ಟಿ-20: ಭಾರತದ ದಾಖಲೆ ಕಿತ್ತುಕೊಂಡ ಕ್ರಿಸ್ ಗೇಲ್
ಜೊಹಾನ್ಸ್ ಬರ್ಗ್, ಜ, 12: ಚುಟುಕು ಕ್ರಿಕೆಟ್ ನಲ್ಲಿ ವೆಸ್ಟ್ ಇಂಡೀಸ್ ತಂಡ ವಿಶ್ವದಾಖಲೆಯೊಂದನ್ನು ಸೃಷ್ಟಿಸಿದೆ. ಟಿ-2೦ ಕ್ರಿಕೆಟ್ ನಲ್ಲಿ ಅತಿ ಹಚ್ಚು ರನ್ ಚೇಸಿಂಗ್ ಮಾಡಿದ ದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದೆ. ಭಾರತದ ಹೆಸರಲ್ಲಿದ್ದ ದಾಖಲೆ ಈಗ ವಿಂಡೀಸ್ ಪಾಲಾಗಿದೆ.
20 ಓವರ್ ಗಳಲ್ಲಿ ದಕ್ಷಿಣ ಆಫ್ರಿಕಾ ನೀಡಿದ್ದ 236 ರನ್ ಗುರಿ ಬೆನ್ನು ಹತ್ತಿದ ವಿಂಡೀಸ್ ಗೆಲುವಿಗೆ ಕ್ರಿಸ್ ಗೇಲ್ ಆರ್ಭಟ ನೆರವಾಯಿತು. 41 ಎಸೆತಗಳಲ್ಲಿ 9 ಬೌಂಡರಿ ಮತ್ತು 7 ಸಿಕ್ಸರ್ ನೆರವಿನಿಂದ ಗೇಲ್ 90 ರನ್ ಕೊಡುಗೆ ನೀಡಿದರು. 39 ಎಸೆತದಲ್ಲಿ 60 ರನ್ ಗಳಿಸಿದ ಮರ್ಲಾನ್ ಸ್ಯಾಮ್ಯುಯಲ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.[ಈ ಬಾರಿಯ ವಿಶ್ವಕಪ್ ಅಂಕ ಗಳಿಕೆ ಪಟ್ಟಿ ಹೇಗಿರುತ್ತದೆ?]

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಾಯಕ ಡುಪ್ಲೆಸಿಸ್ ಅವರ ಶತಕದ(119 ರನ್, 56 ಎಸೆತ, 11 ಬಂಡರಿ, 5 ಸಿಕ್ಸರ್ ) ನೆರವಿನಲ್ಲಿ 236 ರನ್ ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಆದರೆ ಈ ಸವಾಲನ್ನು ಗೇಲ್ ತಮ್ಮ ಬ್ಯಾಟಿಂಗ್ ಅಬ್ಬರದಲ್ಲಿ ಪುಡುಪುಡಿ ಮಾಡಿ ತಂಡಕ್ಕೆ ನಾಲ್ಕು ವಿಕೆಟ್ ಜಯ ತಂದುಕೊಟ್ಟರು.[ಸ್ಕೋರ್ ಕಾರ್ಡ್]
ಮೊಹಾಲಿಯಲ್ಲಿ(2009) ಶ್ರೀಲಂಕಾದ 207 ರನ್ ಗೆ ಪ್ರತಿಯಾಗಿ ಭಾರತ 211 ರನ್ ಗಳಿಸಿದ್ದು ಹಿಂದಿನ ದಾಖಲೆಯಾಗಿತ್ತು. 2 ನೇ ವಿಕೆಟ್ ಗೆ ಗೇಲ್ ಮತ್ತು ಸ್ಯಾಮ್ಯುಯಲ್ಸ್ 152 ಜೊತಾಯಾಟ ನೀಡಿದ್ದು ಇನ್ನು ಒಂದು ಪಂದ್ಯ ಬಾಕಿ ಇರುವಂತೆ ವೆಸ್ಟ್ ಇಂಡೀಸ್ ಸರಣಿ ವಶಪಡಿಸಿಕೊಳ್ಳಲು ನೆರವಾಯಿತು. ದಕ್ಷಿಣ ಆಫ್ರಿಕಾ ವಿರುದ್ಧದ ಹಿಂದಿನ ಪಂದ್ಯದಲ್ಲಿ ಕೇವಲ 31 ಬಾಲ್ ಗಳಲ್ಲಿ 77 ರನ್ ಗಳಿಸಿ ಗೇಲ್ ಮಿಂಚಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications