ಆಗಸ್ಟ್ 3 ಶನಿವಾರ, ಪ್ಯಾರಿಸ್ ಒಲಿಂಪಿಕ್ಸ್‌ನ ಆರ್ಚರಿ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ದೀಪಿಕಾ ಕುಮಾರಿ ಸೋಲು ಕಂಡಿದ್ದಾರೆ. ಹೀಗಾಗಿ ಸೆಮಿಸ್‌ಫೈನಲ್ ಟಿಕೆಟ್ ದೀಪಿಕಾ ಅವರಿಗೆ ಜಸ್ಟ್ ಮಿಸ್ ಆಗಿದೆ.
ದೀಪಿಕಾ ಅವರು ಕೊರಿಯಾದ ನಾಮ್ ಸುಹ್ಯೆನ್ ವಿರುದ್ಧ 4-6 ಅಂತರದಲ್ಲಿ ಸೋಲನುಭವಿಸಿದರು. ಇದರೊಂದಿಗೆ ದೀಪಿಕಾ ಒಲಿಂಪಿಕ್ ಅಭಿಯಾನ ಅಂತ್ಯಗೊಂಡಿದೆ.

ಮೊದಲ ಗೇಮ್‌ನಲ್ಲಿ ದೀಪಿಕಾ ಮೊದಲ ಶಾಟ್ 9, ಎರಡನೇ ಶಾಟ್ 10 ಮತ್ತು ಮೂರನೇ ಶಾಟ್‌ನಲ್ಲಿ 9 ಅಂಕಗಳನ್ನು ಹೊಡೆದರೆ, ಎದುರಾಳಿ ಮೊದಲ ಶಾಟ್ 10, ಎರಡನೇ ಶಾಟ್ 8 ಹಾಗು ಮೂರನೇ ಶಾಟ್‌ನಲ್ಲಿ 8 ಅಂಕಗಳನ್ನು ಪಡೆದುಕೊಂಡರು. ಈ ಗೇಮ್ ಅನ್ನು ದೀಪಿಕಾ 28-26 ರಿಂದ ಗೆದ್ದರು.
ಎರಡನೇ ಗೇಮ್ ನಲ್ಲಿ ಕೊರಿಯಾದ ನಾಮ್ ಸುಹ್ಯೆನ್ ಮೊದಲ ಶಾಟ್ 9, ಎರಡನೇ ಶಾಟ್ 9 ಮತ್ತು ಮೂರನೇ ಶಾಟ್ 8 ಅಂಕಗಳನ್ನು ಗಳಿಸಿದರು . ದೀಪಿಕಾ ಮೊದಲ ಶಾಟ್ 10, ಎರಡನೇ ಶಾಟ್ 6 ಮತ್ತು ಮೂರನೇ ಶಾಟ್ 8 ಅಂಕಗಳನ್ನು ಪಡೆದು 28-25 ರಿಂದ ಸೋತರು.
ಮೂರನೇ ಗೇಮ್‌ನಲ್ಲಿ ದೀಪಿಕಾ ಮೊದಲ ಶಾಟ್ 10, ಎರಡನೇ ಶಾಟ್ 9 ಮತ್ತು ಮೂರನೇ ಶಾಟ್ 10 ಅಂಕಗಳನ್ನು ಗಳಿಸಿದರು. ಆದರೆ ನಾಮ್ ಸುಹ್ಯೆನ್ ಮೊದಲ ಶಾಟ್ 10, ಎರಡನೇ ಶಾಟ್ 10 ಮತ್ತು ಮೂರನೇ ಶಾಟ್ 9 ಹೊಡೆದರು. ಹೀಗಾಗಿ ದೀಪಿಕಾ 29-28 ರಿಂದ ಗೇಮ್ ಗೆದ್ದರು.
ನಾಲ್ಕನೇ ಗೇಮ್‌ನಲ್ಲಿ ನಾಮ್ ಸುಹ್ಯೆನ್ ಮೊದಲ ಶಾಟ್ 10, ಎರಡನೇ ಶಾಟ್ 9 ಮತ್ತು ಮೂರನೇ ಶಾಟ್ 10 ಅಂಕಗಳನ್ನು ಕಲೆ ಹಾಕಿದರು. ಇತ್ತ ದೀಪಿಕಾ ಕುಮಾರ್ ಮೊದಲ ಶಾಟ್ 10, ಎರಡನೇ ಶಾಟ್ 7 ಮತ್ತು ಮೂರನೇ ಶಾಟ್ 10 ಅಂಕಗಳನ್ನು ಗಳಿಸುವ ಮೂಲಕ ಈ ಸೆಟ್ ಅನ್ನು 27-29ರಿಂದ ಕಳೆದುಕೊಂಡರು.
ಐದನೇ ಗೇಮ್‌ನಲ್ಲಿ ದೀಪಿಕಾ ಮೊದಲ ಶಾಟ್ 9, ಎರಡನೇ ಶಾಟ್ 9 ಮತ್ತು ಮೂರನೇ ಶಾಟ್ ನಲ್ಲಿ 9 ಅಂಕಗಳನ್ನು ಗಳಿಸಿದರು. ನಾಮ್ ಸುಹ್ಯೆನ್ ಮೊದಲ ಶಾಟ್ 10, ಎರಡನೇ ಶಾಟ್ 9 ಮತ್ತು ಮೂರನೇ ಶಾಟ್ 10 ಅಂಕಗಳನ್ನು ಪಡೆದರು. ಈ ಸೆಟ್‌ನಲ್ಲಿಯೂ ದೀಪಿಕಾ 28-29ರಿಂದ ಸೋಲನುಭವಿಸಿದರು.
ಇದಕ್ಕೂ ಮುನ್ನ ದೀಪಿಕಾ ಕುಮಾರಿ 1/8 ಎಲಿಮಿನೇಷನ್ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಮಿಚೆಲ್ ಕ್ರೊಪ್ಪೆನ್ ಅವರನ್ನು ಎದುರಿಸಿದ್ದರು. ಅಲ್ಲಿ ದೀಪಿಕಾ 6-4 ರಿಂದ ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಆದರೆ ದೀಪಿಕಾ ಕ್ವಾರ್ಟರ್ ಫೈನಲ್‌ನಲ್ಲಿ ನಾಮ್ ಸುಹ್ಯೆನ್ ಅವರನ್ನು ಸೋಲಿಸಲು ಸಾಧ್ಯವಾಗಲಿಲ್ಲ.