Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಡಿಡಿಯಲ್ಲಿ ಭಾರತದ ಪಂದ್ಯ ನೋಡಲು ಸುಪ್ರೀಂ ಒಪ್ಪಿಗೆ

ನವದೆಹಲಿ, ಫೆ. 20 : ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ. ದೂರದರ್ಶನದಲ್ಲಿ ಭಾರತದ ವಿಶ್ವಕಪ್ ಪಂದ್ಯಗಳನ್ನು ನೋಡಲು ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ. ಸ್ಟಾರ್ ಸ್ಪೋರ್ಟ್ಸ್‌ ಸಲ್ಲಿಸಿದ್ದ ಮನವಿಯನ್ನು ಕೋರ್ಟ್ ತಳ್ಳಿಹಾಕಿದೆ.

ದೂರದರ್ಶನಲ್ಲಿ ವಿಶ್ವಕಪ್ ಪಂದ್ಯಗಳನ್ನು ಪ್ರಸಾರ ಮಾಡಬಾರದು ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಪ್ರಸಾರ ಭಾರತಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಶುಕ್ರವಾರ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಭಾರತದ ಪಂದ್ಯಗಳನ್ನು ಪ್ರಸಾರ ಮಾಡಲು ಒಪ್ಪಿಗೆ ನೀಡಿದೆ.

doordarshan

ಸ್ಟಾರ್‌ ಸ್ಪೋರ್ಟ್ಸ್‌ 2015ರ ವಿಶ್ವಕಪ್ ಪಂದ್ಯಗಳನ್ನು ಪ್ರಸಾರ ಮಾಡುವ ಹಕ್ಕನ್ನು ಪಡೆದಿದೆ. ಆದರೆ, ದೂರದರ್ಶನ ಭಾರತದ ಪಂದ್ಯಗಳನ್ನು ಪ್ರಸಾರ ಮಾಡುತ್ತಿತ್ತು. ಇದನ್ನು ಪ್ರಶ್ನಿಸಿ ಸ್ಟಾರ್ ಸ್ಪೋರ್ಟ್ಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ದೆಹಲಿ ಹೈಕೋರ್ಟ್ ಪಂದ್ಯಗಳನ್ನು ಪ್ರಸಾರ ಮಾಡದಂತೆ ದೂರದರ್ಶನಕ್ಕೆ ಆದೇಶಿಸಿತ್ತು. [ವಿಶ್ವಕಪ್ : ಟೀಂ ಇಂಡಿಯಾ ಪಂದ್ಯಗಳ ವೇಳಾಪಟ್ಟಿ]

ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಸಾರ ಭಾರತಿ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಇಂದು ಅರ್ಜಯ ವಿಚಾರಣೆ ನಡೆಸಿ ಭಾರತದ ಪಂದ್ಯಗಳನ್ನು ಪ್ರಸಾರ ಮಾಡಲು ಕೋರ್ಟ್ ಒಪ್ಪಿಗೆ ನೀಡಿದ್ದು, ಸ್ಟಾರ್ ಸಲ್ಲಿಸಿದ್ದ ಮನವಿಯನ್ನು ತಳ್ಳಿ ಹಾಕಿದೆ. [ವಿಶ್ವಕಪ್ : ಇಂಗ್ಲೆಂಡ್ ಹೊಸಕಿ ಹಾಕಿ ಕಿವೀಸ್ ವಿಜಯೋತ್ಸವ]

ಕೋರ್ಟ್ ತೀರ್ಪಿನಿಂದ ವಿಶ್ವಕಪ್ ಪ್ರಸಾರದ ಹಕ್ಕು ಪಡೆದಿರುವ ಸ್ಟಾರ್‌ಗೆ ಹಿನ್ನಡೆಯಾಗಿದೆ. ಕೋರ್ಟ್ ಆದೇಶದಿಂದಾಗಿ ಕ್ರಿಕೆಟ್ ಅಭಿಮಾನಿಗಳು ಯಾವುದೇ ಹಣ ನೀಡದೆ ಪಾವತಿ ಮಾಡದೆ ಭಾರತದ ಪಂದ್ಯಗಳನ್ನು ಹಿಂದಿ ವೀಕ್ಷಕ ವಿವರಣೆ ಮೂಲಕ ದೂರದರ್ಶನದಲ್ಲಿ ನೋಡಬಹುದಾಗಿದೆ.

ಅಂದಹಾಗೆ ಫೆ.22ರ ಭಾನುವಾರ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ಮೆಲ್ಬೋರ್ನ್‌ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದಂತೆ ಬೆಳಗ್ಗೆ 9 ಗಂಟೆಯಿಂದ ಪಂದ್ಯವನ್ನು ವೀಕ್ಷಿಸಬಹುದಾಗಿದೆ.

Story first published: Wednesday, January 3, 2018, 10:16 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+