Commonwealth Games 2022, Day 3: ಭಾರತದ ಸ್ಪರ್ಧೆಗಳ ಸಂಪೂರ್ಣ ವೇಳಾಪಟ್ಟಿ

ಕಾಮನ್‌ವೆಲ್ತ್‌ ಗೇಮ್ಸ್‌ 2022ರ ಎರಡನೇ ದಿನದಲ್ಲಿ ಭಾರತ ನಾಲ್ಕು ಪದಕಗಳನ್ನು ಗೆದ್ದು ಉತ್ತಮ ಆರಂಭ ಪಡೆದಿದ್ದು , ಮೂರನೇ ದಿನದಲ್ಲೂ ಪದಕ ಬೇಟೆಯಾಡುವ ನಿರೀಕ್ಷೆಯನ್ನು ಹೊಂದಿದೆ. ಎರಡನೇ ದಿನದಲ್ಲಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ನಾಲ್ಕು ಪದಕಗಳೊಂದಿಗೆ ಪದಕ ಗೆದ್ದ ಭಾರತವು ಒಂದು ಚಿನ್ನ , ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದಿದೆ.

ಮಹಿಳೆಯರ 49 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಸ್ಪರ್ಧಿಸಿದ್ದ ಮೀರಾಬಾಯಿ ಚಾನು ಚಿನ್ನದ ಪದಕ ಗೆಲ್ಲುವ ಮೂಲಕ ತನ್ನ ಅದ್ಭುತ ಪ್ರದರ್ಶನ ಮುಂದುವರಿಸಿದ್ರೆ, ಇದಲ್ಲದೆ ಪುರುಷರ 55 ಕೆಜಿ ವಿಭಾಗದಲ್ಲಿ ಸಂಕೇತ್ ಸರ್ಗರ್ ಬೆಳ್ಳಿ ಮತ್ತು ಕನ್ನಡಿಗ ಗುರುರಾಜ ಪೂಜಾರಿ ಪುರುಷರ 61 ಕೆಜಿಯಲ್ಲಿ ಕಂಚಿನ ಪದಕ ಪಡೆದರು. ಜೊತೆಗೆ ಬಿಂದ್ಯಾರಾಣಿ ದೇವಿ 55 ಕೆಜಿ ವಿಭಾಗದಲ್ಲಿ ಶನಿವಾರ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಭಾರತದ ಪದಕದ ಸಂಖ್ಯೆ ನಾಲ್ಕಕ್ಕೇರಿದೆ.

ಕಾಮನ್‌ವೆಲ್ತ್‌ ಗೇಮ್ಸ್‌ 2022: ಭಾರತಕ್ಕೆ 4ನೇ ಪದಕ, ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆದ್ದ ಬಿಂದ್ಯಾರಾಣಿಕಾಮನ್‌ವೆಲ್ತ್‌ ಗೇಮ್ಸ್‌ 2022: ಭಾರತಕ್ಕೆ 4ನೇ ಪದಕ, ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆದ್ದ ಬಿಂದ್ಯಾರಾಣಿ

ಇದಷ್ಟೇ ಅಲ್ಲದೆ ಶನಿವಾರ ಭಾರತ ಬ್ಯಾಡ್ಮಿಂಟನ್‌ನಲ್ಲಿ ಶ್ರೀಲಂಕಾವನ್ನು 5-0 ಅಂತರದಿಂದ ಸೋಲಿಸಿದರೆ, ಜೋಶ್ನಾ ಚಿನಪ್ಪ ಮತ್ತು ಸೌರವ್ ಘೋಸಲ್ ತಮ್ಮ ಸ್ಕ್ವಾಷ್ ಪಂದ್ಯಗಳನ್ನು ಗೆದ್ದರು. ಮೂರನೇ ದಿನದಲ್ಲೂ ಭಾರತವು ಪದಕಗ ಗೆಲ್ಲುವ ನಿರೀಕ್ಷೆಯನ್ನು ಹೊಂದಿದೆ.

ಕಾಮನ್‌ವೆಲ್ತ್ ಗೇಮ್ಸ್‌ನ 3ನೇ ದಿನದ ಭಾರತೀಯರನ್ನು ಒಳಗೊಂಡ ಈವೆಂಟ್‌ಗಳ ಸಂಪೂರ್ಣ ಪಟ್ಟಿ ಈ ಕೆಳಗಿದೆ.

1:00 PM: ತಾನಿಯಾ ಚೌಧರಿ ವರ್ಸಸ್ ಶೌನಾ ಒ ನೀಲ್ (ನಾರ್ತನ್ ಐಸ್‌ಲ್ಯಾಂಡ್) (ಲಾನ್ ಬಾಲ್ಸ್‌)
1:30 PM: ಯೋಗೇಶ್ವರ್ ಸಿಂಗ್ - ಪುರುಷರ ಆಲ್ ರೌಂಡ್ ಫೈನಲ್ (ಜಿಮ್ನಾಸ್ಟಿಕ್ಸ್)
2:00 PM: ಜೆರೆಮಿ ಲಾಲ್ರಿನ್ನುಂಗಾ - ಪುರುಷರ 67 ಕೆಜಿ (ವೇಟ್‌ಲಿಫ್ಟಿಂಗ್)
2:00 PM: ಪುರುಷರ ತಂಡ ಕ್ವಾರ್ಟರ್‌ಫೈನಲ್ಸ್‌ (ಟೇಬಲ್ ಟೆನಿಸ್)
2:32 PM: ಎಸೊವ್ ಅಲ್ಬೆನ್, ರೊನಾಲ್ಡೊ ಲೈಟೊಂಜಮ್, ಡೇವಿಡ್ ಬೆಕ್ಹ್ಯಾಮ್ - ಪುರುಷರ ಸ್ಪ್ರಿಂಟ್ ಕ್ವಾಲಿಫೈಯರ್ (ಸೈಕ್ಲಿಂಗ್)
3:07 PM: ಸಜನ್ ಪ್ರಕಾಶ್ - ಪುರುಷರ 200 ಮೀ ಬಟರ್‌ಫ್ಲೈ ಹೀಟ್ 3 (ಈಜು)
3:27 PM: ಪುರುಷರ ಸ್ಪ್ರಿಂಟ್ 1/8 ಫೈನಲ್ಸ್ (ಅರ್ಹತೆ ಪಡೆದಲ್ಲಿ ಮಾತ್ರ) (ಸೈಕ್ಲಿಂಗ್)
3:30 PM: ಭಾರತ vs ಪಾಕಿಸ್ತಾನ (ಮಹಿಳಾ ಕ್ರಿಕೆಟ್)
3:31 PM: ಶ್ರೀಹರಿ ನಟರಾಜ್ - ಪುರುಷರ 50 ಮೀ ಬ್ಯಾಕ್‌ಸ್ಟ್ರೋಕ್ ಹೀಟ್ 6 (ಈಜು)
4:00 PM: ಭಾರತ vs ಇಂಗ್ಲೆಂಡ್ - ಲಾನ್ ಬೌಲ್ ಪುರುಷರ ಜೋಡಿ
4:04 PM: ಪುರುಷರ ಸ್ಪ್ರಿಂಟ್ ಕ್ವಾರ್ಟರ್‌ಫೈನಲ್ಸ್ (ಅರ್ಹತೆ ಪಡೆದಲ್ಲಿ) (ಸೈಕ್ಲಿಂಗ್)
4:20/4:59 PM: ವೆಂಕಪ್ಪ ಕೆಂಗಲಗುತ್ತಿ, ದಿನೇಶ್ ಕುಮಾರ್ - ಪುರುಷರ 15KM ಸ್ಕ್ರಾಚ್‌ ರೇಸ್ ಕ್ವಾಲಿಫೈಯರ್ (ಸೈಕ್ಲಿಂಗ್)
4:45 PM: ನಿಖತ್ ಜರೀನ್ ವರ್ಸಸ್ ಹೆಲೆನಾ ಇಸ್ಮಾಯೆಲ್ ಬಾಗೂ (MOZ) - 48 ರಿಂದ 50KG (ರೌಂಡ್ ಆಫ್ 16) (ಬಾಕ್ಸಿಂಗ್)
5:15 PM: ಶಿವ ಥಾಪಾ ವರ್ಸಸ್ ರೀಸ್ ಲಿಂಚ್ (SCO) - 60 ರಿಂದ 63.5KG (ರೌಂಡ್ ಆಫ್ 16)
6:00 PM: ಜೋಶ್ನಾ ಚಿನಪ್ಪ ವರ್ಸಸ್ ಕೈಟ್ಲಿನ್ ವಾಟ್ಸ್ (NZL) - ಮಹಿಳೆಯರ ಸಿಂಗಲ್ಸ್ (ರೌಂಡ್ ಆಫ್ 16) (ಸ್ಕ್ವಾಷ್)
6:30 PM: ಪಾಪಿ ಹಜಾರಿಕಾ - ಮಹಿಳೆಯರ 59KG (ವೇಟ್‌ಲಿಫ್ಟಿಂಗ್)
6:45 PM: ಸೌರವ್ ಘೋಷಲ್ ವರ್ಸಸ್ ಡೇವಿಡ್ ಬೈಲಾರ್ಜನ್ (CAN) - ಪುರುಷರ ಸಿಂಗಲ್ಸ್ (ರೌಂಡ್ ಆಫ್ 16) (ಸ್ಕ್ವಾಷ್)
7:00 PM: ಮಹಿಳೆಯರ ಆಲ್‌ರೌಂಡ್ ಫೈನಲ್
7:30 PM: ಮಹಿಳೆಯರ ನಾಲ್ಕು ಕ್ವಾರ್ಟರ್‌ಫೈನಲ್ಸ್‌ (ಲಾನ್ ಬಾಲ್ಸ್‌)
7:40 PM: ಪುರುಷರ ಸ್ಪ್ರಿಂಟ್ ಸೆಮಿಫೈನಲ್ (ಅರ್ಹತೆ ಪಡೆದಲ್ಲಿ) (ಸೈಕ್ಲಿಂಗ್)
8:30 PM: ಭಾರತ ವರ್ಸಸ್ ಘಾನಾ - ಪುರುಷರ ಪೂಲ್ A (ಹಾಕಿ)
9:02 PM: ತ್ರಿಯಶಾ ಪೌಲ್, ಮಯೂರಿ ಲೂಟ್ - ಮಹಿಳೆಯರ 500M ಟೈಮ್ ಟ್ರಯಲ್ ಫೈನಲ್ (ಸೈಕ್ಲಿಂಗ್)
10:00 PM ನಂತರ: ಮಿಶ್ರ ತಂಡ ಕ್ವಾರ್ಟರ್‌ಫೈನಲ್‌ಗಳು (ಬ್ಯಾಡ್ಮಿಂಟನ್)
10:12 PM: ಪುರುಷರ ಸ್ಪ್ರಿಂಟ್ ಫೈನಲ್ಸ್ (ಅರ್ಹತೆ ಇದ್ದರೆ) (ಸೈಕ್ಲಿಂಗ್)
10:30 PM: ಪುರುಷರ ಜೋಡಿ ಕ್ವಾರ್ಟರ್‌ಫೈನಲ್ಸ್‌ (ಅರ್ಹತೆ ಪಡೆದಲ್ಲಿ) (ಲಾನ್ ಬಾಲ್ಸ್‌)
10:30 PM: ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ಗಳು (ಅರ್ಹತೆ ಪಡೆದಲ್ಲಿ) (ಲಾನ್ ಬಾಲ್ಸ್‌)
11:00 PM: ಅಚಿಂತಾ ಶೆಯುಲಿ - ಪುರುಷರ 73 ಕೆಜಿ (ವೇಟ್‌ಲಿಫ್ಟಿಂಗ್)
11:12 PM: ಪುರುಷರ 15KM ಸ್ಕ್ರಾಚ್‌ ರೇಸ್ ಫೈನಲ್ (ಅರ್ಹತೆ ಇದ್ದರೆ) (ಸೈಕ್ಲಿಂಗ್)
11:37 PM: ಶ್ರೀಹರಿ ನಟರಾಜ್ - ಪುರುಷರ 50 ಮೀ ಬ್ಯಾಕ್‌ಸ್ಟ್ರೋಕ್ ಸೆಮಿಫೈನಲ್ (ಈಜು)
11:58 PM: ಸಜನ್ ಪ್ರಕಾಶ್ - ಪುರುಷರ 200 ಮೀ ಬಟರ್‌ಫ್ಲೈ ಫೈನಲ್ (ಈಜು)
12:15 AM (AUG 1): ಸುಮಿತ್ ವರ್ಸಸ್ ಕ್ಯಾಲಮ್ ಪೀಟರ್ಸ್ (AUS) - 71 ರಿಂದ 75KG ವಿಭಾಗ (16 ರ ಸುತ್ತು)
1:00 AM (AUG 1): ಸಾಗರ್ ವಿರುದ್ಧ ಮ್ಯಾಕ್ಸಿಮ್ ಯೆಗ್ನಾಂಗ್ ಎನ್ಜಿಯೊ (ಕ್ಯಾಮರೂನ್) - 92KG ಗಿಂತ ಹೆಚ್ಚು
1:30 AM (AUG 1): ಮಹಿಳಾ ತಂಡದ ಸೆಮಿಫೈನಲ್‌ಗಳು (ಟೇಬಲ್ ಟೆನಿಸ್)

 ಕಾಮನ್‌ವೆಲ್ತ್‌ ಗೇಮ್ಸ್‌ 2022: ಭಾರತದ ವನಿತೆಯರಿಗೆ ಪಾಕಿಸ್ತಾನ ವನಿತೆಯರ ಸವಾಲು ಕಾಮನ್‌ವೆಲ್ತ್‌ ಗೇಮ್ಸ್‌ 2022: ಭಾರತದ ವನಿತೆಯರಿಗೆ ಪಾಕಿಸ್ತಾನ ವನಿತೆಯರ ಸವಾಲು

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, July 31, 2022, 11:18 [IST]
Other articles published on Jul 31, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X