For Quick Alerts
ALLOW NOTIFICATIONS  
For Daily Alerts

Dipa Karmakar: ಜಿಮ್ನಾಸ್ಟ್ ದೀಪಾ ಕರ್ಮಾಕರ್ ನಿವೃತ್ತಿ: ಸಾಮಾಜಿಕ ತಾಣದಲ್ಲಿ ಪತ್ರ

ಒಲಿಂಪಿಯನ್‌ ದೀಪಾ ಕರ್ಮಾಕರ್‌ ಅವರು ನಿವೃತ್ತಿ ಘೋಷಿಸಿದ್ದರೆ. ಜಿಮ್ನಾಸ್ಟಿಕ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ದೇಶಕ್ಕೆ ಕೀರ್ತಿ ತಂದಿದ್ದ ದೀಪಾ, ಸಾಮಾಜಿಕ ತಾಣದಲ್ಲಿ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಪತ್ರದಲ್ಲಿ ದೀಪಾ ನಿವೃತ್ತಿಗೆ ಕಾರಣ ಏನು ಎಂಬುದನ್ನು ತಿಳಿಸಿದ್ದಾರೆ.

ಸಾಮಾಜಿಕ ತಾಣದಲ್ಲಿ ಸುಧೀರ್ಘ ಪತ್ರವನ್ನು ಬರೆದಿರುವ ದೀಪಾ, ಇದು ತುಂಬಾ ಕಷ್ಟಕರವಾಗಿದ್ದು, ಹೆಚ್ಚು ಯೋಚಿಸಿದ ನಂತರವೇ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬರೆದುಕೊಂಡಿದ್ದಾರೆ. ಈ ಪತ್ರದಲ್ಲಿ ದೀಪಾ ನಿವೃತ್ತಿಗೆ ಕಾರಣವನ್ನು ಸಹ ತಿಳಿಸಿದ್ದಾರೆ. ಈಗ ದೀಪಾ ದೈಹಿಕ ಸ್ಥಿತಿ ಮೊದಲಿನಂತೆ ಇಲ್ಲ ಎಂದು ಹೇಳಿದ್ದಾರೆ. ಇನ್ನು ಈ ಪತ್ರದಲ್ಲಿ ತಮ್ಮ ಬೆಳವಣಿಗೆಗೆ ಪೂರಕವಾದ ಅಂಶಗಳನ್ನು ಹಂಚಿಕೊಂಡಿದ್ದಾರೆ.

Dipa Karmakar Announces Retirement from Gymnastics After Illustrious Career

ದೀಪಾ ನಿವೃತ್ತಿ

ದೀಪಾ ಭಾರತಕ್ಕೆ ಹಲವು ಪದಕಗಳನ್ನು ಗೆದ್ದುಕೊಟ್ಟ ಜಿರ್ಮಾಸ್ಟಿಕ್‌ ಅಥ್ಲೀಟ್‌. ಈ ಪತ್ರದಲ್ಲಿ ದೀಪಾ ಅವರ ನೋವು ಕೂಡ ಕಂಡು ಬರುತ್ತದೆ. ತುಂಬ ದಿನಗಳಿಂದ ಯೋಚಿಸಿದ ನಂತರ, ನಾನು ಜಿಮ್ನಾಸ್ಟಿಕ್ಸ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದೆ. ಈ ನಿರ್ಧಾರ ಸುಲಭವಾಗಿರಲಿಲ್ಲ. ಆದರೆ ಈಗ ಸರಿಯಾದ ಸಮಯ ಬಂದಿದೆ. ಈ ಕ್ರೀಡೆ ನನ್ನ ಜೀವನದ ದೊಡ್ಡ ಭಾಗವಾಗಿದೆ. ನಾನು ಐದು ವರ್ಷವಳಾಗಿದ್ದಾಗ ಚಪ್ಪಟೆ ಪಾದಗಳಿಂದಾಗಿ ಜಿಮ್ನಾಸ್ಟಿಕ್‌ ಅಥ್ಲೀಟ್ ಆಗಲು ಸಾಧ್ಯವೆ ಇಲ್ಲ ಎಂದು ತಿಳಿಸಿದ್ದರು. ಆದರೆ ಇಂದು ನಾನು ಮಾಡಿದ ಸಾಧನೆ ಕಂಡು ನನಗೆ ನಿಜಕ್ಕೂ ಹೆಮ್ಮೆ ಅನಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

ತಾಷ್ಕೆಂಟ್‌ನಲ್ಲಿ ನಡೆದ ಏಷ್ಯನ್‌ ಜಿಮ್ನಾಸ್ಟಿಕ್‌ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದು, ನನ್ನ ಜೀವನಕ್ಕೆ ತಿರುವು ನೀಡಿತು. ನಾನು ಇನ್ನು ಕೆಲ ಕಾಲ ಜಿಮ್ನಾಸ್ಟಿಕ್ ಮಾಡಬಹುದು ಎಂದು ಭಾವಿಸಿದ್ದೆ. ಆದರೆ ಕೆಲವೊಮ್ಮೆ ನನ್ನ ದೇಹ ವಿಶ್ರಾಂತಿಯನ್ನು ಬಯಸುತ್ತಿತ್ತು ಎಂದು ತಿಳಿಸಿದ್ದಾರೆ.

ದೀಪಾ ಸಾಧನೆ

ತ್ರಿಪುರಾದ ಸ್ಟಾರ್ ಜಿಮ್ನಾಸ್ಟಿಕ್‌ ದೀಪಾ ಭಾರತಕ್ಕೆ ಹಲವು ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಪದಕ ಗೆದ್ದಿದ್ದಾರೆ. ಇವರು ಏಷ್ಯನ್ ಚಾಂಪಿಯನ್‌ಶಿಪ್ 2024 ರಲ್ಲಿ ಚಿನ್ನದ ಪದಕ, ಇದಕ್ಕೂ ಮೊದಲು 2015ರಲ್ಲಿ ಕಂಚಿನ ಪದಕ ಗೆದ್ದಿದ್ದರು. 2014ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ದೀಪಾ ಕಂಚಿನ ಪದಕ ಗೆದ್ದಿದ್ದರು. 2018ರ ವಿಶ್ವಕಪ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದರು. ಅಲ್ಲದೆ 2016ರಲ್ಲಿ ರಿಯೋದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಅಮೋಘ ಸಾಧನೆ ಮಾಡಿದ್ದರು.

Story first published: Monday, October 7, 2024, 18:28 [IST]
Other articles published on Oct 7, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+