Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದೆಹಲಿ ಏಷ್ಯಾನ್ ಚಾಂಪಿಯನ್‌ಶಿಪ್‌ಲ್ಲಿ ಚೀನಾ ರಸ್ಲರ್‌ಗಳು ಸ್ಪರ್ಧಿಸುತ್ತಿಲ್ಲ

Chinese wrestlers not to compete in Asian Championships in Delhi

ನವದೆಹಲಿ, ಫೆಬ್ರವರಿ 17: ನವದೆಹಲಿಯಲ್ಲಿ ಮಂಗಳವಾರದಿಂದ (ಫೆಬ್ರವರಿ 18) ನಡೆಯಲಿರುವ ಏಷ್ಯಾನ್ ರಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚೀನಾದ ಯಾವುದೇ ರಸ್ಲರ್‌ಗಳು ಸ್ಪರ್ಧಿಸುತ್ತಿಲ್ಲ. ಮಾರಕ ಸೋಂಕು ಕೊರೊನಾ ವೈರಸ್ ಹಬ್ಬುವ ಭೀತಿಯಿಂದ ಭಾರತದ ಸರ್ಕಾರ ಚೀನಾ ಸ್ಪರ್ಧಿಗಳಿಗೆ ವೀಸಾ ನಿರಾಕರಿಸಿರುವುದಾಗಿ ತಿಳಿದು ಬಂದಿದೆ.

ಭಾರತ ರಸ್ಲಿಂಗ್‌ ಫೆಡರೇಶನ್‌ನ (ಡಬ್ಲ್ಯೂಎಫ್‌ಐ) ಉನ್ನತ ಅಧಿಕಾರಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಡಬ್ಲ್ಯೂಎಫ್‌ಐ ಸಹ ಕಾರ್ಯದರ್ಶಿ ವಿನೋದ್‌ ತೋಮರ್, ಚೀನಾದ 40 ಸ್ಪರ್ಧಿಗಳಿದ್ದ ಬಲಿಷ್ಠ ತಂಡಕ್ಕೆ ಭಾರತ ಸರ್ಕಾರ ವೀಸಾ ನಿರಾಕರಿಸಿರುವುದಾಗಿ ಪಿಟಿಐ ಜೊತೆ ಹೇಳಿಕೊಂಡಿದ್ದಾರೆ.

'ಚೀನಾ ರಸ್ಲಿಂಗ್ ತಂಡಕ್ಕೆ ಸರ್ಕಾರ ವೀಸಾ ನೀಡಿಲ್ಲ ಅನ್ನೋದು ನಮಗೆ ತಿಳಿದು ಬಂದಿದೆ. ಹೀಗಾಗಿ ಚೀನಾ ತಂಡ ದೆಹಲಿಯಲ್ಲಿ ನಡೆಯುವ ರಸ್ಲಿಂಗ್ ಏಷ್ಯಾನ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ,' ಎಂದು ವಿನೋದ್ ಮಾಹಿತಿ ನೀಡಿದ್ದಾರೆ. ದೆಹಲಿಯಲ್ಲಿ ನಡೆವ ಏಷ್ಯಾನ್ ರಸ್ಲಿಂಗ್ ಚಾಂಪಿಯನ್‌ಶಿಪ್, ಫೆಬ್ರವರಿ 18ರಿಂದ 23ರ ವರೆಗೆ ನಡೆಯಲಿದೆ.

Story first published: Monday, February 17, 2020, 19:10 [IST]
Other articles published on Feb 17, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+