Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ದ್ಯುತೀ ಚಾಂದ್‌ಗೆ ಐತಿಹಾಸಿಕ ಬಂಗಾರ

Dutee Chand wins historic 100m gold in World University Games

ನೇಪಲ್ಸ್, ಜುಲೈ 10: ಇಟಲಿಯ ನೇಪಲ್ಸ್‌ನಲ್ಲಿ ನಡೆಯುತ್ತಿರುವ ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಭಾರತದ ಸ್ಟ್ರಿಂಟರ್ ದ್ಯುತೀ ಚಾಂದ್ ಐತಿಹಾಸಿಕ ಬಂಗಾರ ಗೆದ್ದಿದ್ದಾರೆ. ಮಹಿಳಾ ವಿಭಾಗದ 100 ಮೀ. ಓಟದಲ್ಲಿ ದ್ಯುತೀಗೆ ಚಿನ್ನದ ಪದಕ ಲಭಿಸಿದೆ. ಈ ಕ್ರೀಡಾಕೂಟದಲ್ಲಿ ಭಾರತಕ್ಕೆ ಪದಕ ಲಭಿಸಿದ್ದು ಇದೇ ಮೊದಲು.

100 ಮೀ. ಓಟವನ್ನು 11.32 ಸೆಕೆಂಡ್‌ಗಳಲ್ಲಿ ಮುಗಿಸಿದ ದ್ಯುತೀ ಚಾಂದ್ ಬಂಗಾರಕ್ಕೆ ಕೊರಳೊಡ್ಡಿದರು. ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್ ಇತಿಹಾಸದಲ್ಲೇ ಈ ಹಿಂದೆ ಭಾರತೀಯ ಯಾವ ಕ್ರೀಡಾಪಟುವೂ 100 ಮೀ. ಫೈನಲ್‌ಗಾಗಿ ಅರ್ಹತೆ ಗಿಟ್ಟಿಸಿಕೊಂಡಿದ್ದಿಲ್ಲ. ಈ ಕ್ರೀಡಾಕೂಟದಲ್ಲೇ ಮೊದಲ ಪದಕ ಗೆದ್ದ ಹೆಗ್ಗಳಿಕೆ ದ್ಯುತೀಯದ್ದು.

ಚಾಂದ್ ಕೇವಲ 0.1 ಸೆಕೆಂಡ್ ಅಂತರದಲ್ಲಿ ಸ್ವಿಟ್ಜರ್ಲೆಂಡ್‌ನ ಪ್ರತಿಸ್ಪರ್ಧಿ ಅಜ್ಲಾ ಡೆಲ್ ಪೊಂಟೆ ಅವರನ್ನು ಹಿಂದಿಕ್ಕಿ ಚಿನ್ನ ಬಾಚಿಕೊಂಡರು. ಪೊಂಟೆ, 11.33 ಸೆಕೆಂಡ್ ಕಾಲಾವಧಿಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡರು. ಐತಿಹಾಸಿಕ ಸಾಧನೆ ಮೆರೆದ ದ್ಯುತೀಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಭಿನಂದಿಸಿದ್ದಾರೆ.

ಮಂಗಳವಾರ (ಜುಲೈ 9) ಸೆಮಿಫೈನಲ್‌ನಲ್ಲಿ 11.41 ಸೆಕೆಂಡ್ ಕಾಲಾವಧಿಯೊಂದಿಗೆ ದ್ಯುತೀ 100 ಮೀ. ಅಂತಿಮ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು. ಬಂಗಾರ ಗೆದ್ದ ಬಳಿಕ ಟ್ವೀಟ್ ಮಾಡಿರುವ ಚಾಂದ್, 'ನನ್ನನ್ನು ಕೆಳ ಜಗ್ಗಿದಷ್ಟೂ ನಾನು ಬಲಶಾಲಿಯಾಗಿ ಎದ್ದು ನಿಲ್ಲುತ್ತೇನೆ' ಎಂದು ಬರೆದುಕೊಂಡಿದ್ದಾರೆ. ಕಳೆದ ಮೇ ತಿಂಗಳಲ್ಲಿ ದ್ಯುತೀ ಸಹೋದರಿ ಸರಸ್ವತಿ ಚಾಂದ್, ದ್ಯುತೀಯನ್ನು ಸಲಿಗಿಯೆಂದು ಬಿಂಬಿಸಲು ಯತ್ನಿಸಿದ್ದರು. ಇದಕ್ಕೆ ತಿರುಗೇಟು ಎಂಬಂತೆ ಚಾಂದ್ ಹೀಗೆ ಟ್ವೀಟ್ ಮಾಡಿದ್ದಾರೆ.

Story first published: Wednesday, July 10, 2019, 18:29 [IST]
Other articles published on Jul 10, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+