ಕಾಮನ್‌ವೆಲ್ತ್ ಗೇಮ್ಸ್ 2022:ಭಾರತದ ಪರ ಎರಡು ಚಿನ್ನದ ಪದಕ ಗೆದ್ದ ಬಾಕ್ಸರ್ಸ್

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2022ರ 10ನೇ ದಿನದಾಟದಲ್ಲಿ ಭಾರತಕ್ಕೆ ಎರಡು ಚಿನ್ನದ ಪದಕ ಲಭಿಸಿದೆ. ಭಾರತದ ಬಾಕ್ಸರ್‌ಗಳಾದ ನಿತು ಘಂಘಾಸ್ ಮತ್ತು ಅಮಿತ್ ಪಂಘಲ್ ಕ್ರಮವಾಗಿ ಮಹಿಳಾ ಮತ್ತು ಪುರುಷರ ಬಾಕ್ಸಿಂಗ್‌ನಲ್ಲಿ ಸ್ವರ್ಣ ಪದಕ ಜಯಿಸಿದ್ದಾರೆ.
ಮಹಿಳೆಯರ 48 ಕೆಜಿ ವಿಭಾಗದ ಫೈನಲ್‌ನಲ್ಲಿ ನಿತು ಘಂಘಾಸ್ ಅವರು ಇಂಗ್ಲೆಂಡ್‌ನ ಡೆಮಿ-ಜೇಡ್ ರೆಸ್ಟನ್ ಅವರನ್ನು ಅವಿರೋಧವಾಗಿ 5-0 ಅಂಕಗಳಿಂದ ಸೋಲಿಸಿ ಚೊಚ್ಚಲ ಚಿನ್ನದ ಪದಕ ಗೆದ್ದರು. ಇದು ಕಾಮನ್‌ವೆಲ್ತ್ ಗೇಮ್ಸ್ 2022ರ ಬಾಕ್ಸಿಂಗ್ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವಾಗಿದೆ.
ಮಹಿಳೆಯರ ಕನಿಷ್ಠ ತೂಕದ ಫೈನಲ್ ಪಂದ್ಯದಲ್ಲಿ ಭಾರತದ ನಿತು ಘಂಘಾಸ್ 4-1 ಮುನ್ನಡೆ ಸಾಧಿಸಿದ್ರು. ಆಕೆ ಎರಡನೇ ಸುತ್ತಿನಲ್ಲಿ ಪ್ರಾಬಲ್ಯ ಸಾಧಿಸಿದಳು. ಎರಡನೇ ಸುತ್ತಿನಲ್ಲಿ 4-1 ನಿರ್ಧಾರದ ಗೆಲುವಿನೊಂದಿಗೆ ಅದ್ಭುತ ಮುನ್ನಡೆ ಸಾಧಿಸಿದರು. ಮೊದಲ ಸುತ್ತಿನಲ್ಲಿ ಆಕ್ರಮಣಕಾರಿ ಆಟವಾಡಿದ ನಿತು ಎಲ್ಲೂ ಕೂಡ ಹಿಂದಿರುಗಿ ನೋಡದೆ ತಮ್ಮ ಆಟ ಮುಂದುವರಿಸಿದ್ರು, ಈ ಮೂಲಕ ಎದುರಾಳಿ ಡೆಮಿಗೆ ಪವರ್‌ಫುಲ್ ಪಂಚ್ ಮೂಲಕ ಸೋಲಿಸಿದರು.
51 ಕೆಜಿ ಕುಸ್ತಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಅಮಿತ್ ಪಂಘಲ್
ಇನ್ನು ಮತ್ತೊಂದೆಡೆ ಭಾರತಕ್ಕೆ ಪದಕ ಖಚಿತಪಡಿಸಿದ್ದ ಬಾಕ್ಸರ್ ಅಮಿತ್ ಪಂಘಲ್ ಪುರುಷರ 51 ಕೆಜಿ ಕುಸ್ತಿ ವಿಭಾಗದಲ್ಲಿ ದೇಶಕ್ಕೆ ಸ್ವರ್ಣ ಪದಕ ಜಯಿಸಿಕೊಟ್ಟಿದ್ದಾರೆ. ಅಮಿತ್ ಪಂಗಲ್ ಮೊದಲ ಸುತ್ತನ್ನು 5-0 ಅಂತರದಿಂದ ಗೆಲ್ಲುವ ಮೂಲಕ ಇಂಗ್ಲೆಂಡ್‌ನ ಕಿಯಾರನ್ ಮ್ಯಾಕ್‌ಡೊನಾಲ್ಡ್ ವಿರುದ್ಧ ಗೆಲುವು ಸಾಧಿಸಿದರು.
ಅಮಿತ್‌ನ ವೇಗದ ಕೈ ವೇಗವು ಅದ್ಭುತವಾದ ರಕ್ಷಣೆಯೊಂದಿಗೆ ಕೆಲವು ದಾಳಿಗಳನ್ನು ತಡೆಯುವ ಮೊದಲು ಮ್ಯಾಕ್‌ಡೊನಾಲ್ಡ್ ಒದೆ ತಿಂದಿದ್ದರು. ಎರಡನೇ ಸುತ್ತಿನಲ್ಲಿ ಅಮಿತ್ 4-1 ಅಂತರದಲ್ಲಿ ಗೆದ್ದರು. ಮೂರನೇ ಸುತ್ತಿನಲ್ಲಿ ಮತ್ತೊಮ್ಮೆ ಕೆಲವು ಕ್ಲೀನ್ ಪಂಚ್ ಹೊಡೆದರು.
ಈ ಪಂದ್ಯದ ಮೂಲಕ ಬಾಕ್ಸಿಂಗ್ ಎರಡು ಫೈನಲ್ ಭಾರತವು ಎರಡು ಚಿನ್ನದ ಪದಕ ತನ್ನದಾಗಿಸಿಕೊಂಡಿದೆ. ಈ ಮೂಲಕ ಭಾರತವು 13 ಚಿನ್ನ, 11 ಬೆಳ್ಳಿ ಮತ್ತು 16 ಕಂಚಿನ ಪದಕ ಗೆಲ್ಲುವ ಮೂಲಕ ಒಟ್ಟಾರೆ 40 ಪದಕ ತನ್ನದಾಗಿಸಿಕೊಂಡಿದ್ದು, ಪದಕಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿ ಮುಂದುವರಿದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications