ಕಾಮನ್‌ವೆಲ್ತ್‌ನಲ್ಲಿ ಮೊದಲ ಪದಕ ಗೆದ್ದ ಭಾರತೀಯ ಯಾರು? ಒಟ್ಟಾರೆ ಭಾರತ ಎಷ್ಟು ಪದಕ ಗೆದ್ದಿದೆ?

ಈ ವರ್ಷ ಇಂಗ್ಲೆಂಡ್‌ನ ಬರ್ಮಿಂಗ್‍ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ 22ನೇ ಆವೃತ್ತಿಯ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟವಾಗಿತ್ತು. 1930ರಲ್ಲಿ ಕೆನಡಾದ ಹ್ಯಾಮಿಲ್ಟನ್‌ನಲ್ಲಿ ಕಾಮನ್‌ವೆಲ್ತ್ ಚೊಚ್ಚಲ ಆವೃತ್ತಿ ನಡೆದಿತ್ತು. ಈ ಪ್ರಥಮ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಭಾಗವಹಿಸಿರಲಿಲ್ಲ. ನಂತರ 1934ರಲ್ಲಿ ಇಂಗ್ಲೆಂಡ್‌ನ ಲಂಡನ್‌ನಲ್ಲಿ ನಡೆದಿದ್ದ ಎರಡನೇ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಪ್ರಪ್ರಥಮ ಬಾರಿಗೆ ಭಾಗವಹಿಸಿತ್ತು ಹಾಗೂ ಈ ಆವೃತ್ತಿಯಲ್ಲಿ ಭಾರತ ಒಂದೇ ಒಂದು ಕಂಚಿನ ಪದಕವನ್ನು ಮಾತ್ರ ಗೆದ್ದಿತ್ತು.
1934ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ವ್ರೆಸ್ಟ್ಲಿಂಗ್‌ನಲ್ಲಿ ಭಾರತದ ರಶೀದ್ ಅನ್ವರ್ ಕಂಚಿನ ಪದಕವನ್ನು ಗೆಲ್ಲುವ ಮೂಲಕ ಕಾಮನ್‌ವೆಲ್ತ್‌ನಲ್ಲಿ ಭಾರತದ ಪರ ಪದಕ ಗೆದ್ದ ಮೊದಲ ಕ್ರೀಡಾಪಟು ಎಂಬ ದಾಖಲೆಯನ್ನು ನಿರ್ಮಿಸಿದ್ದರು. ಇನ್ನು ಇದು ಸ್ವತಂತ್ರಪೂರ್ವದಲ್ಲಿ ಬಂದ ಪದಕವಾಗಿರುವುದು ಮತ್ತೊಂದು ವಿಶೇಷವಾಗಿದೆ ಹಾಗೂ ಇದು ಸ್ವತಂತ್ರಪೂರ್ವದಲ್ಲಿ ಭಾರತ ಗೆದ್ದಿರುವ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದ ಏಕೈಕ ಪದಕವಾಗಿದೆ.
ಹೀಗೆ ಸ್ವತಂತ್ರ ಹೊಂದುವುದಕ್ಕೂ ಮುನ್ನ ಕೇವಲ ಒಂದೇ ಒಂದು ಪದಕವನ್ನು ಗೆದ್ದಿದ್ದ ಭಾರತ ಸದ್ಯ ಇತ್ತೀಚೆಗಷ್ಟೆ ಮುಕ್ತಾಯವಾದ 2022ರ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದ ಅಂತ್ಯಕ್ಕೆ ಒಟ್ಟು 564 ಪದಕಗಳನ್ನು ಗೆದ್ದಿದೆ. ಹೀಗೆ 564 ಪದಕಗಳನ್ನು ಗೆದ್ದಿರುವ ಭಾರತ ಇಲ್ಲಿಯವರೆಗೂ ಒಟ್ಟಾರೆ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದ ಪದಕಪಟ್ಟಿಯಲ್ಲಿ ಎಷ್ಟನೇ ಸ್ಥಾನದಲ್ಲಿದೆ ಹಾಗೂ ಪ್ರತೀ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಎಷ್ಟು ಪದಕಗಳನ್ನು ಗೆದ್ದಿದೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ಪ್ರತೀ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಗೆದ್ದ ಪದಕ ಪಟ್ಟಿ
1930 - ಭಾಗವಹಿಸಿಲ್ಲ
1934 ಒಂದು ಕಂಚಿನ ಪದಕ
1938 - ಯಾವುದೇ ಪದಕವಿಲ್ಲ
1950 - ಭಾಗವಹಿಸಿಲ್ಲ
1954 - ಯಾವುದೇ ಪದಕವಿಲ್ಲ
1958 - 2 ಚಿನ್ನ, 1 ಬೆಳ್ಳಿ ಸೇರಿ ಒಟ್ಟು 3 ಪದಕಗಳು
1962 - ಭಾಗವಹಿಸಿಲ್ಲ
1966 - 3 ಚಿನ್ನ, 4 ಬೆಳ್ಳಿ, 3 ಕಂಚಿನ ಪದಕಗಳು ಸೇರಿದಂತೆ ಒಟ್ಟು 10 ಪದಕಗಳು
1970 - 5 ಚಿನ್ನ, 3 ಬೆಳ್ಳಿ, 4 ಕಂಚಿನ ಪದಕಗಳು ಸೇರಿದಂತೆ ಒಟ್ಟು 12 ಪದಕಗಳು
1974 - 4 ಚಿನ್ನ, 8 ಬೆಳ್ಳಿ, 3 ಕಂಚಿನ ಪದಕಗಳು ಸೇರಿದಂತೆ ಒಟ್ಟು 15 ಪದಕಗಳು
1978- 5 ಚಿನ್ನ, 5 ಬೆಳ್ಳಿ, 5 ಕಂಚಿನ ಪದಕಗಳು ಸೇರಿದಂತೆ ಒಟ್ಟು 15 ಪದಕಗಳು
1982 - 5 ಚಿನ್ನ, 8 ಬೆಳ್ಳಿ, 3 ಕಂಚಿನ ಪದಕಗಳು ಸೇರಿ ಒಟ್ಟು 16 ಪದಕಗಳು
1986 - ಭಾಗವಹಿಸಿಲ್ಲ
1990 - 13 ಚಿನ್ನ, 8 ಬೆಳ್ಳಿ ಮತ್ತು 11 ಕಂಚಿನ ಪದಕಗಳು ಸೇರಿ ಒಟ್ಟು 32 ಪದಕಗಳು
1994 - 6 ಚಿನ್ನ, 11 ಬೆಳ್ಳಿ, 7 ಕಂಚಿನ ಪದಕಗಳು ಸೇರಿ ಒಟ್ಟು 24 ಪದಕಗಳು
1998 - 7 ಚಿನ್ನ, 10 ಬೆಳ್ಳಿ, 8 ಕಂಚಿನ ಪದಕಗಳು ಸೇರಿದಂತೆ ಒಟ್ಟು 25 ಪದಕಗಳು
2002 - 30 ಚಿನ್ನ, 22 ಬೆಳ್ಳಿ. 17 ಕಂಚಿನ ಪದಕಗಳು ಸೇರಿದಂತೆ ಒಟ್ಟು 69 ಪದಕಗಳು
2006 - 22 ಚಿನ್ನ, 17 ಬೆಳ್ಳಿ, 11 ಕಂಚಿನ ಪದಕಗಳು ಸೇರಿದಂತೆ ಒಟ್ಟು 50 ಪದಕಗಳು
2010- 38 ಚಿನ್ನ, 27 ಬೆಳ್ಳಿ, 36 ಕಂಚಿನ ಪದಕಗಳು ಸೇರಿದಂತೆ ಒಟ್ಟು 101 ಪದಕಗಳು
2014 - 15 ಚಿನ್ನ, 30 ಬೆಳ್ಳಿ ಮತ್ತು 19 ಕಂಚಿನ ಪದಕಗಳು ಸೇರಿದಂತೆ ಒಟ್ಟು 64 ಪದಕಗಳು
2018 - 26 ಚಿನ್ನ, 20 ಬೆಳ್ಳಿ, 20 ಕಂಚಿನ ಪದಕಗಳು ಸೇರಿದಂತೆ ಒಟ್ಟು 66 ಪದಕಗಳು
2022 - 22 ಚಿನ್ನ, 16 ಬೆಳ್ಳಿ, 23 ಕಂಚಿನ ಪದಕಗಳು ಸೇರಿದಂತೆ ಒಟ್ಟು 61 ಪದಕಗಳು

2010ರ ಕಾಮನ್‌ವೆಲ್ತ್‌ನಲ್ಲಿ ಅತ್ಯುತ್ತಮ ಸಾಧನೆ
2010ರಲ್ಲಿ ದೆಹಲಿಯಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ 38 ಚಿನ್ನ, 27 ಬೆಳ್ಳಿ, 36 ಕಂಚಿನ ಪದಕಗಳು ಸೇರಿದಂತೆ ಒಟ್ಟು 101 ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಳ್ಳುವುದರ ಮೂಲಕ ಕಾಮನ್‌ವೆಲ್ತ್ ಇತಿಹಾಸದಲ್ಲೇ ಅತ್ಯುತ್ತಮ ಸಾಧನೆಯನ್ನು ಮಾಡಿತ್ತು.

ಒಟ್ಟಾರೆ ಕಾಮನ್‌ವೆಲ್ತ್‌ನಲ್ಲಿ ಭಾರತ ಗೆದ್ದ ಪದಕಗಳು
ಇನ್ನು ಇಲ್ಲಿಯವರೆಗೂ ನಡೆದಿರುವ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟಗಳ ಪೈಕಿ ಭಾರತ 203 ಚಿನ್ನ, 190 ಬೆಳ್ಳಿ ಮತ್ತು 171 ಕಂಚಿನ ಪದಕಗಳು ಸೇರಿದಂತೆ ಒಟ್ಟು 564 ಪದಕಗಳನ್ನು ಗೆದ್ದು ಒಟ್ಟಾರೆ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications