Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕಾಮನ್‌ವೆಲ್ತ್‌ ಕ್ರೀಡಾಕೂಟದಿಂದ ಕ್ರಿಕೆಟ್‌, ಹಾಕಿ ಸೇರಿಂದತೆ 10 ಕ್ರೀಡೆ ಕಿಕ್‌ ಔಟ್‌: ಇಲ್ಲಿದೆ ಕಾರಣ

ಗ್ಲಾಸ್ಗೊದಲ್ಲಿ ನಡೆಯಲಿರುವ 23ನೇ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟಕ್ಕೆ ಸಿದ್ಧತೆಗಳು ಆರಂಭವಾಗಿವೆ. 2026ರ ಜುಲೈ 23 ರಿಂದ ಆಗಸ್ಟ್ 2 ರವರೆಗೆ ಸ್ಕಾಟ್ಲೆಂಡ್‌ನ ಗ್ಲಾಸ್ಗೊ ನಗರದಲ್ಲಿ ಕ್ರೀಡಾಕೂಟ ನಡೆಯಲಿದೆ. ಇದಕ್ಕೂ ಮುನ್ನ ಪದಕಗಳ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ನಿರಾಸೆಯಾಗಿದೆ.

ಭಾರತದ ಪದಕ ನಿರೀಕ್ಷೆಯ ಕ್ರೀಡೆಗಳನ್ನು 2026ರ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಕೈ ಬಿಡಲಾಗಿದೆ. ಹಾಕಿ, ಬ್ಯಾಡ್ಮಿಂಟನ್, ಶೂಟಿಂಗ್, ಕುಸ್ತಿ ಮತ್ತು ಕ್ರಿಕೆಟ್‌ ಸೇರಿದಂತೆ 10 ಕ್ರೀಡೆಗಳನ್ನು ಕೈಬಿಡಲಾಗಿದೆ. 2026ರ ಕಾಮನ್‌ವೆಲ್ತ್‌ ಕ್ರೀಡೆಯನ್ನು ಬಜೆಟ್ ಸ್ನೇಹಿಯಾಗಿಸುವ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ವರದಿಗಳು ಹೇಳಿವೆ.

Cricket Hockey and Wrestling Dropped from 2026 Commonwealth Games in Glasgow

ಗ್ಲಾಸ್ಗೊ 2014ರ ಕಾಮನ್‌ವೆಲ್ತ್‌ ಕ್ರೀಡಾಕೂಟವನ್ನು ಆಯೋಜಿಸಿತ್ತು. ಆದರೆ, ಈಗ ಮುಂದಿನ ವರ್ಷ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕ್ರೀಡೆಗಳ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ. ಇದಲ್ಲದೇ ಕೆಲವು ಕ್ರೀಡೆಗಳನ್ನೂ ಸೇರಿಸಲಾಗಿದೆ.

2022ರ ಕಾಮನ್‌ವೆಲ್ತ್ ಗೇಮ್ಸ್‌ನ ಭಾಗವಾಗಿದ್ದ ಹಾಕಿ, ಬ್ಯಾಡ್ಮಿಂಟನ್, ಕುಸ್ತಿ, ಕ್ರಿಕೆಟ್, ಟೇಬಲ್ ಟೆನ್ನಿಸ್, ಶೂಟಿಂಗ್ ಮತ್ತು ಸ್ಕ್ವಾಷ್ ಕ್ರೀಡೆಗಳನ್ನು ತೆಗೆದುಹಾಕಲಾಗಿದೆ. ಅಥ್ಲೆಟಿಕ್ಸ್ ಮತ್ತು ಪ್ಯಾರಾ ಅಥ್ಲೆಟಿಕ್ಸ್ (ಟ್ರ್ಯಾಕ್ ಮತ್ತು ಫೀಲ್ಡ್), ಈಜು ಮತ್ತು ಪ್ಯಾರಾ ಈಜು, ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್, ಟ್ರ್ಯಾಕ್ ಸೈಕ್ಲಿಂಗ್ ಮತ್ತು ಪ್ಯಾರಾ ಟ್ರ್ಯಾಕ್ ಸೈಕ್ಲಿಂಗ್, ನೆಟ್‌ಬಾಲ್, ವೇಟ್‌ಲಿಫ್ಟಿಂಗ್ ಮತ್ತು ಪ್ಯಾರಾ ಪವರ್‌ಲಿಫ್ಟಿಂಗ್, ಬಾಕ್ಸಿಂಗ್, ಜೂಡೋ, ಬೌಲ್ಸ್ ಮತ್ತು ಪ್ಯಾರಾ ಬೌಲ್‌ಗಳು 3x3 ಅನ್ನು ಒಳಗೊಂಡಿವೆ ಬ್ಯಾಸ್ಕೆಟ್‌ಬಾಲ್ ಮತ್ತು 3x3 ಗಾಲಿಕುರ್ಚಿ ಬ್ಯಾಸ್ಕೆಟ್‌ಬಾಲ್ ಕ್ರೀಡೆಗಳು 2026ರ ಆವೃತ್ತಿಯಲ್ಲಿ ಇರಲಿವೆ ಎಂದು ಕಾಮನ್‌ವೆಲ್ತ್ ಗೇಮ್ಸ್ ಫೆಡರೇಷನ್ ಮಾಹಿತಿ ನೀಡಿದೆ.

ಭಾರತಕ್ಕೆ ಹಿನ್ನಡೆ

2026ರ ಕಾಮನ್‌ವೆಲ್ತ್‌ ಕ್ರೀಡಾಕೂಟದಿಂದ ಹೊರಗಿಡಲಾದ ಈ 10 ಕ್ರೀಡೆಗಳಲ್ಲಿ ಭಾರತ ಪ್ರಬಲ ಪದಕದ ಸ್ಪರ್ಧಿಯಾಗಿತ್ತು. ಏಕೆಂದರೆ ಈ ಕ್ರೀಡೆಗಳ ಮೇಲೆ ಭಾರತ ತನ್ನಯಾದೆ ಹಿಡಿತವನ್ನು ಹೊಂದಿದೆ. ಇದೀಗ ಭಾರತದ ಪದಕ ಗೆಲ್ಲುವ ಹಾದಿಗೆ ಮುಳ್ಳಿನ ಹಾಸಿಗೆಯನ್ನು ಹೊದಿಸಿದಂತಾಗಿದೆ. ಏಕೆಂದರೆ ಈ ಆವೃತ್ತಿಗಳಲ್ಲಿ ಭಾರತ ಹೆಚ್ಚಿನ ಪದಕಗಳನ್ನು ಗೆದ್ದು ದಾಖಲೆ ಮಾಡಿತ್ತು.

2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಆಥ್ಲೀಟ್ಸ್‌ ಅದ್ಭುತ ಪ್ರದರ್ಶನ ನೀಡಿದ್ದರು. ಈ ವರ್ಷ ಭಾರತ ಆಥ್ಲೀಟ್ಸ್ ತಂಡ 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚು ಸೇರಿದಂತೆ ಒಟ್ಟು 61 ಪದಕಗಳನ್ನು ಗೆದ್ದು ಸಾಧನೆ ಮಾಡಿತ್ತು. ಕುಸ್ತಿಯಲ್ಲಿ ಭಾರತ ಬರೋಬ್ಬರಿ 12 ಪದಕಗಳನ್ನು ಗೆದ್ದಿತ್ತು. ನಂತರ ವೇಟ್‌ಲಿಫ್ಟಿಂಗ್ 10, ಅಥ್ಲೆಟಿಕ್ಸ್ 8, ಬಾಕ್ಸಿಂಗ್ ಮತ್ತು ಟೇಬಲ್ ಟೆನಿಸ್ ಕ್ರೀಡೆಗಳಲ್ಲಿ ತಲಾ 7 ಪದಕಗಳಿಗೆ ಭಾರತದ ಅಥ್ಲೀಟ್ಸ್ ಮುತ್ತಿಕ್ಕಿದ್ದರು.

ಆಯೋಜಕರು ಹೇಳಿದ್ದೇನು?

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಸ್ಕಾಟ್ಲೆಂಡ್‌ ಕಾಮನ್‌ವೆಲ್ತ್ ಗೇಮ್ಸ್‌ನ ಸಿಇಒ ಜಾನ್ ಡಿಗೋ ಅವರು, ' ಅತ್ಯಂತ ವಿಭಿನ್ನವಾಗಿರುವ ಕ್ರೀಡೆಯನ್ನು ಅಳವಡಿಸುವ ಗುರಿ ನಮ್ಮದಾಗಿದೆ. ಇದರಿಂದ 2026ರ ಗ್ಲಾಸ್ಗೊ ಕಾಮನ್‌ವೆಲ್ತ್ ಗೇಮ್ಸ್‌ ಎಲ್ಲಾ ಉತ್ಸಾಹ, ರೋಮಾಂಚನ ಮತ್ತು ಸಂಭ್ರಮಗಳನ್ನು ನೀಡಲಿದೆ. ಈ ಹಿಂದಿನ ಕ್ರೀಡಾಕೂಟಗಳಿಗಿಂತ ಇದು ಭಿನ್ನ ಆಗಿರಲಿದೆ ಎಂದು ಹೇಳಿದ್ದಾರೆ.

Story first published: Tuesday, October 22, 2024, 15:57 [IST]
Other articles published on Oct 22, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+