2021-22ರ ಆರ್ಥಿಕ ವರ್ಷದಲ್ಲಿ ಸರ್ಕಾರಕ್ಕೆ ಬಿಸಿಸಿಐ ಪಾವತಿಸಿದ ಆದಾಯ ತೆರಿಗೆ ಎಷ್ಟು ಗೊತ್ತಾ?
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 2021-22ರ ಹಣಕಾಸು ವರ್ಷದಲ್ಲಿ ಬರೋಬ್ಬರಿ 1,159 ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿಸಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ತಿಳಿಸಿದರು.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರಿಸಿದ ಕೇಂದ್ರ ಸಚಿವರು, ಬಿಸಿಸಿಐ ಪಾವತಿಸಿದ ಆದಾಯ ತೆರಿಗೆ ಮತ್ತು ಕಳೆದ ಐದು ವರ್ಷಗಳಲ್ಲಿ ಅದರ ಆದಾಯ ಮತ್ತು ವೆಚ್ಚಗಳ ವಿವರಗಳನ್ನು ಸಲ್ಲಿಸಿದ ರಿಟರ್ನ್‌ಗಳ ಆಧಾರದ ಮೇಲೆ ಮಾಹಿತಿ ನೀಡಿದರು.

2020-21ರ ಹಣಕಾಸು ವರ್ಷದಲ್ಲಿ ಬಿಸಿಸಿಐ ಆದಾಯ ತೆರಿಗೆಯಲ್ಲಿ 844.92 ಕೋಟಿ ರೂಪಾಯಿ ಪಾವತಿಸಿದ್ದರೆ, 2019-20ರಲ್ಲಿ 882.29 ಕೋಟಿ ರೂಪಾಯಿ ಪಾವತಿಸಿತ್ತು.
ಹಣಕಾಸು ವರ್ಷ 2019ರಲ್ಲಿ ಬಿಸಿಸಿಐ 815.08 ಕೋಟಿ ರೂಪಾಯಿಗಳನ್ನು ಆದಾಯ ತೆರಿಗೆಯಾಗಿ ಪಾವತಿಸಿದ್ದರೆ, 2017-18ರಲ್ಲಿ ಪಾವತಿಸಿದ ಮೊತ್ತ 596.63 ಕೋಟಿ ರೂಪಾಯಿಯಾಗಿದೆ.
2021-22ರ ಹಣಕಾಸು ವರ್ಷದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 7,606 ಕೋಟಿ ರೂಪಾಯಿ ಆದಾಯ ಗಳಿಸಿದ್ದರೆ, ಅದರ ವೆಚ್ಚ 3,064 ಕೋಟಿ ರೂಪಾಯಿಗಳಷ್ಟಿದೆ. 2020-21ರಲ್ಲಿ ಬಿಸಿಸಿಐ ಆದಾಯವು 4,735 ಕೋಟಿ ರೂಪಾಯಿಗಳಿದ್ದರೆ, ಅದರ ವೆಚ್ಚವು 3,080 ಕೋಟಿ ರೂಪಾಯಿಗಳಷ್ಟಿದೆ ಎಂದು ಎಎನ್ಐ ವರದಿ ಮಾಡಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ವಾರ್ಷಿಕ ಆದಾಯ ಹಂಚಿಕೆಯಿಂದ ಭಾರತೀಯ ಕ್ರಿಕೆಟ್ ಮಂಡಳಿಯು ಅತಿ ಹೆಚ್ಚು ಮೊತ್ತವನ್ನು ಪಡೆಯುತ್ತಿದೆ. ಈ ವರ್ಷ 2024-27ರ ಚಕ್ರದಲ್ಲಿ ಬಿಸಿಸಿಐ ವಾರ್ಷಿಕವಾಗಿ 230 ಮಿಲಿಯನ್ ಯುಎಸ್ ಡಾಲರ್ ಹಣ ಗಳಿಸಲಿದೆ ಎಂದು ತಿಳಿಸಲಾಗಿದೆ.
ಐಸಿಸಿ ಆದಾಯ ಪೂಲ್‌ನಿಂದ ಗಳಿಕೆಯು ಬಿಸಿಸಿಐನ ಆದಾಯ ಮೂಲಗಳಲ್ಲಿ ಒಂದಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕೂಡ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಮತ್ತೊಂದು ದೊಡ್ಡ ಹಣದ ಪಂದ್ಯಾವಳಿಯಾಗಿ ಉಳಿದಿದೆ. ಐಪಿಎಲ್ ಬಿಸಿಸಿಐಗೆ ದೊಡ್ಡ ಹಣವನ್ನು ತಂದುಕೊಡುತ್ತದೆ.
ಆಟಗಾರರ ಭಾಗವಹಿಸುವಿಕೆ, ಮಾಧ್ಯಮ ಹಕ್ಕು ಮತ್ತು ಪ್ರಾಯೋಜಕತ್ವಗಳೆರಡರಲ್ಲೂ ಐಪಿಎಲ್ ವಿಶ್ವದ ಅತ್ಯಂತ ಲಾಭದಾಯಕ ಲೀಗ್ ಆಗಿ ಉಳಿದಿದೆ. ಇದು ಮುಂಬರುವ ವರ್ಷಗಳಲ್ಲಿ ಇನ್ನಷ್ಟು ಬಲಗೊಳ್ಳುವ ನಿರೀಕ್ಷೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications