ಕಾಮನ್‌ವೆಲ್ತ್ ಗೇಮ್ಸ್ 2022: ಟೇಬಲ್ ಟೆನಿಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಪುರುಷರ ತಂಡ

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಪುರುಷರ ಟೇಬಲ್ ಟೆನಿಸ್ ತಂಡವು ಚಿನ್ನದ ಪದಕ ಗೆದ್ದು ಬೀಗಿದೆ. ಸಿಂಗಾಪುರ ವಿರುದ್ಧ ನಡೆಯ ಫೈನಲ್‌ನಲ್ಲಿ 3-1 ಅಂತರದಲ್ಲಿ ಗೆಲ್ಲುವ ಮೂಲಕ ಭಾರತವು ಸ್ವರ್ಣವನ್ನ ಗೆದ್ದು ಬೀಗಿದ್ದು, 2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನ ಡಿಫೆಂಡ್ ಮಾಡಿಕೊಂಡಿದೆ.
ಈ ಗೆಲುವಿನ ಮೂಲಕ ಭಾರತವು ಪ್ರಸ್ತುತ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಐದನೇ ಚಿನ್ನದ ಪದಕ ಗೆದ್ದಿದ್ದು, ಪುರುಷರ ವಿಭಾಗದಲ್ಲಿ ಮೂರನೇ ಚಿನ್ನದ ಪದಕವಾಗಿದೆ. ಭಾರತವು ಒಟ್ಟಾರೆ 5 ಚಿನ್ನ, 4 ಬೆಳ್ಳಿ ಮತ್ತು 3 ಕಂಚಿನ ಪದಕ ಗೆಲ್ಲುವುದರೊಂದಿಗೆ ಪದಕಗಳ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ವೇಟ್‌ಲಿಫ್ಟರ್ ವಿಕಾಸ್ ಠಾಕೂರ್ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಪದಕಗಳ ಸಂಖ್ಯೆ 12 ಕ್ಕೆ ಏರಿಸಿದ್ದಾರೆ.
ಪುರುಷರ 96 ಕೆಜಿ ವಿಭಾಗದಲ್ಲಿ ಭಾರತದ ವಿಕಾಸ್ ಠಾಕೂರ್ ಒಟ್ಟು 346 ಕೆಜಿ ಎತ್ತಿದ್ದಾರೆ. ಇದರಲ್ಲಿ 155 ಕೆಜಿ ಸ್ನ್ಯಾಚ್ ಮತ್ತು 191 ಕೆಜಿ ಕ್ಲೀನ್ & ಜರ್ಕ್ ಎತ್ತುವ ಮೂಲಕ ಬೆಳ್ಳಿ ಗೆದ್ದರು.
ಈ ಸ್ಪರ್ಧೆಗೂ ಮುನ್ನ ಭಾರತ ಲಾನ್ ಬಾಲ್ಸ್ ಗೇಮ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದಿತು. ಇದುವರೆಗೂ ಈ ಸ್ಪರ್ಧೆಯಲ್ಲಿ ಭಾರತ ಎಂದಿಗೂ ಸ್ವರ್ಣ ಪದಕವನ್ನ ಜಯಿಸಿರಲಿಲ್ಲ. ಆದ್ರೆ ಈ ಬಾರಿ ಭಾರತ ಮಹಿಳಾ ತಂಡವು ಚೊಚ್ಚಲ ಚಿನ್ನದ ಪದಕಕ್ಕೆ ಕೊರಳೊಡ್ಡಿದೆ.
ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು 17-10 ರಿಂದ ಸೋಲಿಸಿ ಲಾನ್ ಬೌಲ್‌ಗಳಲ್ಲಿ ಐತಿಹಾಸಿಕ ಚಿನ್ನವನ್ನು ಗೆದ್ದುಕೊಂಡಿತು. ಪ್ರಬಲ ಹೋರಾಟದ ನಂತರ ಭಾರತ ಈ ಐತಿಹಾಸಿಕ ಚಿನ್ನದ ಗೆಲುವು ಸಾಧಿಸಿದ್ದು, ಲವ್ಲಿ ಚೌಬಿ, ಪಿಂಕಿ, ನಯನ್ಮೋನಿ ಸೈಕಿಯಾ ಮತ್ತು ರೂಪಾ ರಾಣಿ ಟ್ರಿಕ್ಕಿ ಭಾರತಕ್ಕೆ ಚಿನ್ನ ತಂದುಕೊಟ್ಟರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications