ವಿಶ್ವ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರು ಮೈದಾನದಲ್ಲಿ ಎಷ್ಟು ಸದ್ದು ಮಾಡಬಲ್ಲರೋ, ಅಷ್ಟೇ ಮೈದಾನದ ಆಚೆಗೂ ಸುದ್ದಿಯಲ್ಲಿರುವ ವ್ಯಕ್ತಿ ಮತ್ತು ಸೆಲೆಬ್ರಿಟಿ ಆಗಿದ್ದಾರೆ.
ಭಾರತದ ಅಗ್ರಮಾನ್ಯ ಆಟಗಾರ ವಿರಾಟ್ ಕೊಹ್ಲಿ ಅವರು 2023ರಲ್ಲಿ ಸಾಮಾನ್ಯವಾಗಿ ಆಡುವಷ್ಟು ಕ್ರಿಕೆಟ್ ಆಡಿಲ್ಲ ಎನ್ನಬಹುದು. ಕೇವಲ ಏಕದಿನ ಮತ್ತು ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ.

ಭಾರತೀಯ ತಂಡದಲ್ಲಿನ ಬದಲಾವಣೆಯಿಂದಾಗಿ, ಟಿ20 ಪಂದ್ಯಗಳಿಂದ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಆದರೂ ಅವರ ವರ್ಚಸ್ಸು ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಆದರೆ, ಫೋಟೋ ಮತ್ತು ವಿಡಿಯೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ವಿರಾಟ್ ಕೊಹ್ಲಿ ಅತ್ಯಧಿಕ ಮೊತ್ತ ಗಳಿಸುವ ಭಾರತೀಯರಾಗಿ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ.
ವರದಿಯೊಂದರ ಪ್ರಕಾರ, 2023ರಲ್ಲಿ ಬಿಡುಗಡೆ ಮಾಡಲಾದ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ ಪ್ರತಿಯೊಂದು ಪ್ರಾಯೋಜಿತ ಪೋಸ್ಟ್‌ಗೆ ವಿರಾಟ್ ಕೊಹ್ಲಿ 11 ಕೋಟಿ ರೂಪಾಯಿಗೂ ಹೆಚ್ಚು ಮೊತ್ತ ವಿಧಿಸುತ್ತಾರೆ.
ಇನ್‌ಸ್ಟಾಗ್ರಾಮ್ ಪೋಸ್ಟ್‌ನಿಂದ ಅಧಿಕ ಮೊತ್ತ ಗಳಿಸುವ ಪಟ್ಟಿಯಲ್ಲಿ ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ ಅಗ್ರಸ್ಥಾನದಲ್ಲಿದ್ದರೆ, ಅವರ ಸಾಂಪ್ರದಾಯಿಕ ಪ್ರತಿಸ್ಪರ್ಧಿ ಲಿಯೋನೆಲ್ ಮೆಸ್ಸಿ ನಂತರದ ಸ್ಥಾನದಲ್ಲಿದ್ದಾರೆ.
ಕ್ರಿಸ್ಟಿಯಾನೊ ರೊನಾಲ್ಡೊಗೆ ಸಂಬಂಧಿಸಿದಂತೆ, ಅವರು ಪ್ರತಿ ಪೋಸ್ಟ್‌ಗೆ 3.23 ಮಿಲಿಯನ್ ಯುಎಸ್ ಡಾಲರ್ ಮೊತ್ತವನ್ನು ವಿಧಿಸಿದ್ದಾರೆ. ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಸುಮಾರು 26.75 ಕೋಟಿ ರೂ.ಗೆ ಸಮಾನವಾಗಿದೆ.
ಮತ್ತೊಂದೆಡೆ, ಮತ್ತೊಬ್ಬ ಫುಟ್ಬಾಲ್ ಸ್ಟಾರ್ ಲಿಯೋನೆಲ್ ಮೆಸ್ಸಿ ಪ್ರತಿ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ 2.56 ಮಿಲಿಯನ್ ಯುಎಸ್ ಡಾಲರ್ ಶುಲ್ಕವನ್ನು ವಿಧಿಸುತ್ತಾರೆ. ಭಾರತೀಯ ರೂಪಾಯಿ ಲೆಕ್ಕದಲ್ಲಿ ಸುಮಾರು 21.49 ಕೋಟಿ ರೂ. ಆಗಿದೆ.
ಜಾಗತಿಕವಾಗಿ ಟಾಪ್ 20 ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ವಿರಾಟ್ ಕೊಹ್ಲಿ ಏಕೈಕ ಭಾರತೀಯ ಆಗಿದ್ದಾರೆ. ವರದಿಯ ಪ್ರಕಾರ, ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿ ಪೋಸ್ಟ್‌ಗೆ 1.38 ಮಿಲಿಯನ್ ಮಿಲಿಯನ್ ಯುಎಸ್ ಡಾಲರ್ ಶುಲ್ಕ ವಿಧಿಸಿದ್ದಾರೆ. ವಿರಾಟ್ ಕೊಹ್ಲಿ ಗಳಿಕೆಯು ಒಂದೇ ಪೋಸ್ಟ್‌ಗೆ 11.45 ಕೋಟಿ ರೂಪಾಯಿ ಆಗಿದೆ. ಬಲಗೈ ಸ್ಟಾರ್ ಬ್ಯಾಟರ್ ಪ್ರಸ್ತುತ ತಮ್ಮ ಖಾತೆಯಲ್ಲಿ 256 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.
ಹಾಪರ್ ಹೆಚ್‌ಕ್ಯುನ ಸಹ-ಸಂಸ್ಥಾಪಕ ಮೈಕ್ ಬಂದರ್, ಇನ್‌ಸ್ಟಾಗ್ರಾಮ್‌ನಲ್ಲಿ ಜಾಗತಿಕ ಸೂಪರ್‌ಸ್ಟಾರ್‌ಗಳ ಗಳಿಕೆಯು ಕಳೆದ ಕೆಲವು ವರ್ಷಗಳಲ್ಲಿ ಹೇಗೆ ಗಗನಕ್ಕೇರಿದೆ ಎಂಬುದನ್ನು ನೋಡಿ ಆಶ್ಚರ್ಯವಾಗಿದೆ. ಕ್ರೀಡಾ ಸೂಪರ್‌ಸ್ಟಾರ್‌ಗಳ ಪ್ರಭಾವವು ತಮ್ಮ ಕ್ಷೇತ್ರವನ್ನು ಮೀರಿ ಹೇಗೆ ವಿಸ್ತರಿಸುತ್ತದೆ ಎಂಬುದನ್ನು ತಿಳಿಸಿದ್ದಾರೆ.
"ಸಾಮಾಜಿಕ ಜಾಲತಾಣದಲ್ಲಿ ಗಳಿಸಿದ ವಾರ್ಷಿಕ ಹಣವು ಪ್ರತಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತದೆ ಎಂಬುದು ನನಗೆ ಇನ್ನೂ ಆಘಾತಕಾರಿಯಾಗಿದೆ. ಆದರೂ, ನನ್ನನ್ನು ಹೆಚ್ಚು ಆಕರ್ಷಿಸುವುದು ಅಗ್ರಸ್ಥಾನದಲ್ಲಿರುವ ಸ್ಥಿರ ಆಟಗಾರರು," ಎಂದು ಮೈಕ್ ಬಂದರ್ ಹೇಳಿದರು.
"ಸಾಂಪ್ರದಾಯಿಕ ಸೆಲೆಬ್ರಿಟಿಗಳ ಹೊಳಪು ಮತ್ತು ಗ್ಲಾಮರ್ ಇನ್ನೂ ಹೊಸ ಪ್ರಭಾವಶಾಲಿ ಸ್ಥಾನಮಾನದ ಮೇಲೆ ಅಧಿಕಾರವನ್ನು ಸ್ಥಾಪಿಸುತ್ತದೆ ಎಂಬುದು ಸ್ಪಷ್ಟವಾಗಿದೆ".
"ಕರಿಸ್ಟಿಯಾನೊ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿ ಮೈದಾನದಲ್ಲಿ ಪ್ರಾಬಲ್ಯ ಸಾಧಿಸುವುದು ಮಾತ್ರವಲ್ಲದೆ, ಡಿಜಿಟಲ್ ಕ್ಷೇತ್ರದಲ್ಲೂ ಸಹ ವೈಯಕ್ತಿಕ ಬ್ರ್ಯಾಂಡಿಂಗ್‌ನ ಶಕ್ತಿ ಮತ್ತು ಅದರ ಪ್ರಭಾವವನ್ನು ನಿರೂಪಿಸುತ್ತಾರೆ ಎಂಬುದು ಸ್ಪಷ್ಟವಾಗಿದೆ. ತಮ್ಮ ಮೇಲೆ ಸಾಮಾನ್ಯ ಜನರನ್ನು ಹಿಡಿದಿಟ್ಟುಕೊಳ್ಳುತ್ತಾರೆ," ಎಂದು ಮೈಕ್ ಬಂದರ್ ಅಭಿಪ್ರಾಯಪಟ್ಟರು.
ಈ ಪಟ್ಟಿಯಲ್ಲಿರುವ ಭಾರತೀಯರ ಪೈಕಿ ಬಾಲಿವುಡ್ ಮತ್ತು ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ವಿರಾಟ್ ಕೊಹ್ಲಿ ನಂತರದ ಸ್ಥಾನದಲ್ಲಿದ್ದು, ಜಾಗತಿಕವಾಗಿ 29ನೇ ಸ್ಥಾನ ಪಡೆದಿದ್ದಾರೆ. ವರದಿಯ ಪ್ರಕಾರ ಪ್ರಿಯಾಂಕಾ ಪ್ರತಿ ಪೋಸ್ಟ್‌ಗೆ 532,000 ಮಿಲಿಯನ್ ಯುಎಸ್ ಡಾಲರ್ (4.40 ಕೋಟಿ ರೂಪಾಯಿ) ಶುಲ್ಕ ವಿಧಿಸುತ್ತಾರೆ.