Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕಾಮನ್‌ವೆಲ್ತ್ ಗೇಮ್ಸ್ 2022: ಪದಕ ಪಟ್ಟಿಯಲ್ಲಿ ಟಾಪ್ 10 ದೇಶಗಳು; ಭಾರತಕ್ಕೆ ಎಷ್ಟನೇ ಸ್ಥಾನ?

Commonwealth Games 2022 Medal Tally: Check Indias Position On CWG Medal Table

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟ 2022ರ 6ನೇ ದಿನವೂ (ಬುಧವಾರ, ಆಗಸ್ಟ್ 3ರ ಅಂತ್ಯಕ್ಕೆ) ಭಾರತೀಯ ತಂಡಕ್ಕೆ ಮತ್ತೊಂದು ಫಲಪ್ರದ ಪ್ರವಾಸವಾಗಿದೆ. ಏಕೆಂದರೆ ಭಾರತೀಯ ಕ್ರೀಡಾಪಟುಗಳು ತಮ್ಮ ಬುಟ್ಟಿಗೆ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗಳಿಸುವಲ್ಲಿ ಯಶಸ್ವಿಯಾದರು.

ಎತ್ತರ ಜಿಗಿತ ಪಟು ತೇಜಸ್ವಿನ್ ಶಂಕರ್ ಕಂಚಿನ ಪದಕ ಗೆದ್ದರೆ, ಮಹಿಳೆಯರ 78kg+ ಫೈನಲ್‌ನಲ್ಲಿ ಜೂಡೋ ಪಟು ತುಲಿಕಾ ಮಾನ್ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಭಾರತವು ಜೂಡೋದಲ್ಲಿ ತಮ್ಮ ಮೊದಲ ಬೆಳ್ಳಿ ಪದಕವನ್ನು ಗೆದ್ದಿತು. ಸ್ಕ್ವಾಷ್ ಸ್ಟಾರ್ ಸೌರವ್ ಘೋಷಾಲ್ ಕೂಡ ಇಂಗ್ಲೆಂಡ್‌ನ ಜೇಮ್ಸ್ ವಿಲ್‌ಸ್ಟ್ರೋಪ್ ಅವರನ್ನು ಸೋಲಿಸಿ ಕಂಚಿನ ಪದಕ ಪಡೆದರು.

ಸ್ಕಾಟ್ಲೆಂಡ್‌ನ ಸಾರಾ ಅಡ್ಲಿಂಗ್ಟನ್ ವಿರುದ್ಧ ಸೋಲನುಭವಿಸಿದ ನಂತರ ಭಾರತದ ಜೂಡೋ ಪಟು ತುಲಿಕಾ ಮಾನ್ ಮಹಿಳೆಯರ +78 ಕೆಜಿ ವಿಭಾಗದ ಫೈನಲ್‌ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಪದಕ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಕುಸಿದು 6ನೇ ದಿನದಂದು ಭಾರತಕ್ಕೆ ಇದು ಅತ್ಯುತ್ತಮ ಪದಕ ಪ್ರದರ್ಶನವಾಗಿದೆ.

ಅಂಕಪಟ್ಟಿಯಲ್ಲಿ ಭಾರತಕ್ಕೆ ಏಳನೇ ಸ್ಥಾನ

ಅಂಕಪಟ್ಟಿಯಲ್ಲಿ ಭಾರತಕ್ಕೆ ಏಳನೇ ಸ್ಥಾನ

ಆರನೇ ದಿನದಲ್ಲಿ ಮತ್ತೆ ಐದು ಪದಕಗಳನ್ನು ಗಳಿಸುವುದರೊಂದಿಗೆ, ಭಾರತವು ಈಗ ಒಟ್ಟು ಐದು ಚಿನ್ನ, ಆರು ಬೆಳ್ಳಿ ಮತ್ತು ಏಳು ಕಂಚಿನ ಪದಕಗಳನ್ನು ಹೊಂದಿದ್ದು ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.

ಆಸ್ಟ್ರೇಲಿಯಾ 46 ಚಿನ್ನ, 38 ಬೆಳ್ಳಿ ಮತ್ತು 39 ಕಂಚಿನೊಂದಿಗೆ ಒಟ್ಟು 123 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇಂಗ್ಲೆಂಡ್ ಕೂಡ 100 ಪದಕಗಳ ಗಡಿ ದಾಟಿದೆ ಮತ್ತು ಇದುವರೆಗೆ 38 ಚಿನ್ನ, 37 ಬೆಳ್ಳಿ ಮತ್ತು 28 ಕಂಚು ಗೆದ್ದಿದೆ.

ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಸೌರವ್

ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಸೌರವ್

ಭಾರತದ ನಂಬರ್ ಒನ್ ಸ್ಕ್ವಾಷ್ ಆಟಗಾರ ಸೌರವ್ ಘೋಷಲ್ ಅವರು ಬರ್ಮಿಂಗ್ಹ್ಯಾಮ್ 2022 ಕಾಮನ್‌ವೆಲ್ತ್ ಗೇಮ್ಸ್ (ಸಿಡಬ್ಲ್ಯೂಜಿ)ನ ಆರನೇ ದಿನದ ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದರು. ಮೂರನೇ ಪಂದ್ಯದಲ್ಲಿ ವಿಶ್ವದ ಮಾಜಿ ನಂಬರ್ ಒನ್ ಆಟಗಾರ ಇಂಗ್ಲೆಂಡ್‌ನ ಜೇಮ್ಸ್ ವಿಲ್‌ಸ್ಟ್ರಾಪ್ ಅವರನ್ನು 11-6, 11-1, 11-4 ಸೆಟ್‌ಗಳಿಂದ ಸೋಲಿಸಿದರು. ಈ ಮೂಲಕ 35 ವರ್ಷದ ಅನುಭವಿ ಕಾಮನ್‌ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಸ್ಕ್ವಾಷ್‌ನಲ್ಲಿ ಸಿಂಗಲ್ಸ್ ಪದಕ ಗೆದ್ದ ಮೊದಲ ಭಾರತೀಯರಾದರು.

ಅದೇ ದಿನ ತೇಜಸ್ವಿನ್ ಶಂಕರ್ ಅವರು ಪುರುಷರ ಹೈಜಂಪ್‌ನಲ್ಲಿ 2.22 ಮೀಟರ್ ಕ್ಲಿಯರೆನ್ಸ್‌ನೊಂದಿಗೆ ಕಂಚಿನ ಪದಕವನ್ನು ಗಳಿಸಿದರು. ಅವರದು ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಮೊದಲ ಪದಕವಾಗಿದೆ.

ಇನ್ನು ವೇಟ್‌ಲಿಫ್ಟಿಂಗ್ ಸ್ಪರ್ಧೆಗಳು ಆರನೇ ದಿನದಂದು ಮುಕ್ತಾಯಗೊಂಡವು ಮತ್ತು ರೋಸ್ಟರ್‌ನ ಕೊನೆಯ ಸ್ಪರ್ಧೆಯಾದ ಸೂಪರ್ ಹೆವಿವೇಟ್ ಪುರುಷರ 109+ ಕೆಜಿ ತನಕ ಭಾರತದ ಉತ್ತಮ ಓಟ ಮುಂದುವರೆಯಿತು.

ವೇಟ್‌ಲಿಫ್ಟಿಂಗ್‌ನಲ್ಲಿ ಕಂಚು ಗೆದ್ದ ಗುರುದೀಪ್ ಸಿಂಗ್

ವೇಟ್‌ಲಿಫ್ಟಿಂಗ್‌ನಲ್ಲಿ ಕಂಚು ಗೆದ್ದ ಗುರುದೀಪ್ ಸಿಂಗ್

ಗುರುದೀಪ್ ಸಿಂಗ್ ಒಟ್ಟು 390 ಕೆಜಿ (ಸ್ನ್ಯಾಚ್‌ನಲ್ಲಿ 167 ಕೆಜಿ + ಕ್ಲೀನ್ ಮತ್ತು ಜರ್ಕ್‌ನಲ್ಲಿ 223 ಕೆಜಿ) ಎತ್ತುವ ಮೂಲಕ ಕಂಚು ಗೆದ್ದರು. ಪಾಕಿಸ್ತಾನದ ಮುಹಮ್ಮದ್ ನೂರ್ ಬಟ್ ಒಟ್ಟು 405 ಕೆಜಿ ತೂಕ ಎತ್ತುವ ಮೂಲಕ ಚಿನ್ನ ಗೆದ್ದರೆ, ನ್ಯೂಜಿಲೆಂಡ್‌ನ ಕಿವಿ ಡೇವಿಡ್ ಲಿಟಿ 394 ಕೆಜಿಯೊಂದಿಗೆ ಬೆಳ್ಳಿ ಗೆದ್ದಿದ್ದಾರೆ.

ವೇಟ್‌ಲಿಫ್ಟಿಂಗ್ ಸ್ಪರ್ಧೆಗಳಲ್ಲಿ ಭಾರತವು ಮೂರು ಚಿನ್ನ, ಮೂರು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳೊಂದಿಗೆ ತನ್ನ ಅಭಿಯಾನವನ್ನು ಮುಗಿಸಿತು ಮತ್ತು ಅವರ ಒಟ್ಟು 10 ಪದಕಗಳು ಹಿಂದಿನ ಗೋಲ್ಡ್ ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್‌ಗಿಂತ ಉತ್ತಮವಾಗಿದೆ.

ಕಾಮನ್‌ವೆಲ್ತ್ ಕ್ರೀಡಾಕೂಟ 2022ರ ಪದಕ ಪಟ್ಟಿ

ಕಾಮನ್‌ವೆಲ್ತ್ ಕ್ರೀಡಾಕೂಟ 2022ರ ಪದಕ ಪಟ್ಟಿ

ಆಸ್ಟ್ರೇಲಿಯಾ: 46 ಚಿನ್ನ, 38 ಬೆಳ್ಳಿ, 39 ಕಂಚು, ಒಟ್ಟು 123 ಪದಕಗಳು

ಇಂಗ್ಲೆಂಡ್: 38 ಚಿನ್ನ, 37 ಬೆಳ್ಳಿ, 28 ಕಂಚು, ಒಟ್ಟು 103 ಪದಕಗಳು

ಕೆನಡಾ: 16 ಚಿನ್ನ, 20 ಬೆಳ್ಳಿ, 21 ಕಂಚು, ಒಟ್ಟು 57 ಪದಕಗಳು

ನ್ಯೂಜಿಲೆಂಡ್: 16 ಚಿನ್ನ, 10 ಬೆಳ್ಳಿ, 10 ಕಂಚು, ಒಟ್ಟು 36 ಪದಕಗಳು

ಸ್ಕಾಟ್ಲೆಂಡ್: 7 ಚಿನ್ನ, 8 ಬೆಳ್ಳಿ, 17 ಕಂಚು, ಒಟ್ಟು 32 ಪದಕಗಳು

ದಕ್ಷಿಣ ಆಫ್ರಿಕಾ: 6 ಚಿನ್ನ, 7 ಬೆಳ್ಳಿ, 7 ಕಂಚು, ಒಟ್ಟು 20 ಪದಕಗಳು

ಭಾರತ: 5 ಚಿನ್ನ, 6 ಬೆಳ್ಳಿ, 7 ಕಂಚು, ಒಟ್ಟು 18 ಪದಕಗಳು

ವೇಲ್ಸ್: 4 ಚಿನ್ನ, 4 ಬೆಳ್ಳಿ, 9 ಕಂಚು, ಒಟ್ಟು 17 ಪದಕಗಳು

ಮಲೇಷ್ಯಾ: 3 ಚಿನ್ನ, 2 ಬೆಳ್ಳಿ, 3 ಕಂಚು, ಒಟ್ಟು 8 ಪದಕಗಳು

ನೈಜೀರಿಯಾ: 3 ಚಿನ್ನ, 1 ಬೆಳ್ಳಿ, 4 ಕಂಚು, ಒಟ್ಟು 8 ಪದಕಗಳು

Story first published: Thursday, August 4, 2022, 11:13 [IST]
Other articles published on Aug 4, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+