Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕಾಮನ್‌ವೆಲ್ತ್‌ ಗೇಮ್ಸ್ 2022: ಸ್ಟೀಪಲ್‌ಚೇಸ್‌ನಲ್ಲಿ ಬೆಳ್ಳಿ ಗೆದ್ದ ಅವಿನಾಶ್ ಸೇಬಲ್

Avinash sable

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಗೇಮ್ಸ್‌ 2022ರಲ್ಲಿ ಪುರುಷರ 3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಅವಿನಾಶ್ ಸೇಬಲ್ ಭಾರತಕ್ಕೆ ಬೆಳ್ಳಿ ಪದಕ ತಂದಿದ್ದಾರೆ. ಫೈನಲ್‌ ಪಂದ್ಯದಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಅವಿನಾಶ್ ಉತ್ತಮ ಪ್ರದರ್ಶನ ನೀಡಿ ಬೆಳ್ಳಿ ಪದಕ ಗೆದ್ದು ಬೀಗಿದ್ದಾರೆ.

27 ವರ್ಷದ ಮಹಾರಾಷ್ಟ್ರ ಮೂಲದ ಅವಿನಾಶ್ ಅವರ ವೈಯಕ್ತಿಕ ಉತ್ತಮ ಸಮಯ 8.12.48 ಆಗಿತ್ತು. 2019 ರಲ್ಲಿ ದೋಹಾದಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅವಿನಾಶ್ ಬೆಳ್ಳಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ 8.18.12 ನಿಮಿಷಗಳಲ್ಲಿ ಮುಗಿಸಿದರು. ಮಹಾರಾಷ್ಟ್ರದ ಶುಷ್ಕ ಬೀಡ್ ಜಿಲ್ಲೆಯ ಮಾಂಡ್ವಾ ಎಂಬ ಹಳ್ಳಿಯಲ್ಲಿ ಬೆಳೆದ ಅವಿನಾಶ್, ಶನಿವಾರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪರ ಹೆಮ್ಮೆಯ ಪದಕ ವಿಜೇತರಾದರು.

ಮಹಿಳೆಯರ 10000 ಮೀಟರ್ ನಡಿಗೆಯಲ್ಲಿ ಭಾರತ ಇಂದು ಮೊದಲ ಪದಕ ಗೆದ್ದಿದೆ. ಪ್ರಿಯಾಂಕಾ ಗೋಸ್ವಾಮಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದುಕೊಟ್ಟಿದ್ದಾರೆ. 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ರಜತ ಪದಕ ಗೆದ್ದಿದ್ದ ಪ್ರಿಯಾಂಕಾ ತಮ್ಮ ಅಮೋಘ ಪ್ರದರ್ಶನವನ್ನ ಕಾಮನ್‌ವೆಲ್ತ್‌ಗೇಮ್ಸ್‌ನಲ್ಲೂ ಮುಂದುವರಿಸಿದ್ದು, ಮಹಿಳೆಯರ 10,000 ಮೀಟರ್ ನಡಿಗೆಯಲ್ಲಿ 43:38.82 ನಿಮಿಷಗಳಲ್ಲಿ ಗುರಿ ಮುಟ್ಟುವ ಮೂಲಕ ಬೆಳ್ಳಿ ಪದಕ ಜಯಿಸಿದರು.

ಭಾರತದ ಮಹಿಳಾ ರಿಲೇ ತಂಡ 4 x 400 ಮೀ ಫೈನಲ್‌ಗೆ ಪ್ರವೇಶಿಸಿತು. ದ್ಯುತಿ ಚಂದ್, ಹಿಮಾ ದಾಸ್, ಶ್ರಬಾನಿ ನಾನದ ಮತ್ತು ಜ್ಯೋತಿ ಯರಾಜಿ ಅವರ ತಂಡ 44.45 ರಲ್ಲಿ ಎರಡನೇ ಸ್ಥಾನ ಗಳಿಸಿತು. ಭಾರತ ಮಹಿಳಾ ಕ್ರಿಕೆಟ್ ತಂಡವು ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ನಾಲ್ಕು ರನ್‌ಗಳ ಅಂತರದಲ್ಲಿ ಸೋಲಿಸುವ ಮೂಲಕ ಫೈನಲ್ ಪ್ರವೇಶಿಸಿದೆ.

ಇಲ್ಲಿಯವರೆಗೆ ಭಾರತ 9 ಚಿನ್ನ, 10 ಬೆಳ್ಳಿ ಮತ್ತು 9 ಕಂಚು ಸೇರಿದಂತೆ 28 ಪದಕಗಳನ್ನು ಗೆದ್ದಿದೆ. ಭಾರತ ಪ್ರಸ್ತುತ ಐದನೇ ಸ್ಥಾನದಲ್ಲಿದೆ. ಇನ್ನೂ ಕುಸ್ತಿ ಪಂದ್ಯಗಳು ನಡೆಯುತ್ತಿರುವುದರಿಂದ ಹೆಚ್ಚಿನ ಪದಕ ನಿರೀಕ್ಷೆ ಮಾಡಲಾಗಿದೆ.

Story first published: Saturday, August 6, 2022, 19:25 [IST]
Other articles published on Aug 6, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+