Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಡಿಆರ್ ಎಸ್ ವಿವಾದಕ್ಕೆ ಸಾಕ್ಷಿಯಾದ ಇಂಡೋ-ಪಾಕ್ ಕದನ

ಡಿಲೇಡ್, ಫೆ. 15: ಭಾರತ ಪಾಕಿಸ್ತಾನ ಪಂದ್ಯ ವಿವಾದವೊಂದಕ್ಕೆ ಸಾಕ್ಷಿಯಾಗಿದೆ. ಆದರೆ ಈ ಬಾರಿ ಆಟಗಾರರಿಂದ ಯಾವುದೇ ತಪ್ಪಾಗಿಲ್ಲ. ಅಂಪೈರ್ ಗಳು ಮತ್ತು ಡಿಆರ್ ಎಸ್ ಸಿಸ್ಟಮ್ ವಿವಾದದ ಕೇಂದ್ರ ಬಿಂದು. ವಿಶ್ವಕಪ್ ಆರಂಭದ ಎರಡು ದಿನದಲ್ಲೂ ಇಂಥ ಒಂದೊಂದು ತೀರ್ಮಾನ ಗಳು ಹೊರಬಿದ್ದಿವೆ.

ಶನಿವಾರದ ಪಂದ್ಯದಲ್ಲಿ ಶತಕ ಸಮೀಪದಲ್ಲಿದ್ದ ಇಂಗ್ಲೆಂಡ್ ನ ಜೇಮ್ಸ್ ಟೇಲರ್ ಆಸ್ಟ್ರೇಲಿಯಾ ವಿರುದ್ಧ ಇಂಥ ತೀರ್ಮಾನಕ್ಕೆ ಬಲಿಯಾಗಿದ್ದರು. ಅಲೀಮ್ ದಾರ್, ಕುಮಾರ ಧರ್ಮಸೇನ ಮತ್ತು ಬಿಲ್ಲಿ ಬೌಡನ್(3 ನೇ ಅಂಪೈರ್) ಅಂಪೈರ್ ಗಳಾಗಿ ಕಾರ್ಯನಿರ್ವಹಿಸುತ್ತಿದ್ದರು.

cricket

ಭಾರತ ಪಾಕಿಸ್ತಾನ ಪಂದ್ಯದಲ್ಲೂ ಅಂಥದ್ದೇ ಒಂದು ತೀರ್ಮಾನ ಬಂದಿದೆ. ಡಿಆರ್ ಎಸ್ ಬಳಕೆಯ ಮೂಲಕ ಫೀಲ್ಡ್ ಅಂಪೈರ್ ಗಳು ನೀಡಿದ್ದ ತೀರ್ಮಾನಕ್ಕೆ ವಿರುದ್ಧವಾಗಿ ಮೂರನೇ ಅಂಪೈರ್ ಇಂಗ್ಲೆಂಡ್ ನ ಸ್ಟೀವ್ ಡೆವೀಸ್ ತೀರ್ಪು ನೀಡಿದ್ದಾರೆ. ಪಾಕಿಸ್ತಾನದ ಉಮರ್ ಅಕ್ಮಲ್ ಔಟಾದ ರೀತಿ ಗೊಂದಲಕ್ಕೆ ಏಡೆಮಾಡಿಕೊಟ್ಟಿದೆ.

ಭಾರತದ ರನ್ ಗುರಿ ಬೆನ್ನು ಹತ್ತಿದ ಪಾಕಿಸ್ತಾನ ದ ಇನಿಂಗ್ಸ್ ನ 25 ಓವರ್ ಚಾಲ್ತಿಯಲ್ಲಿತ್ತು. ಭಾರತದ ನಾಯಕ ವಿಕೆಟ್ ಕೀಪರ್ ಮತ್ತು ನಾಯಕ ಎಂಎಸ್ ಧೋನಿ ಕ್ಯಾಚ್ ಗೆ ಮನವಿ ಸಲ್ಲಿಸಿದ್ದರು. ಆದರೆ ಫೀಲ್ಡ್ ಅಂಪೈರ್ ರಿಚರ್ಡ್ ಕೆಟಲ್ ಬರ್ಗ್ ನಾಟ್ ಔಟ್ ಎಂದು ಘೋಷಣೆ ಮಾಡಿದರು.

ಆದರೆ ಎಂಸ್ ಧೋನಿ ಡಿಆರ್ ಎಸ್ ಮೊರೆ ಹೋದರು. ರಿಪ್ಲೇ ವೀಕ್ಷಿಸಿದ ಡೇವಿಸ್ ಕೊನೆಯಲ್ಲಿ ಔಟ್ ಎಂದು ತೀರ್ಮಾನ ನೀಡುವಂತೆ ಫೀಲ್ಡ್ ಅಂಪೈರ್ ಗೆ ಸೂಚಿಸಿದರು. ಅದರಂತೆ ಅಕ್ಮಲ್ ಫೆವಿಲಿಯನ್ ಹಾದಿ ಹಿಡಿಯಬೇಕಾಯಿತು. ರಿಪ್ಲೇ ಯಲ್ಲಿಚೆಂಡು ಬ್ಯಾಟಿಗೆ ಬಡಿದ ಯಾವುದೇ ಲಕ್ಷಣಗಳು ಮೇಲ್ನೋಟಕ್ಕೆ ಕಂಡುಬರದಿದ್ದರೂ ಡೇವಿಸ್ ಔಟ್ ಎಂದು ತೀರ್ಮಾನ ನೀಡಿದ್ದಾರುವುದು ವಿವಾದಕ್ಕೆ ಕಾರಣವಾಗಿದೆ.

Story first published: Wednesday, January 3, 2018, 10:16 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+