ಕ್ರಿಕೆಟಿಗ ಕೇದಾರ್ ಜಾಧರ್ ತಂದೆ ನಾಪತ್ತೆ: ಶೋಧ ನಡೆಸುತ್ತಿರುವ ಪುಣೆ ಪೊಲೀಸರು

ಭಾರತೀಯ ಕ್ರಿಕೆಟಿಗ ಜೇದಾರ್ ಜಾಧವ್ ತಂದೆ ಪುಣೆಯಲ್ಲಿ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು ಶೋಧ ನಡೆಸಲಾಗುತ್ತಿದೆ. ಕೇದಾರ್ ಜಾಧವ್ ಅವರ ತಂದೆ ಮಹಾದೇವ್ ಜಾಧವ್ ಅವರು ಸೋಮವಾರ ಬೆಳ್ಳಿಗ್ಗೆ 11:30ರ ಸುಮಾರಿಗೆ ಪುಣೆಯ ಕೊತ್ರೋಡ್ ಪ್ರದೇಶದಿಂದ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ ಮಹಾದೇವ್ ಜಾಧವ್ ಅವರು ಸೆಕ್ಯೂರಿಟಿ ಗಾರ್ಡ್‌ನ ಕಣ್ತಪ್ಪಿಸಿ ಹೊರಗಡೆ ಹೋಗಿದ್ದರು. ಅದಾದ ಕೆಲವೇ ಹೊತ್ತಿನಲ್ಲಿ ಕೇದಾರ್ ಜಾಧವ್ ಅವರ ಫೋನ್ ಸ್ವಿಚ್ ಆಗಿ ಆಗಿದೆ. ಬಳಿಕ ಅಲಂಕಾರ್ ಪೊಲೀಸ್ ಠಾಣೆಯಲ್ಲಿ ಕೇದಾರ್ ಜಾಧವ್ ಕುಟುಂಬಸ್ಥರು ಪ್ರಕರಣ ದಾಖಲಿಸಿದ್ದಾರೆ.
ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧಕಾರ್ಯವನ್ನು ನಡೆಸುತ್ತಿದ್ದಾರೆ. ಸಿಸಿಟಿವಿ ಪರಿಶೀಲನೆ ನಡೆಸಲಾಗುತ್ತಿದ್ದು ಕರ್ವೆ ನಗರ್ ಎಂಬಲ್ಲಿ ಕೊನೆಯದಾಗಿ ಕೇದಾರ್ ಜಾಧವ್ ಅವರ ತಂದೆ ಸಿಸಿಟಿವಿಯಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಮಾಹಿತಿ ದೊರೆತಿದೆ. ಇದನ್ನು ಆಧರಿಸಿ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಇನ್ನು ಕೇದಾರ್ ಜಾಧವ್ ತಂದೆ ಮಹಾದೇವ್ ಜಾಧವ್ ಅವರು ಬುದ್ದಿಮಾಂಧ್ಯತೆಯಿಂದ ಬಳಲುತ್ತಿದ್ದು ಜ್ಞಾಪಕಶಕ್ತಿ ಹಾಗೂ ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications