ಮಹಿಳಾ 100 ಮೀ. ಓಟದಲ್ಲಿ ವಿಶ್ವದಾಖಲೆ ಬರೆದ ಎಲೈನ್ ಥಾಂಪ್ಸನ್-ಹೆರಾ

ಕಿಂಗ್‌ಸ್ಟನ್: ಟೋಕಿಯೋ ಒಲಿಂಪಿಕ್ಸ್ ಸ್ಪ್ರಿಂಟ್ ಚಾಂಪಿಯನ್ ಜಮೈಕಾದ ಎಲೈನ್ ಥಾಂಪ್ಸನ್-ಹೆರಾ ಮಹಿಳಾ 100 ಮೀಟರ್ ಓಟದಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ. 100 ಮೀಟರ್ ಓಟದ ಸ್ಪರ್ಧೆಯ ಇತಿಹಾಸದಲ್ಲೇ ಥಾಂಪ್ಸನ್-ಹೆರಾ ಎರಡನೇ ಅತೀ ವೇಗದ ಓಟಗಾರ್ತಿಯೆಂಬ ದಾಖಲೆಗೆ ಪಾತ್ರರಾಗಿದ್ದಾರೆ. ಆಗಸ್ಟ್ 8ರಂದು ಮುಕ್ತಾಯಗೊಂಡ ಟೋಕಿಯೋ ಒಲಿಂಪಿಕ್ಸ್‌ನ 100 ಮೀಟರ್, 200 ಮೀಟರ್ ಓಟದಲ್ಲಿ ಬಂಗಾರದ ಪದಕ ಗೆದ್ದಿದ್ದ ಲೈನ್ ಥಾಂಪ್ಸನ್-ಹೆರಾ ಶನಿವಾರ (ಆಗಸ್ಟ್ 22) ನಡೆದ ಯುಜೀನ್ ಡೈಮಂಡ್ ಲೀಗ್ ಕಾಂಪಿಟಿಶನ್ ಕ್ರೀಡಾಕೂಟದಲ್ಲಿ 10.54 ಸೆಕೆಂಡ್ ವೇಗದಲ್ಲಿ ಓಟ ಮುಗಿಸಿದರು.

ನೀರಜ್ ಚೋಪ್ರಾ ಮುಂದೆ ಆರ್‌ಜೆ ಮಲಿಷ್ಕಾ ಡ್ಯಾನ್ಸ್: ಭಾರೀ ವಿವಾದ!ನೀರಜ್ ಚೋಪ್ರಾ ಮುಂದೆ ಆರ್‌ಜೆ ಮಲಿಷ್ಕಾ ಡ್ಯಾನ್ಸ್: ಭಾರೀ ವಿವಾದ!

100 ಮೀಟರ್ ಓಟದಲ್ಲಿ ಮಹಿಳೆಯರ ವಿಭಾಗದಲ್ಲಿ ಅಮೆರಿಕಾದ ಫ್ಲಾರೆನ್ಸ್ ಗ್ರಿಫಿತ್-ಜಾಯ್ನರ್ 1988ರಲ್ಲಿ ನಿರ್ಮಿಸಿದ್ದ ದಾಖಲೆ ಆಲ್ ಟೈಮ್ ವೇಗದ ಓಟವಾಗಿ ಈಗಲೂ ಉಳಿದುಕೊಂಡಿದೆ. ಆವತ್ತು ಗ್ರಿಫಿತ್-ಜಾಯ್ನರ್ 10.49 ಸೆಕೆಂಡ್ ವೇಗದಲ್ಲಿ 100 ಮೀಟರ್ ಕ್ರಮಿಸಿ ದಾಖಲೆ ನಿರ್ಮಿಸಿದ್ದರು.

"ವೈಯಕ್ತಿಕ ಶ್ರೇಷ್ಠ ದಾಖಲೆಯೊಂದಿಗೆ ಕಮ್‌ಬ್ಯಾಕ್‌ ಮಾಡಿದ್ದು ಅದ್ಭುತ ಖುಷಿ ನೀಡಿದೆ. ಕಳೆದ ಐದು ವರ್ಷಗಳಿಂದಲೂ ನಾನು ಈ ವೇಗದಲ್ಲಿ ಓಡಿಲ್ಲ," ಎಂದು ಥಾಂಪ್ಸನ್-ಹೆರಾ ವರದಿಗಾರರ ಜೊತೆ ಹೇಳಿದ್ದಾರೆ. 29ರ ಹರೆಯದ ಥಾಂಪ್ಸನ್-ಹೆರಾ ಒಲಿಂಪಿಕ್ಸ್‌ನಲ್ಲಿ ಮಿಂಚಿನ ವೇಗದ ಓಟಕ್ಕಾಗಿ ಗಮನ ಸೆಳೆದಿದ್ದರು.

ಈತನಿಂದ ಎಬಿಡಿ, ಮ್ಯಾಕ್ಸ್‌ವೆಲ್ ತಂಡದಲ್ಲಿ ಸ್ಥಾನ ಕಳೆದುಕೊಳ್ಳಬಹುದು ಎಂದ ಆರ್‌ಸಿಬಿ ನೂತನ ಕೋಚ್!ಈತನಿಂದ ಎಬಿಡಿ, ಮ್ಯಾಕ್ಸ್‌ವೆಲ್ ತಂಡದಲ್ಲಿ ಸ್ಥಾನ ಕಳೆದುಕೊಳ್ಳಬಹುದು ಎಂದ ಆರ್‌ಸಿಬಿ ನೂತನ ಕೋಚ್!

ಟೋಕಿಯೋದಲ್ಲೂ ಮಿಂಚಿನ ಓಟ ಓಡಿದ್ದ ಥಾಂಪ್ಸನ್-ಹೆರಾ
ಜುಲೈ 31ರ ಶನಿವಾರ ನಡೆದಿದ್ದ ಟೋಕಿಯೋ ಒಲಿಂಪಿಕ್ಸ್ ಮಹಿಳಾ ವಿಬಾಗದ 100 ಮೀಟರ್ ಓಟ ಫೈನಲ್ ಸ್ಪರ್ಧೆಯಲ್ಲಿ ಎಲೈನ್ ಥಾಂಪ್ಸನ್-ಹೆರಾ ಅವರು 10.61 ಸೆಕೆಂಡ್ ವೇಗದಲ್ಲಿ ಗುರಿ ತಲುಪಿ ಬಂಗಾರ ಗೆದ್ದಿದ್ದರು. ಇದೇ ದೇಶದ ಶೆಲ್ಲಿ-ಆನ್ ಫ್ರೇಸರ್-ಪ್ರೈಸ್ 10.74 ಸೆಕೆಂಡ್ ಮತ್ತು ಶೆರಿಕಾ ಜಾಕ್ಸನ್ 10.76 ಸೆಕೆಂಡ್ ಸಾಧನೆಯೊಂದಿಗೆ ಕ್ರಮವಾಗಿ ಬೆಳ್ಳಿ, ಕಂಚಿನ ಪದಕಗಳನ್ನು ಗೆದ್ದರು. ಮಹಿಳಾ 100 ಮೀಟರ್ ಓಟದಲ್ಲಿ ಚಿನ್ನ ಗೆದ್ದಿರುವ ಜಮೈಕಾದ ಎಲೈನ್ ಥಾಂಪ್ಸನ್-ಹೆರಾ ಅವರು ವಿಶೇಷ ದಾಖಲೆಯನ್ನೂ ನಿರ್ಮಿಸಿದ್ದಾರೆ. ಒಲಿಂಪಿಕ್ಸ್ ಇತಿಹಾಸದಲ್ಲೇ ದಾಖಲಾದ ಎರಡನೇ ಅತೀ ವೇಗದ ಓಟಕ್ಕೆ ಥಾಂಪ್ಸನ್-ಹೆರಾ ಅವರ 10.61 ಸೆಕೆಂಡ್ ಕಾಲಾವಧಿ ಗುರುತಿಸಿಕೊಂಡಿದೆ. ಈ ದಾಖಲೆ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿರುವವರೆಂದರೆ ದಿವಂಗತ ಫ್ಲಾರೆನ್ಸ್ ಗ್ರಿಫಿತ್-ಜಾಯ್ನರ್. ಅಮೆರಿಕಾದವರಾದ ಗ್ರಿಫಿತ್-ಜಾಯ್ನರ್ 1988ರಲ್ಲಿ 10.49 ಸೆಕೆಂಡ್ ಕಾಲಾವಧಿಯಲ್ಲಿ ಮಹಿಳಾ ವಿಭಾಗದ 100 ಮೀಟರ್ ಓಟ ಮುಗಿಸಿದ್ದರು. ಇದು ಸುಲಭಕ್ಕೆ ಮುರಿಯಲಾಗದ ದಾಖಲೆಯಾಗಿ ಇಂದಿಗೂ ಉಳಿದುಕೊಂಡಿದೆ. ಆದರೆ ಈ ದಾಖಲೆ ಬರೆದ ಗ್ರಿಫಿತ್-ಜಾಯ್ನರ್ 21 ಸೆಪ್ಟೆಂಬರ್ 1998ರಲ್ಲಿ ಕೊನೆಯುಸಿರೆಳೆದಿದ್ದರು.

'ಭಾರತ ವಿರುದ್ಧ ತಿರುಗಿಬೀಳಲು ಇಂಗ್ಲೆಂಡ್‌ಗೆ ಸೂಪರ್‌ಮ್ಯಾನ್ ಶಕ್ತಿ ಬೇಕು''ಭಾರತ ವಿರುದ್ಧ ತಿರುಗಿಬೀಳಲು ಇಂಗ್ಲೆಂಡ್‌ಗೆ ಸೂಪರ್‌ಮ್ಯಾನ್ ಶಕ್ತಿ ಬೇಕು'

ಪಾರ್ಟಿ ಮಾಡಿದ್ದ ವೇಗದರಸ ಉಸೇನ್ ಬೋಲ್ಟ್
ಟೋಕಿಯೋ ಒಲಿಂಪಿಕ್ಸ್‌ನ 100 ಮೀಟರ್ ಓಟ ಮಹಿಳಾ ವಿಭಾಗದ ಸ್ಪರ್ಧೆಯಲ್ಲಿ ಜಮೈಕಾ ದೇಶದ ಎಲೈನ್ ಥಾಂಪ್ಸನ್-ಹೆರಾ, ಶೆಲ್ಲಿ-ಆನ್ ಫ್ರೇಸರ್-ಪ್ರೈಸ್, ಶೆರಿಕಾ ಜಾಕ್ಸನ್ ಪದಕ ಗೆದ್ದಿದ್ದು ನೋಡಿ 100 ಮೀಟರ್ ಓಟದಲ್ಲಿ ಜಮೈಕಾದ ಮಾಜಿ ವಿಶ್ವ ಚಾಂಪಿಯನ್ ಉಸೇನ್ ಬೋಲ್ಟ್ ಪಾರ್ಟಿ ಖುಷಿ ಹಂಚಿಕೊಂಡಿದ್ದರು. ಟ್ವೀಟ್ ಮಾಡಿರುವ ಬೋಲ್ಟ್, ತನ್ನ 'ಇಟ್ಸ್‌ ಅ ಪಾರ್ಟಿ' ಸಾಂಗಿನ ವಿಡಿಯೋ ಹಾಕಿಕೊಂಡಿದ್ದರು. ವಿಡಿಯೋದಲ್ಲಿ ಪಾರ್ಟಿ ಸಾಂಗಿಗೆ ಬೋಲ್ಟ್ ಸೇರಿದಂತೆ ಅವರ ಸ್ನೇಹಿತರು ಕುಣಿಯುತ್ತಿರುವ ಚಿತ್ರಣವಿತ್ತು. 'ಇಟ್ಸ್‌ ಅ ಪಾರ್ಟಿ' ವಿಡಿಯೋ ಸಾಂಗ್ ಬೋಲ್ಟ್ ಅವರದ್ದೇ. ಅಂದ್ಹಾಗೆ ಬೋಲ್ಟ್ ಹೆಸರಿನಲ್ಲಿ ಇಂದಿಗೂ 100 ಮೀ. ಓಟದಲ್ಲಿ ವಿಶ್ವ ದಾಖಲೆಯಿದೆ. 2009ರಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೋಲ್ಟ್ 9.58 ಸೆಕೆಂಡ್ ಸಾಧನೆಯೊಂದಿಗೆ 100 ಮೀಟರ್ ಬಂಗಾರ ಗೆದ್ದಿದ್ದರು. ಆ ದಾಖಲೆ ಇಂದಿಗೂ ಮುರಿಯದೆ ಹಾಗೆ ಉಳಿದುಕೊಂಡಿದೆ.

For Quick Alerts
ALLOW NOTIFICATIONS
For Daily Alerts
Story first published: Monday, August 23, 2021, 19:31 [IST]
Other articles published on Aug 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X