸ್ಕೆಟ್‌ಬಾಲ್ ಆಟಗಾರ್ತಿಯ ಎತ್ತರಕ್ಕೆ ಎದುರಾಳಿಗಳು ಕಂಗಾಲು: ವೈರಲ್ ವಿಡಿಯೋ

ಚೀನಾ ರಾಷ್ಟ್ರೀಯ ಬಾಸ್ಕೆಟ್‌ಬಾಲ್‌ನ ತಂಡವೊಂದು ಇದ್ದಕ್ಕಿದ್ದಂತೆ ಭಾರೀ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಚೀನಾದ ರಾಷ್ಟ್ರೀಯ ಅಂಡರ್ 15 ಚಾಂಪಿಯನ್‌ಶಿಪ್‌ನ ಬಾಸ್ಕೆಟ್‌ಬಾಲ್ ತಂಡ ಸಾಕಷ್ಟು ವೈರಲ್ ಆಗಿದೆ. ಇದಕ್ಕೆ ಕಾರಣ ಓರ್ವ ಆಟಗಾರ್ತಿ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಆ ಆಟಗಾರ್ತಿಯ ಎತ್ತರ ಹಾಗೂ ಬಾಸ್ಕೆಟ್ ಬಾಲ್ ಕೌಶಲ್ಯ ಈ ಪ್ರಚಾರ ಹಾಗೂ ಚರ್ಚೆಗೆ ಕಾರಣವಾಗಿದೆ.
ಆಕೆಯ ಹೆಸರು ಝಾಂಗ್ ಜಿಯು. ವಯಸ್ಸು ಕೇವಲ 14 ವರ್ಷ. ಆದರೆ ಎತ್ತರ 7 ಅಡಿ 4 ಇಂಚು. ಈ ಎತ್ತರದವನ್ನು ಸಮರ್ಥವಾಗಿ ಬಳಸಿಕೊಂಡಿರುವ ಝಾಂಗ್ ಜಿಯು ತಮ್ಮ ಬಾಸ್ಕಟ್ ಬಾಲ್ ತಂಡಕ್ಕೆ ಟ್ರಂಪ್ ಕಾರ್ಡ್ ಆಗಿದ್ದಾರೆ. ತನ್ನ ತಂಡ 42 ಅಂಕಗಳನ್ನು ಸಂಪಾದಿಸಲು ಜಿಯು ಕಾರಣವಾಗಿದ್ದಾರೆ.
ಝಾಂಗ್ ಜಿಯು ಬಾಸ್ಕೆಟ್ ಬಾಲ್ ಆಡುತ್ತಿರುವ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದೆ. 7.4 ಅಡಿ ಎತ್ತರವಿರುವ ಈಗೆ ಸಹಜವಾಗಿಯೇ ಉಳಿದ ಎಲ್ಲಾ ಆಟಗಾರ್ತಿಯರಿಂದಲೂ ಸಾಕಷ್ಟು ಎತ್ತರವಾಗಿದ್ದಾರೆ. ತಂಡದ ಒಟ್ಟು ಅಂಕಗಳಲ್ಲಿ ಈಕೆಯ 25 ರಿಬೌಂಡ್ಸ್ ಹಾಗೂ 6 ಬ್ಲಾಕ್ಸ್ ಕೂಡ ಸೇರಿಸಿಕೊಂಡಿದೆ.
ಈ ವಿಡಿಯೋವನ್ನು ಮೊದಲಿಗೆ ಚೀನಾದ ಸಾಮಾಜಿಕ ಜಾಲತಾಣ ಚೀನಾ ದೇಶದಲ್ಲಿ ಟ್ವಿಟ್ಟರ್‌ಗೆ ಸಮಾನವಾದ ವೈಬೋದಲ್ಲಿ ಹಂಚಿಕೊಳ್ಳಲಾಗಿತ್ತು. ಈ ವಿಡಿಯೋವನ್ನು ಕೆಲ ಬಾಸ್ಕೆಟ್ ಬಾಲ್ ಸಂಬಂಧಿದ ಚಾನೆಲ್‌ನಗಳು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದವು. ಬಳಿಕ ಇದು ವಿಶ್ವಮಟ್ಟದಲ್ಲಿ ಸಾಕಷ್ಟು ವೈರಲ್ ಆಗಿದೆ.
ಜಿಯು ಅವರನ್ನು ಈಗ ಚೀನಾದ ಬಾಸ್ಕೆಟ್ ಬಾಲ್ ತಾರೆ ಯಾವೋ ಮಿಂಗ್ ಜೊತೆಗೆ ಹೋಲಿಸಲಾಗುತ್ತಿದೆ. ಕುತೂಹಲಕಾರಿ ಸಂಗತಿಯೆಂದರೆ ಈ ಇಬ್ಬರು ಕೂಡ ಎತ್ತರದಲ್ಲಿ ಸಮಾನವಾಗಿದ್ದಾರೆ. ಚೀನಾದ ಮಾಧ್ಯಮ ಸಂಸ್ಥೆ ಗ್ಲೋಬಲ್ ಟೈಮ್ಸ್ ವರದಿಯ ಪ್ರಕಾರ ಝಾಂಗ್ ಜಿಯು ಪೂರ್ವ ಚೀನಾದ ಶಾಂಡೋಂಗ್ ಪ್ರಾಂತ್ಯದವರು ಎಂದಿದೆ. ಈಕೆಯ ಹೆತ್ತವರು ಕೂಡ ವೃತ್ತಿಪರ ಬಾಸ್ಕೆಟ್‌ಬಾಲ್ ಆಟಗಾರರಾಗಿದ್ದು ತಂದೆ 6.9 ಅಡಿ ಎತ್ತರವಿದ್ದರೆ ತಾಯಿ 6.4 ಅಡಿ ಎತ್ತರವಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications