Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

CWG 2022: ರೆಸ್ಲಿಂಗ್‌ನಲ್ಲಿ ಚಿನ್ನದ ಪದಕ ಗೆದ್ದ ಬಜರಂಗ್ ಪುನಿಯಾ: ಸತತ ಎರಡನೇ ಬಾರಿಗೆ ಅತ್ಯುನ್ನತ ಸಾಧನೆ

CWG 2022: Indian Wrestler Bajrang Punia win Gold in 65kg category

ಭಾರತದ ಸ್ಟಾರ್ ರೆಸ್ಲರ್ ಬಜರಂಗ್ ಪುನಿಯಾ ಕಾಮನ್‌ವೆಲ್ತ್ ಗೇಮ್ಸ್ 2022ರ 65 ಕೆಜಿ ವಿಭಾಗದ ರೆಸ್ಲಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ಸತತ ಎರಡನೇ ಬಾರಿಗೆ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದಾರೆ ಬಜರಂಗ್ ಪುನಿಯಾ. ಈ ಹಿಂದೆ 2018ರಲ್ಲಿ ನಡೆದ ಕಾಮನ್‌ವೆಲ್ತ್‌ನಲ್ಲಿಯೂ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರು.

ಈ ಪದಕದ ಮೂಲಕ ಬಜರಂಗ್ ಪುನಿಯಾ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಹ್ಯಾಟ್ರಿಕ್ ಪದಕ ಗೆದ್ದ ಸಾಧನೆ ಮಾಡಿದಂತಾಗಿದೆ. ಈ ಹಿಂದೆ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದ ಬಜರಂಗ್ ಪುನಿಯಾ ಅದಕ್ಕೂ ಹಿಂದಿನ ಗ್ಲಾಸ್ಕೋದಲ್ಲಿ ನಡೆದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.

ಫೈನಲ್ ಹಂತದ ಸ್ಪರ್ಧೆಯಲ್ಲಿ ಬಜರಂಗ್ ಪುನಿಯಾಗೆ ಎದುರಾಗಿದ್ದು ಕೆನಡಾದ 21ರ ಹರೆಯದ ಲಚ್‌ಲನ್ ಮೆಕ್‌ನೈಲ್. ಆದರೆ ಭಾರತದ ರೆಸ್ಲರ್‌ನ ಅನುಭವದ ಆಟದ ಮುಂದೆ ಕೆನಡಾದ ಆಟಗಾರ ಸಂಪೂರ್ಣ ಮಂಕಾದರು. 9-2 ಅಂತರದಿಂದ ಅಂತಿಮವಾಗಿ ಭಾರತದ ಆಟಗಾರ ಗೆದ್ದು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಗಮನಾರ್ಹ ಸಂಗತಿಯೆಂದರೆ ಫೈನಲ್‌ವರೆಗಿನ ಸ್ಪರ್ಧೆಯಲ್ಲಿ ಬಜರಂಗ್ ಪುನಿಯಾ ಒಂದೇ ಒಂದು ಅಂಕವನ್ನು ಎದುರಾಳಿಗಳಿಗೆ ನೀಡಿರಲಿಲ್ಲ. ಆದರೆ ಫೈನಲ್‌ನಲ್ಲಿ ಕೆನಡಾದ ಯುವ ಆಟಗಾರನ ವಿರುದ್ಧ ಎರಡು ಅಂಕಗಳನ್ನು ನೀಡಿದ್ದರು. ಸ್ಪರ್ಧೆಯ ಮಧ್ಯಂತರದ ಸಂದರ್ಭದಲ್ಲಿ 4-0 ಅಂತರದಿಂದ ಮುಂದಿದ್ದರು. ದ್ವಿತಿಯಾರ್ಧದಲ್ಲಿ ಟೇಕ್‌ಡೌನ್‌ನಲ್ಲಿ ಎದುರಾಳಿ ಎರಡು ಅಂಕಗಳನ್ನು ಪಡೆಯಲು ಯಶಸ್ವಿಯಾದರು. ಆದರೆ ಭಾರತದ ರೆಸ್ಲರ್‌ನ ಅನುಭವದ ಮುಂದೆ ಕೆನಡಾದ ಯುವ ಆಟಗಾರನ ಆಟ ನಡೆಯಲಿಲ್ಲ.

2022ರ ಕಾಮನ್‌ವೆಲ್ತ್‌ನಲ್ಲಿ ಭಾರತ ಪರ ಪದಕ ಗೆದ್ದವರು
1 ಸಂಕೇತ್ ಸರ್ಗರ್: ಬೆಳ್ಳಿ (ಪುರುಷರ 55 ಕೆಜಿ ವೇಟ್ ಲಿಫ್ಟಿಂಗ್)
2 ಗುರುರಾಜ ಪೂಜಾರಿ: ಕಂಚು (ಪುರುಷರ 61 ಕೆಜಿ ವೇಟ್ ಲಿಫ್ಟಿಂಗ್)
3 ಮೀರಾಬಾಯಿ : ಚಿನ್ನ (ಮಹಿಳೆಯರ 49 ಕೆಜಿ ವೇಟ್ ಲಿಫ್ಟಿಂಗ್ )
4 ಬಿಂದ್ಯಾರಾಣಿ ದೇವಿ: ಬೆಳ್ಳಿ (ಮಹಿಳೆಯರ 55 ಕೆಜಿ ವೇಟ್ ಲಿಫ್ಟಿಂಗ್ )
5 ಜೆರೆಮಿ ಲಾಲ್ರಿನ್ನುಂಗಾ: ಚಿನ್ನ (ಪುರುಷರ 67 ಕೆಜಿ ವೇಟ್‌ಲಿಫ್ಟಿಂಗ್ )
6 ಅಚಿಂತಾ ಶೆಯುಲಿ: ಚಿನ್ನ (ಪುರುಷರ 73 ಕೆಜಿ ವೇಟ್‌ಲಿಫ್ಟಿಂಗ್ )
7 ಸುಶೀಲಾ ದೇವಿ ಲಿಕ್ಮಾಬಮ್: ಬೆಳ್ಳಿ (ಮಹಿಳೆಯರ 48 ಕೆಜಿ ಜೂಡೋ)
8 ವಿಜಯ್ ಕುಮಾರ್ ಯಾದವ್ :ಕಂಚು (ಪುರುಷರ 60 ಕೆಜಿ ಜೂಡೋ)
9 ಹರ್ಜಿಂದರ್ ಕೌರ್ :ಕಂಚು (ಮಹಿಳೆಯರ 71 ಕೆಜಿ ವೇಟ್ ಲಿಫ್ಟಿಂಗ್)
10 ಭಾರತೀಯ ಮಹಿಳಾ ತಂಡ: ಚಿನ್ನ (ಮಹಿಳೆಯರ ನಾಲ್ಕು ಲಾನ್ ಬೌಲ್‌ಗಳು)
11 ವಿಕಾಸ್ ಠಾಕೂರ್ :ಬೆಳ್ಳಿ (ಪುರುಷರ 96 ಕೆಜಿ ವೇಟ್ ಲಿಫ್ಟಿಂಗ್)
12 ಭಾರತೀಯ ಪುರುಷರ ತಂಡ: ಚಿನ್ನ (ಪುರುಷರ ತಂಡ ಟೇಬಲ್ ಟೆನಿಸ್)
13 ಭಾರತೀಯ ಮಿಶ್ರ ತಂಡ: ಬೆಳ್ಳಿ (ಮಿಶ್ರ ತಂಡ ಬ್ಯಾಡ್ಮಿಂಟನ್)
14 ಲವ್‌ಪ್ರೀತ್ ಸಿಂಗ್: ಕಂಚು (ಪುರುಷರ 109 ಕೆಜಿ ವೇಟ್‌ಲಿಫ್ಟಿಂಗ್)
15 ಸೌರವ್ ಘೋಸಲ್ :ಕಂಚು (ಪುರುಷರ ಸಿಂಗಲ್ಸ್ ಸ್ಕ್ವಾಷ್)
16 ತುಲಿಕಾ ಮಾನ್ :ಬೆಳ್ಳಿ (ಮಹಿಳೆಯರ +78 ಕೆಜಿ ಜೂಡೋ)
17 ಗುರ್ದೀಪ್ ಸಿಂಗ್: ಕಂಚು (ಪುರುಷರ +109 ಕೆಜಿ ವೇಟ್ ಲಿಫ್ಟಿಂಗ್)
18 ತೇಜಸ್ವಿನ್ ಶಂಕರ್: ಕಂಚು (ಪುರುಷರ ಹೈಜಂಪ್ ಅಥ್ಲೆಟಿಕ್ಸ್)
19 ಮುರಳಿ ಶ್ರೀಶಂಕರ್: ಬೆಳ್ಳಿ (ಪುರುಷರ ಲಾಂಗ್ ಜಂಪ್ ಅಥ್ಲೆಟಿಕ್ಸ್)
20 ಸುಧೀರ್: ಚಿನ್ನ (ಪುರುಷರ ಹೆವಿವೇಯ್ಟ್ ಪ್ಯಾರಾ ಪವರ್‌ಲಿಫ್ಟಿಂಗ್)
21 ಅಂಶು ಮಲಿಕ್: ಬೆಳ್ಳಿ (ಮಹಿಳೆಯರ 57 ಕೆಜಿ ಕುಸ್ತಿ)
22 ಬಜರಂಗ್ ಪುನಿಯಾ: ಚಿನ್ನ (ಪುರುಷರ ರೆಸ್ಲಿಂಗ್)

Story first published: Friday, August 5, 2022, 23:18 [IST]
Other articles published on Aug 5, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+