For Quick Alerts
ALLOW NOTIFICATIONS  
For Daily Alerts

Dinesh Karthik; ವೈಯಕ್ತಿಕ, ವೃತ್ತಿಜೀವನದಲ್ಲಿ ಸೋತು ಕುಗ್ಗಿದ್ದ ಡಿಕೆ ಸಾಹೇಬ ಗೆದ್ದು ಬಂದ ರೋಚಕ ಜರ್ನಿ

ಬುಧವಾರ, ಮೇ 22ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2024ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋತ ಬಳಿಕ, ಅನುಭವಿ ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ಐಪಿಎಲ್‌ಗೆ ನಿವೃತ್ತಿ ಘೋಷಿಸುವ ಮುನ್ಸೂಚನೆ ನೀಡಿದರು.

ರಾಜಸ್ಥಾನ್ ರಾಯಲ್ಸ್ ವಿರುದ್ಧ ತಮ್ಮ ಕೊನೆಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯವನ್ನು ಆಡಿರಬಹುದು ಎಂದು ಅನುಭವಿ ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ಸೂಚನೆ ನೀಡಿದರು. ಪ್ಲೇಆಫ್ ಪಂದ್ಯದಲ್ಲಿ ಹೃದಯವಿದ್ರಾವಕ ಸೋಲಿನ ನಂತರ, ಸ್ಟಾರ್ ಫಿನಿಶರ್ ದಿನೇಶ್ ಕಾರ್ತಿಕ್ ತಮ್ಮ ವಿಕೆಟ್-ಕೀಪಿಂಗ್ ಗ್ಲೌಸ್ ಕಳಚಿ ಪ್ರೇಕ್ಷಕರಿಗೆ ತೋರಿಸಿ ಬೀಳ್ಕೊಡುಗೆ ಸ್ವೀಕರಿಸಿದರು.

Dinesh Karthik s Cricket Career journey After Cheated by his Ex-Wife And Friend Muruli Vijay

ದಿನೇಶ್ ಕಾರ್ತಿಕ್ ಏಳು-ಬೀಳಿನ ಹೋರಾಟ

2004ರಲ್ಲಿ ದಿನೇಶ್ ಕಾರ್ತಿಕ್ ಎಂಬ ಯುವ ವಿಕೆಟ್ ಕೀಪರ್ ಭಾರತೀಯ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದರು. ಆಗ ತಾನೇ ಕ್ರಿಕೆಟ್ ವೃತ್ತಿಜೀವನ ಪ್ರಾರಂಭವಾಗುತ್ತಿತ್ತು, 2007ರಲ್ಲಿ ತಮ್ಮ ಬಾಲ್ಯದ ಗೆಳತಿ ನಿಕಿತಾ ವಂಜಾರಾ ಅವರನ್ನು ವಿವಾಹವಾದರು.

ದಿನೇಶ್ ಕಾರ್ತಿಕ್ ಮತ್ತು ನಿಕಿತಾ ತಮ್ಮ ವೈವಾಹಿಕ ಜೀವನದಲ್ಲಿ ತುಂಬಾ ಸಂತೋಷವಾಗಿದ್ದರು. ದಿನೇಶ್ ರಣಜಿ ಟ್ರೋಫಿಯಲ್ಲಿ ತಮಿಳುನಾಡು ತಂಡದ ನಾಯಕರಾಗಿದ್ದರು. ತಮಿಳುನಾಡು ತಂಡದಿಂದ ಅವರ ಆಪ್ತ ಸ್ನೇಹಿತ ಮುರಳಿ ವಿಜಯ್, ನಂತರ ಭಾರತ ತಂಡದ ಭಾಗವಾದರು.

ಒಂದು ದಿನ ನಿಕಿತಾ ವಂಜಾರಾ ಅವರು ದಿನೇಶ್ ಕಾರ್ತಿಕ್ ಸಹ ಆಟಗಾರ ಮುರಳಿ ವಿಜಯ್ ಭೇಟಿಯಾದಳು ಮತ್ತು ನಿಕಿತಾ ಅವನಿಗೆ ಆಕರ್ಷಿತಳಾಗಿ ಪ್ರೀತಿಯ ಬಲೆಗೆ ಬಿದ್ದಳು. ಅಮಾಯಕ ದಿನೇಶ್ ಕಾರ್ತಿಕ್‌ಗೆ ಇದು ತಿಳಿದೇ ಇರಲಿಲ್ಲ. ನಿಕಿತಾ ಮತ್ತು ಮುರಳಿ ವಿಜಯ್ ಆತ್ಮೀಯತೆ ಹೆಚ್ಚಾದಂತೆ, ಶೀಘ್ರದಲ್ಲೇ ಅವರು ಸಂಬಂಧವನ್ನು ಆರಂಭಿಸಿದರು.

Dinesh Karthik s Cricket Career journey After Cheated by his Ex-Wife And Friend Muruli Vijay

ಇಬ್ಬರೂ ಬಹಿರಂಗವಾಗಿ ಭೇಟಿಯಾಗಲು ಪ್ರಾರಂಭಿಸಿದರು. ಮುರಳಿ ವಿಜಯ್ ಅವರು ದಿನೇಶ್ ಕಾರ್ತಿಕ್ ಪತ್ನಿ ನಿಕಿತಾ ಜೊತೆ ಸಂಬಂಧ ಹೊಂದಿದ್ದರು ಎಂಬುದು ಇಡೀ ತಮಿಳುನಾಡು ಕ್ರಿಕೆಟ್ ತಂಡಕ್ಕೆ ತಿಳಿದಿತ್ತು.

ನಂತರ 2012ರಲ್ಲಿ ನಿಕಿತಾ ವಂಜಾರಾ ಗರ್ಭಿಣಿಯಾದಳು. ಆದರೆ ಈ ಮಗು ಮುರಳಿ ವಿಜಯ್‌ ಅವರದ್ದು ಎಂದು ಘೋಷಿಸಿ ಎಲ್ಲರಿಗೂ ಶಾಕ್ ನೀಡಿದಳು. ಆಗ ಅಮಾಯಕ ದಿನೇಶ್ ಕಾರ್ತಿಕ್ ಆಘಾತಕ್ಕೊಳಗಾದರು.

ಇದೇ ನೋವು ಮತ್ತು ಸಿಟ್ಟಿನಲ್ಲಿ ನಿಕಿತಾಗೆ ದಿನೇಶ್ ಕಾರ್ತಿಕ್ ವಿಚ್ಛೇದನ ನೀಡಿದರು. ವಿಚ್ಛೇದನದ ಮರುದಿನವೇ ನಿಕಿತಾ ಮುರಳಿ ವಿಜಯ್ ವಿವಾಹವಾಗ್ತಾಳೆ ಮತ್ತು ಕೇವಲ 3 ತಿಂಗಳ ನಂತರ ತಮ್ಮ ಮಗುವಿಗೆ ಜನ್ಮ ನೀಡಿದಳು.

Dinesh Karthik s Cricket Career journey After Cheated by his Ex-Wife And Friend Muruli Vijay

ಇತ್ತ ದಿನೇಶ್ ಕಾರ್ತಿಕ್ ಖಿನ್ನತೆಗೆ ಒಳಗಾಗಿದ್ದರು ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಹೊಂದಲು ಪ್ರಾರಂಭಿಸಿದರು. ತನ್ನ ಹೆಂಡತಿ ಮತ್ತು ಸ್ನೇಹಿತನ ನಂಬಿಕ ದ್ರೋಹವನ್ನು ಸುಲಭವಾಗಿ ಮರೆಯಲು ಸಾಧ್ಯವಾಗುತ್ತಿರಲಿಲ್ಲ. ಮದ್ಯಪಾನದತ್ತ ಮುಖ ಮಾಡಿದ ದಿನೇಶ್ ಕಾರ್ತಿಕ್ ಬೆಳಗ್ಗೆಯಿಂದ ರಾತ್ರಿಯವರೆಗೂ ಕುಡಿತದ ಚಟಕ್ಕೆ ಬಿದ್ದನು.

ದಿನೇಶ್ ಕಾರ್ತಿಕ್ ಏಕಾಂಗಿಯಾದನು. ಇದೇ ವೇಳೆ ಭಾರತ ತಂಡದಿಂದ ಹೊರಬೀಳಬೇಕಾಯಿತು ಮತ್ತು ರಣಜಿ ಟ್ರೋಫಿಯಲ್ಲೂ ವಿಫಲವಾಗಿದ್ದರು. ಬಳಿಕ ತಮಿಳುನಾಡು ತಂಡದ ನಾಯಕತ್ವದಿಂದ ಕೆಳಗಿಳಿಸಲಾಯಿತು. ಮತ್ತೊಂದೆಡೆ, ಮುರಳಿ ವಿಜಯ್ ಅವರನ್ನು ಹೊಸ ನಾಯಕನನ್ನಾಗಿ ನೇಮಿಸಲಾಯಿತು. ವೈಫಲ್ಯದ ಹಂತವು ಅಲ್ಲಿಗೆ ನಿಲ್ಲಲಿಲ್ಲ, ಕಾರ್ತಿಕ್ ಐಪಿಎಲ್‌ನಲ್ಲೂ ಉತ್ತಮ ಪ್ರದರ್ಶನ ನೀಡಲಿಲ್ಲ.

ನಂತರ, ದಿನೇಶ್ ಕಾರ್ತಿಕ್ ಜಿಮ್‌ಗೆ ಹೋಗುವುದನ್ನು ನಿಲ್ಲಿಸಿದ, ಕೊನೆಗೆ ವೈಯಕ್ತಿಕ ಮತ್ತು ವೃತ್ತಿ ಜೀವನ ಕುಸಿತವನ್ನು ಕಂಡು ಹತಾಶನಾಗಿ ಆತ್ಮಹತ್ಯೆಯಂತಹ ಯೋಚನೆಗಳನ್ನೆಲ್ಲ ಮಾಡತೊಡಗಿದ್ದ.

ನಂತರ ಒಂದು ದಿನ, ಜಿಮ್‌ನಿಂದ ಕೋಚ್ ಅವರ ಮನೆಗೆ ಬಂದರು. ದಿನೇಶ್ ಕಾರ್ತಿಕ್‌ರನ್ನು ಕೆಟ್ಟ ಸ್ಥಿತಿಯಲ್ಲಿ ನೋಡಿ ಮರುಗಿದರು. ದಿನೇಶ್‌ ಕಾರ್ತಿಕ್‌ ನಿರಾಕರಿಸಿದರೂ, ತರಬೇತುದಾರ ಅವರ ಮಾತನ್ನು ಕೇಳದೆ, ನೇರವಾಗಿ ಜಿಮ್‌ಗೆ ಕರೆದುಕೊಂಡು ಹೋದರು.

ಅದೇ ಜಿಮ್‌ಗೆ ಭಾರತದ ಸ್ಕ್ವಾಷ್ ಚಾಂಪಿಯನ್ ದೀಪಿಕಾ ಪಳ್ಳಿಕಲ್ ಬರುತ್ತಿದ್ದರು. ದಿನೇಶ್ ಕಾರ್ತಿಕ್‌ನ ಸ್ಥಿತಿ ನೋಡಿದ ಆಕೆ ಟ್ರೇನರ್ ಜೊತೆಗೆ ಕೌನ್ಸೆಲಿಂಗ್ ಮಾಡತೊಡಗಿದಳು. ತರಬೇತುದಾರ ಮತ್ತು ದೀಪಿಕಾ ಪಳ್ಳಿಕಲ್ ಅವರ ಕಠಿಣ ಪರಿಶ್ರಮ ಫಲಿತಾಂಶವನ್ನು ತೋರಿಸಲು ಆರಂಭಿಸಿತು. ದಿನೇಶ್ ಕಾರ್ತಿಕ್ ಸುಧಾರಣೆಯ ಹಾದಿಗೆ ಬಂದರು.

ಇದೇ ವೇಳೆ ಮುರಳಿ ವಿಜಯ್ ಪ್ರದರ್ಶನ ನಿರಂತರವಾಗಿ ಕುಸಿತ ಕಾಣತೊಡಗಿತು. ಅವರನ್ನು ಭಾರತ ತಂಡದಿಂದ ಕೈಬಿಡಲಾಯಿತು. ಬಳಿಕ ಅವರ ಕಳಪೆ ಫಾರ್ಮ್ ನೋಡಿ, ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ಅವರಿಗೆ ಗೇಟ್‌ಪಾಸ್ ನೀಡಿತು.

ಇತ್ತ ಅನಿರೀಕ್ಷಿತ ಗೆಳತಿ ದೀಪಿಕಾ ಪಳ್ಳಿಕಲ್ ಬೆಂಬಲದೊಂದಿಗೆ, ದಿನೇಶ್ ಕಾರ್ತಿಕ್ ನೆಟ್‌ನಲ್ಲಿ ತೀವ್ರವಾಗಿ ಅಭ್ಯಾಸ ಮಾಡಲು ಪ್ರಾರಂಭಿಸಿದರು. ಇದು ಪರಿಣಾಮ ಬೀರಲು ಪ್ರಾರಂಭಿಸಿತು ಮತ್ತು ದಿನೇಶ್ ಕಾರ್ತಿಕ್ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಪ್ರಾರಂಭಿಸಿದರು.

ಶೀಘ್ರದಲ್ಲೇ, ಮತ್ತೆ ಐಪಿಎಲ್‌ಗೆ ಆಯ್ಕೆಯಾದರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾದರು. ದೀಪಿಕಾ ಪಳ್ಳಿಕಲ್ ಜೊತೆಗಿನ ಸ್ನೇಹ ಪ್ರೀತಿಗೆ ತಿರುಗಿತು, ನಂತರ ವಿವಾಹವಾದರು.

ವಯಸ್ಸಿಗೆ ತಕ್ಕಂತೆ ದಿನೇಶ್ ಕಾರ್ತಿಕ್ ಕ್ರಿಕೆಟ್‌ನಲ್ಲಿ ಅನುಭವಿಯಾಗಿದ್ದ. ರಿಷಭ್ ಪಂತ್ ಅದಾಗಲೇ ಭಾರತ ಕ್ರಿಕೆಟ್ ತಂಡಕ್ಕೆ ಆಗಮಿಸಿದ್ದರು. ದಿನೇಶ್ ಕಾರ್ತಿಕ್ ತನ್ನ ವೃತ್ತಿಜೀವನ ಬಹುತೇಕ ಮುಗಿಯಿತು ಎಂದುಕೊಂಡಿದ್ದ. ಈ ವೇಳೆ ಕ್ರಿಕೆಟ್‌ನಿಂದ ನಿವೃತ್ತರಾಗಲು ನಿರ್ಧರಿಸಿದ್ದರು.

ಮತ್ತೊಂದೆಡೆ, ದಿನೇಶ್ ಕಾರ್ತಿಕ್ ಪತ್ನಿ ದೀಪಿಕಾ ಪಳ್ಳಿಕಲ್ ಗರ್ಭಿಣಿಯಾಗಿ ಅವಳಿ ಮಕ್ಕಳಿಗೆ ಜನ್ಮ ನೀಡಿದರು ಮತ್ತು ಅವರ ಸ್ಕ್ವಾಷ್ ಆಟದ ವೃತ್ತಿಜೀವನವೂ ನಿಂತಿತು.

ದೀಪಿಕಾ ಪಳ್ಳಿಕಲ್ ಮತ್ತು ದಿನೇಶ್ ಕಾರ್ತಿಕ್ ಚೆನ್ನೈನ ಪೊಯಸ್ ಗಾರ್ಡನ್‌ನ ಐಷಾರಾಮಿ ಪ್ರದೇಶದಲ್ಲಿ ಮನೆಯನ್ನು ಬಯಸಿದ್ದರು. 2021ರಲ್ಲಿ ಚೆನ್ನೈನ ಅದೇ ಪ್ರದೇಶದಲ್ಲಿ ಫ್ಲಾಟ್ ಮಾರಾಟದ ಪ್ರಸ್ತಾಪ ಬಂದಿತು. ಅದನ್ನು ದಿನೇಶ್ ಕಾರ್ತಿಕ್ ಖರೀದಿಸಲು ನಿರ್ಧರಿಸಿದರು.

ದೀಪಿಕಾ ಮತ್ತು ದಿನೇಶ್ ಇಬ್ಬರೂ ಸ್ಪರ್ಧಾತ್ಮಕ ಕ್ರೀಡೆಯಿಂದ ಬಹುತೇಕ ನಿವೃತ್ತಿ ಹಂತಕ್ಕೆ ಬಂದಾಗ, ಅಂತಹ ದುಬಾರಿ ಒಪ್ಪಂದವನ್ನು ಹೇಗೆ ಪೂರೈಸುತ್ತಾರೆ ಎಂಬುದು ಎಲ್ಲರಿಗೂ ಆಶ್ಚರ್ಯವಾಗಿತ್ತು?.

ದಿನೇಶ್ ಕಾರ್ತಿಕ್ ಅವರನ್ನು ವಿಕೆಟ್‌ಕೀಪರ್ ಆಗಿ ತಂಡಕ್ಕೆ ತರಲು ಚೆನ್ನೈ ಸೂಪರ್ ಕಿಂಗ್ಸ್‌ನ ಎಂಎಸ್ ಧೋನಿ ಬಯಸಿದ್ದರು ಎಂಬ ಮಾಹಿತಿ ದಿನೇಶ್‌ಗೆ ಸಿಕ್ಕಿತು. ಅದೇ ವೇಳೆ 2022ರ ಐಪಿಎಲ್‌ಗಾಗಿ ಹರಾಜು ಆರಂಭವಾಗಿತ್ತು.

ಆದರೆ ಸಿಎಸ್‌ಕೆ ಬದಲಿಗೆ ಆರ್‌ಸಿಬಿ ದಿನೇಶ್ ಕಾರ್ತಿಕ್‌ರನ್ನು ಖರೀದಿಸಿತು. ದಿನೇಶ ಪತ್ನಿ ದೀಪಿಕಾ ಪಳ್ಳಿಕಲ್ ಕೂಡ ಸ್ಕ್ವಾಷ್ ಆಡಲು ಪ್ರಾರಂಭಿಸಿದರು. ಅವಳಿ ಮಕ್ಕಳು ಜನಿಸಿದ ಕೇವಲ 6 ತಿಂಗಳ ನಂತರ, ದೀಪಿಕಾ ಗ್ಲಾಸ್ಗೋದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಜೋಶ್ನಾ ಚಿನಪ್ಪ ಅವರೊಂದಿಗೆ ಮಹಿಳಾ ಡಬಲ್ಸ್ ಪ್ರಶಸ್ತಿ ಗೆದ್ದರು.

ಇದು ಅನುಭವಿ ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ಅವರ ಯಶೋಗಾಥೆ. ಜೀವನ ಮತ್ತು ವೃತ್ತಿಜೀವನದಲ್ಲಿ ಬೀಳುವುದು ಮತ್ತು ಏಳುವುದು ದಿನೇಶ್ ಕಾರ್ತಿಕ್‌ ಕಥೆ ಹೇಳುತ್ತದೆ. ಯಾವಾಗಲೂ ಸವಾಲುಗಳ ವಿರುದ್ಧ ಹೋರಾಡುವ ಜೀವನೋತ್ಸಹ ನೀಡುತ್ತದೆ.

Story first published: Friday, May 24, 2024, 17:56 [IST]
Other articles published on May 24, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+