ಈಜಿಪ್ಶಿಯನ್ ಓಪನ್ ಕ್ವಾರ್ಟರ್ ಫೈನಲ್‌ಗೆ ಜೋಶ್ನಾ ಚಿನ್ನಪ್ಪ

ನವದೆಹಲಿ: ಕೊರೊನಾವೈರಸ್‌ನಿಂದಾಗಿ ಕ್ರೀಡಾ ಸ್ಪರ್ಧೆಗಳು ನಿಲುಗಡೆಯಾಗಿದ್ದರಿಂದ ಸುಮಾರು 6 ತಿಂಗಳ ಬಳಿಕ ಚೊಚ್ಚಲ ಟೂರ್ನಿ ಆಡುತ್ತಿರುವ ಭಾರತದ ಮುಂಚೂಣಿ ಸ್ಕ್ವಾಶ್ ಆಟಗಾರ್ತಿ ಜೋಶ್ನಾ ಚಿನ್ನಪ್ಪ ಅವರು ಸಿಐಬಿ ಈಜಿಪ್ಶಿಯನ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.
ವಿಶ್ವ ನಂ.11ನೇ ಶ್ರೇಯಾಂಕಿತೆ ಜೋಶ್ನಾ ಚಿನ್ನಪ್ಪ ಅವರು ವಿಶ್ವ ಶ್ರೇಯಾಂಕದಲ್ಲಿ 38ನೇ ಸ್ಥಾನದಲ್ಲಿರುವ ಈಜಿಪ್ಟ್‌ನ ಫರಿದಾ ಮೊಹಮ್ಮದ್ ಅವರನ್ನು ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಆರಂಭಿಕ ಹಂತದಲ್ಲಿ ಹಿನ್ನಡೆ ಅನುಭವಿಸಿದ ಜೋಶ್ನಾ ಆಟ ಮುಂದುವರೆದಂತೆ ಮೇಲುಗೈ ಸಾಧಿಸುತ್ತಾ ಬಂದರು.
ಫರಿದಾ ಎದುರಿನ ಪಂದ್ಯದಲ್ಲಿ ಜೋಶ್ನಾ ಚಿನ್ನಪ್ಪ ಅವರು 11-7, 11-6, 7-11, 10-12, 11-9ರ ಗೆಲುವಿನೊಂದಿಗೆ ಮುಂದಿನ ಹಂತಕ್ಕೆ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ. ಮುಂದಿನ ಸುತ್ತಿನಲ್ಲಿ ಜೋಶ್ನಾ ಅವರು ವಿಶ್ವ ನಂ.2 ಆಟಗಾರ್ತಿ ನೂರ್ ಎಲ್ ಶೆರ್ಬಿನಿ ಅವರನ್ನು ಎದುರಿಸಲಿದ್ದಾರೆ.
ಜೋಶ್ನಾ ವಾರ್ಮ್ ಅಪ್‌ಗಾಗಿ ಕೊಂಚ ಸಮಯ ತೆಗೆದುಕೊಳ್ಳುತ್ತಾರೆ. ವಾರ್ಮ್ ಅಪ್ ಆಗಿದ್ದೇ ಆದರೆ ಮುಂದೆ ಅವರನ್ನು ತಡೆಯೋದು ಕಷ್ಟವಾಗುತ್ತದೆ. ಅವರು ಶ್ರೇಷ್ಠ ವಿಜೇತೆಯ ಹಾಗೆ ಆಡಿದ್ದಾರೆ ಎಂದು ಜೋಶ್ನಾ ಬಗ್ಗೆ ಟೂರ್ನಿಯ ವೆಬ್‌ಸೈಟ್ ಬರೆದುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications