ಎಲವೇನಿಲ್ ಸೇರಿ 34 ಶೂಟರ್‌ಗಳು ಟೋಕಿಯೊ ಒಲಿಂಪಿಕ್ಸ್‌ಗೆ ಆಯ್ಕೆ

ನವದೆಹಲಿ, ಜೂನ್ 26: ಎಲವೇನಿಲ್ ವಲಾರಿವನ್ ಮತ್ತು ಅನೀಶ್ ಭಾನ್ವಾಲ ಈ ಇಬ್ಬರು ಭಾರತದ ಉತ್ತಮ ಯುವ ಶೂಟರ್‌ಗಳು ಸೇರಿ ಒಟ್ಟು 34 ಮಂದಿ ಭಾರತೀಯ ಶೂಟರ್‌ಗಳ ಗುಂಪು ಟೋಕಿಯೋ ಒಲಿಂಪಿಕ್ಸ್‌ಗೆ ಅಭ್ಯಾಸ ನಡೆಸಲು ಆಯ್ಕೆಯಾಗಿದೆ.
ದ ನ್ಯಾಷನಲ್ ರೈಫಲ್ ಅಸೋಸಿಯೇಶನ್ ಆಫ್ ಇಂಡಿಯಾ (ಎನ್‌ಆರ್‌ಎಐ) ಮುಂದಿನ ವರ್ಷ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಶೂಟರ್‌ಗಳ ಪಟ್ಟಿಯನ್ನು ಪ್ರಕಟಿಸಿದ್ದು, ಈ ತಂಡ ಪ್ರತ್ಯೇಕವಾಗಿ ಅಭ್ಯಾಸದಲ್ಲಿ ಪಾಲ್ಗೊಳ್ಳಲಿದೆ.
34 ಶೂಟರ್‌ಗಳಲ್ಲಿ 15 ಶೂಟರ್‌ಗಳು ಈಗಾಗಲೇ ಒಲಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡವರು. ಟೋಕಿಯೋ ಒಲಿಂಪಿಕ್ಸ್‌ಗೆ ಅಂತಿಮ ತಂಡದ ಆಯ್ಕೆಗೆ ಮುನ್ನ ಶೂಟರ್‌ಗಳ ಫಾರ್ಮ್ ಮತ್ತು ಒಟ್ಟು ಸ್ಕೋರ್‌ಗಳನ್ನು ಅವಲಂಬಿಸಿ ಒಂದು ಅಥವಾ ಎರಡು ಸ್ಥಾನಗಳನ್ನು ವಿನಿಮಯ ಮಾಡಿಕೊಳ್ಳುವ ಹಕ್ಕನ್ನು ಎನ್‌ಆರ್‌ಎಐ ಹೊಂದಿದೆ.
'ಈ ಶೂಟರ್‌ಗಳು ಪ್ರತ್ಯೇಕವಾಗಿ ತರಬೇತಿ ಮತ್ತು ಕ್ರೀಡಾಕೂಟಕ್ಕೆ ತಯಾರಿ ನಡೆಸಲಿದ್ದಾರೆ. ಸ್ಕೋರ್‌ಗಳು ಮತ್ತು ಶೂಟರ್‌ಗಳ ಸ್ವರೂಪವನ್ನು ಅವಲಂಬಿಸಿ ತಂಡವನ್ನು ಆಯ್ಕೆಮಾಡಬಹುದು, ಒಂದು ಅಥವಾ ಎರಡು ಬದಲಾವಣೆಗಳಾಗಬಹುದು,' ಎಂದು ಎನ್‌ಆರ್‌ಎಐ ಪಿಟಿಐಗೆ ಹೇಳಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications