ಕಾಮನ್‌ವೆಲ್ತ್ ಗೇಮ್ಸ್ 2022: ಮಣಿಕಾ ಬಾತ್ರಾ ನೇತೃತ್ವದ ಟೇಬಲ್ ಟೆನಿಸ್ ಮಹಿಳಾ ತಂಡ ಆಯ್ಕೆ

ಈ ವರ್ಷ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ಗೆ ಭಾರತೀಯ ಟೇಬಲ್ ಟೆನಿಸ್ ಮಹಿಳಾ ತಂಡವನ್ನು ಆಯ್ಕೆ ಮಾಡಲಾಗಿದೆ. ಮಣಿಕಾ ಬಾತ್ರಾ ಈ ತಂಡದ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಕೆಲ ಅಗತ್ಯ ಮಾನದಂಡಗಳನ್ನು ಪೂರೈಸದಿದ್ದರೂ ಅರ್ಚನಾ ಕಾಮತ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದು ಒಟ್ಟು ನಾಲ್ವರು ಸದಸ್ಯರ ತಂಡವನ್ನು ಹೆಸರಿಸಲಾಗಿದೆ. ಭಾರತೀಯ ಕ್ರೀಡಾ ಪ್ರಾಧಿಕಾರ ಇದಕ್ಕೆ ಇನ್ನಷ್ಟೇ ಹಸಿರು ನಿಶಾನೆ ನೀಡಬೇಕಿದೆ.
ಟೇಬಲ್ ಟೆನಿಸ್ ಶ್ರೇಯಾಂಕದಲ್ಲಿ 39ನೇ ಶ್ರೇಯಾಂಕದಲ್ಲಿರುವ ಮನಿಕಾ ಬಾತ್ರಾ ಬಳಿಕ ಅರ್ಚನಾ ಕಾಮತ್ 66ನೃಏ ಶ್ರೇಯಾಂಕದಲ್ಲಿದ್ದು ಎರಡನೇ ಅತ್ಯುನ್ನತ ಶ್ರೇಯಾಂಕದ ಭಾರತೀಯ ಆಟಗಾರ್ತಿಯಾಗಿದ್ದಾರೆ. ಆದರೆ ದೇಶೀಯ ಪ್ರದರ್ಶನ ಕೂಡ ಈ ಆಯ್ಕೆಗೆ ಮಾನದಂಡವಾಗಿರುವ ಕಾರಣ ಅಗ್ರ ನಾಲ್ವರು ಆಟಗಾರ್ತಿಯರ ಪಟ್ಟಿಯಲ್ಲಿ ಕಾಮತ್ ಇರಲಿಲ್ಲ. ಹೀಗಾಗಿ ಆಡಳಿತ ಮಂಡಳಿ ಭವಿಷ್ಯದಲ್ಲಿ ಈ ಮಾರ್ಗಸೂಚಿಯಲ್ಲಿ ಬದಲಾವಣೆ ತರಲು ಬಯಸಿದೆ.
ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್‌ಗೆ ಆಯ್ಕೆಯಾಗಿರುವ ಭಾರತೀಯ ಮಹಿಳಾ ತಂಡ ಹೀಗಿದೆ. ಮಣಿಕಾ ಬಾತ್ರಾ, ಅರ್ಚನಾ ಕಾಮತ್, ಶ್ರೀಜಾ ಅಕುಲಾ (66ನೇ ಶ್ರೇಯಾಂಕ) ಹಾಗೂ ರೀತ್ ರಿಶ್ಯಾ (100). ಇನ್ನು ದಿಯಾ ಚಿತಾಲೆ (129) ಅವರನ್ನು ಮೀಸಲು ಆಟಗಾರ್ತಿಯಾಗಿ ಆಯ್ಕೆ ಮಾಡಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications