For Quick Alerts
ALLOW NOTIFICATIONS  
For Daily Alerts

ಕಾಮನ್‌ವೆಲ್ತ್‌ ಗೇಮ್ಸ್ 2022: 10,000 ಮೀಟರ್ ನಡಿಗೆಯಲ್ಲಿ ಬೆಳ್ಳಿ ಪದಕ ಗೆದ್ದ ಪ್ರಿಯಾಂಕಾ

Priyanka goswami

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಗೇಮ್ಸ್‌ 2022ರ ಒಂಬತ್ತನೇ ದಿನದಾಟದಲ್ಲಿ ಭಾರತಕ್ಕೆ ಮೊದಲ ಪದಕ ಜಯಿಸಿದೆ. 10,000 ಮೀಟರ್ ನಡಿಗೆಯಲ್ಲಿ ಪ್ರಿಯಾಂಕಾ ಬೆಳ್ಳಿ ಪದಕ ಗೆಲ್ಲುವ ಮೂಲಕ ಟ್ರ್ಯಾಕ್ ಮತ್ತು ಫೀಲ್ಡ್‌ನಿಂದ ಭಾರತಕ್ಕೆ ಇಂದು ಮೊದಲ ಪದಕ ಲಭಿಸಿದೆ.

2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ರಜತ ಪದಕ ಗೆದ್ದಿದ್ದ ಪ್ರಿಯಾಂಕಾ ತಮ್ಮ ಅಮೋಘ ಪ್ರದರ್ಶನವನ್ನ ಕಾಮನ್‌ವೆಲ್ತ್‌ಗೇಮ್ಸ್‌ನಲ್ಲೂ ಮುಂದುವರಿಸಿದ್ದು, ಮಹಿಳೆಯರ 10,000 ಮೀಟರ್ ನಡಿಗೆಯಲ್ಲಿ 43:38.82 ನಿಮಿಷಗಳಲ್ಲಿ ಗುರಿ ಮುಟ್ಟುವ ಮೂಲಕ ಬೆಳ್ಳಿ ಪದಕ ಜಯಿಸಿದರು. ಈ ಮೂಲಕ ಭಾರತ ಒಂಬತ್ತನೇ ದಿನದಲ್ಲಿ ಮೊದಲ ಪದಕ ಗಳಿಸಿದ್ದು, ಕೆಲವೇ ಸೆಕೆಂಡ್‌ಗಳ ಅಂತರದಲ್ಲಿ ಭಾರತ ಚಿನ್ನದ ಪದಕ ಮಿಸ್ ಮಾಡಿಕೊಂಡಿದೆ.

ಆಸ್ಟ್ರೇಲಿಯಾದ ಜೆಮಿಮಾ ಮೊನ್ಟ್ಯಾಗ್ 42:34.30 ನಿಮಿಷಗಳಲ್ಲಿ ಗುರಿ ತಲುಪುವ ಮೂಲಕ ಮೊದಲ ಸ್ಥಾನ ಪಡೆದು ಸ್ವರ್ಣ ಪದಕ ಜಯಿಸಿದ್ರು. ಈ ಮೂಲಕ ಪ್ರಿಯಾಂಕಾ ಗೋಸ್ವಾಮಿ ಸ್ವಲ್ಪದರಲ್ಲೇ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟರು.

ಭಾರತವು ಇಲ್ಲಿಯವರೆಗೆ ಒಟ್ಟು 27 ಪದಕಗಳನ್ನ ಗೆದ್ದು ಬೀಗಿದ್ದು, ಇದರಲ್ಲಿ 9 ಚಿನ್ನ, 9 ಬೆಳ್ಳಿ ಹಾಗೂ 9 ಕಂಚಿನ ಪದಕವನ್ನ ತನ್ನದಾಗಿಸಿಕೊಂಡಿದೆ.

ಶುಕ್ರವಾರ ಭಾರತಕ್ಕೆ 8 ನೇ ದಿನದಂದು ಪದಕಗಳ ಮಳೆಯ ಸುರಿಮಳೆಯಾಯಿತು, ಏಕೆಂದರೆ ಭಾರತೀಯ ಕುಸ್ತಿಪಟುಗಳು ಶುಕ್ರವಾರ ರಾಷ್ಟ್ರಕ್ಕಾಗಿ 3 ಚಿನ್ನದ ಪದಕಗಳು, ಒಂದು ಬೆಳ್ಳಿ ಮತ್ತು 2 ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಕೆಲವು ಸ್ಮರಣೀಯ ಪ್ರದರ್ಶನಗಳನ್ನು ನೀಡಿದರು. ದೀಪಕ್ ಪೂನಿಯಾ, ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಚಿನ್ನಕ್ಕೆ ಕೊರಳೊಡ್ಡಿದರೆ, ಅಂಶು ಮಲಿಕ್ ಬೆಳ್ಳಿ ಮತ್ತು ದಿವ್ಯಾ ಕಕ್ರಾನ್-ಮೋಹಿತ್ ಗ್ರೆವಾಲ್ ಕಂಚಿನ ಪದಕಗಳನ್ನು ಭಾರತಕ್ಕೆ ಸೇರಿಸಿದರು.

ಆಸ್ಟ್ರೇಲಿಯಾ 50 ಚಿನ್ನ ಮತ್ತು ಒಟ್ಟು 140 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ, ಒಟ್ಟಾರೆ 131 ಪದಕಗಳೊಂದಿಗೆ ಇಂಗ್ಲೆಂಡ್ ಎರಡನೇ ಸ್ಥಾನದಲ್ಲಿದೆ, 67 ಪದಕಗಳೊಂದಿಗೆ ಕೆನಡಾ ಮೂರನೇ ಸ್ಥಾನದಲ್ಲಿದೆ ಮತ್ತು ಭಾರತಕ್ಕಿಂತ ಮುಂದೆ 41 ಪದಕಗಳೊಂದಿಗೆ ನ್ಯೂಜಿಲೆಂಡ್ ನಾಲ್ಕನೇ ಸ್ಥಾನದಲ್ಲಿದೆ.

Story first published: Saturday, August 6, 2022, 16:38 [IST]
Other articles published on Aug 6, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+