ಮುಂಬೈನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾದ ಸಿಎಸ್‌ಕೆ ನಾಯಕ ಎಂಎಸ್ ಧೋನಿ
ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಾಯಕ ಎಂಎಸ್ ಧೋನಿ ಅವರು ಯಶಸ್ವಿಯಾಗಿ ತಮ್ಮ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಮೊಣಕಾಲು ಗಾಯ ಐಪಿಎಲ್‌ನ 2023ರ ಉದ್ದಕ್ಕೂ ಅವರಿಗೆ ತೊಂದರೆ ನೀಡಿತು. 41 ವರ್ಷದ ಎಂಎಸ್ ಧೋನಿ ಮೇ 31ರಂದು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ದಾಖಲಾದ ನಂತರ ಚಿಕಿತ್ಸೆ ಪಡೆದಿದ್ದಾರೆ.
ಎಂಎಸ್ ಧೋನಿ ಸಂಪೂರ್ಣ ಐಪಿಎಲ್ ಋತುವಿನಲ್ಲಿ ಎಡ ಮೊಣಕಾಲಿಗೆ ಪಟ್ಟಿ ಕಟ್ಟಿಕೊಂಡು ಆಡಿದರು. ಹೀಗಾಗಿ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಆಡಲು ಆದ್ಯತೆ ನೀಡಿದರು. ಇದೀಗ ಐಪಿಎಲ್ 2023ರ ಮುಕ್ತಾಯದ ನಂತರ, ಎಂಎಸ್ ಧೋನಿ ಮುಂಬೈನಲ್ಲಿ ಇದೇ ರೀತಿಯ ಸಮಸ್ಯೆಗೆ ರಿಷಭ್ ಪಂತ್‌ಗೆ ಶಸ್ತ್ರಚಿಕಿತ್ಸೆ ಮಾಡಿದ ಕ್ರೀಡಾ ವೈದ್ಯಕೀಯ ತಜ್ಞ ಡಾ. ದಿನ್ಶಾ ಪರ್ದಿವಾಲಾ ಅವರಿಂದ ಚಿಕಿತ್ಸೆ ಪಡೆಯಲು ನಿರ್ಧರಿಸಿದರು.

ಗುರುವಾರ, ಜೂನ್ 1ರಂದು ಸಿಎಸ್‌ಕೆ ಸಿಇಒ ಕಾಸಿ ವಿಶ್ವನಾಥನ್ ಅವರು ಶಸ್ತ್ರಚಿಕಿತ್ಸೆಯ ನಂತರ 41 ವರ್ಷದ ಎಂಎಸ್ ಧೊನಿಯೊಂದಿಗೆ ಮಾತುಕತೆ ನಡೆಸಿದ್ದಾರೆ ಮತ್ತು ಆರೋಗ್ಯವಾಗಿದ್ದಾರೆ ಎಂದು ದೃಢಪಡಿಸಿದರು.
ಆದರೆ, ಡಿಸ್ಚಾರ್ಜ್ ಆಗುವ ಮೊದಲು ಮುಂದಿನ ತಪಾಸಣೆಗೆ ಸಂಬಂಧಿಸಿದಂತೆ ಸಿಎಸ್‌ಕೆ ನಾಯಕ ಎಂಎಸ್ ಧೋನಿ ಇನ್ನೂ ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ವಿಶ್ರಾಂತಿ ಪಡೆಯಬೇಕಿದೆ.
"ಶಸ್ತ್ರಚಿಕಿತ್ಸೆಯ ನಂತರ ನಾನು ಅವರೊಂದಿಗೆ ಮಾತನಾಡಿದ್ದೇನೆ. ಶಸ್ತ್ರಚಿಕಿತ್ಸೆಯ ಬಗ್ಗೆ ನಾನು ವಿವರಿಸಲು ಸಾಧ್ಯವಿಲ್ಲ. ಆದರೆ ಇದು ಕೀ-ಹೋಲ್ ಶಸ್ತ್ರಚಿಕಿತ್ಸೆ ಎಂದು ನಮಗೆ ಹೇಳಲಾಗಿದೆ. ಅವರು ನಮ್ಮ ಮಾತುಕತೆಯಲ್ಲಿ ಚೆನ್ನಾಗಿ ಮಾತನಾಡಿದರು," ಎಂದು ಕಾಸಿ ವಿಶ್ವನಾಥನ್ ಹೇಳಿದ್ದಾರೆ.

ನನ್ನ ಕಣ್ಣುಗಳಲ್ಲಿ ನೀರು ತುಂಬಿತ್ತು, ನಾನು ಇದನ್ನು ಆನಂದಿಸಬೇಕು; ಎಂಎಸ್ ಧೋನಿ
ಮಂಗಳವಾರ, ಮೇ 30ರಂದು ಗುಜರಾತ್ ಟೈಟನ್ಸ್ ವಿರುದ್ಧ ಕೊನೆಯ ಎಸೆತದಲ್ಲಿ ರೋಚಕ ವಿಜಯದ ನಂತರ ಸಿಎಸ್‌ಕೆ ತಮ್ಮ ಐದನೇ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಗೆಲುವಿನ ನಂತರ, ಎಂಎಸ್ ಧೋನಿ ಮತ್ತೆ ಮೈದಾನಕ್ಕೆ ಬರುವ ಸುಳಿವು ನೀಡಿದರು.
ಮತ್ತೊಂದು ಐಪಿಎಲ್ ಋತು ಆಡುವುದು ಕಠಿಣ ಮಾರ್ಗವಾಗಿದೆ ಎಂದು ಒಪ್ಪಿಕೊಂಡ ಅವರು, ಮಾಂತ್ರಿಕ ಗೆಲುವಿನ ನಂತರ, ಅಭಿಮಾನಿಗಳ ಸಂತೋಷ ನೋಡಿ ಕಣ್ಣೀರು ಬಂತು ಮತ್ತು ನಾನು ಈ ಕ್ಷಣವನ್ನು ಆನಂದಿಸಬೇಕಾಗಿದೆ ಎಂದು ಎಂಎಸ್ ಧೋನಿ ಹೇಳಿದರು.
ಐಪಿಎಲ್ ಫೈನಲ್ ನಂತರ, "ನೀವು ಸಾಂದರ್ಭಿಕವಾಗಿ ನೋಡಿದರೆ, ನಿವೃತ್ತಿ ಘೋಷಿಸಲು ಇದು ಉತ್ತಮ ಸಮಯ. ನಾನು ಹೇಳಲು ಸುಲಭವಾದ ವಿಷಯವೆಂದರೆ ಧನ್ಯವಾದ ಮತ್ತು ನಿವೃತ್ತಿ. ಆದರೆ ಕಷ್ಟಕರವಾದ ಕೆಲಸವೆಂದರೆ ಒಂಬತ್ತು ತಿಂಗಳ ಕಾಲ ಕಠಿಣ ಪರಿಶ್ರಮ ಮತ್ತು ಇನ್ನೂ ಒಂದು ಐಪಿಎಲ್ ಸೀಸನ್ ಆಡಲು ಪ್ರಯತ್ನಿಸಿ ದೇಹವನ್ನು ಹಿಡಿದಿಟ್ಟುಕೊಳ್ಳಬೇಕು. ಆದರೆ ಸಿಎಸ್‌ಕೆ ಅಭಿಮಾನಿಗಳಿಂದ ನನಗೆ ಸಿಕ್ಕಿರುವ ಪ್ರೀತಿಗೆ ಇನ್ನೊಂದು ಸೀಸನ್ ಆಡಲು ಅವರಿಗೆ ಉಡುಗೊರೆಯಾಗಿ ನೀಡುತ್ತೇನೆ," ಎಂದು ಎಂಎಸ್ ಧೋನಿ ತಿಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications