Commonwealth: 2026ರ ಕಾಮನ್‌ವೆಲ್ತ್ ಆತಿಥ್ಯ ವಹಿಸಲಿರುವ ವಿಕ್ಟೋರಿಯಾ

2026ರ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ಆಯೋಜಿಸಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಉದ್ಘಾಟನಾ ಸಮಾರಂಭ ಜರುಗಲಿದೆ.
ಈ ಕುರಿತು ಕಾಮನ್‌ವೆಲ್ತ್ ಗೇಮ್ಸ್ ಫೆಡರೇಶನ್ ಮಾಹಿತಿ ನೀಡಿದ್ದು, T20 ಕ್ರಿಕೆಟ್ ಸೇರಿದಂತೆ 16 ಕ್ರೀಡೆಗಳನ್ನು ನಡೆಸಲಾಗುತ್ತಿದ್ದು ಮುಂದಿನ ವರ್ಷದಲ್ಲಿ ಮತ್ತಷ್ಟು ಕ್ರೀಡೆಗಳನ್ನು ಸೇರಿಸಲಾಗುವುದು ಎಂದು ಹೇಳಿದ್ದಾರೆ. ವಿಕ್ಟೋರಿಯಾ ಪ್ರೀಮಿಯರ್ ಡೇನಿಯಲ್ ಆಂಡ್ರ್ಯೂಸ್ ಮಾತನಾಡಿ, 2026ರ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ವಿಕ್ಟೋರಿಯಾವನ್ನು ಆತಿಥೇಯ ಸ್ಥಳವಾಗಿ ಆಯ್ಕೆ ಮಾಡಿರುವುದು ಗೌರವದ ಸಂಗತಿಯಾಗಿದೆ, ನಮ್ಮ ಎಲ್ಲಾ ರಾಜ್ಯಗಳಿಗೆ ಜಗತ್ತನ್ನು ಸ್ವಾಗತಿಸಲು ನಾವು ಉತ್ಸುಕರಾಗಿದ್ದೇವೆ ಎಂದ ಅವರು ಚತುರ್ವಾರ್ಷಿಕ ಆಟಗಳು ಬಹುಪಾಲು ಹಿಂದಿನ ಬ್ರಿಟಿಷ್ ವಸಾಹತುಗಳಿಗೆ ಸೀಮಿತವಾಗಿದ್ದವು ಹಾಗೂ ಕಳೆದ ಐದು ಆವೃತ್ತಿಗಳಲ್ಲಿ ನಾಲ್ಕು ಕ್ರೀಡಾಕೂಟಗಳು ಆಸ್ಟ್ರೇಲಿಯಾ ಅಥವಾ ಬ್ರಿಟನ್‌ನಲ್ಲಿ ನಡೆದಿದ್ದವು ಎಂದು ಹೇಳಿದರು.
ಈ ಕ್ರೀಡಾಕೂಟವನ್ನು ರಾಜ್ಯದ ನಾಲ್ಕು ಪ್ರಮುಖ ಪ್ರಾದೇಶಿಕ ಸ್ಥಳಗಳಲ್ಲಿ ಅಂದರೆ ಗೀಲಾಂಗ್, ಬೆಂಡಿಗೊ, ಬಲ್ಲರತ್ ಮತ್ತು ಗಿಪ್ಸಂಲ್ಯಾಂಡ್ ನಗರಗಳಲ್ಲಿ ಆಯೋಜಿಸಲಾಗುವದು ಎಂದು ವಿಕ್ಟೋರಿಯಾ ಸರ್ಕಾರ ತಿಳಿಸಿದೆ. ನ್ಯೂಜಿಲ್ಯಾಂಡ್ ಒಲಂಪಿಕ್ ಕಮಿಟಿಯು ವಿಕ್ಟೋರಿಯಾ ನಗರದಲ್ಲಿ 2026ರ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications